ದುಬೈ ಮೂಲದ ಅಣ್ಣ-ತಂಗಿ ವಿಶ್ವದ ಅತ್ಯಂತ ಶ್ರೀಮಂತ ಕಂಪನಿಗಳಲ್ಲಿ ಒಂದಾದ ರಿಲಯನ್ಸ್‌ಗೆ ಉಚಿತವಾಗಿ ಜಿಯೋಹಾಟ್‌ಸ್ಟಾರ್ (JioHotstar) ಡೊಮೇನ್‌ಅನ್ನು ಬಿಟ್ಟುಕೊಟ್ಟಿದ್ದಾರೆ.
ಬೆಂಗಳೂರು (ಡಿ.4): ದುಬೈ ಮೂಲದ ಅಣ್ಣ-ತಂಗಿಯಾದ ಜೈನಾಮ್ ಹಾಗೂ ಜೀವಿಕಾ ವಿಶ್ವದ ಶ್ರೀಮಂತ ಕಂಪನಿಗಳಲ್ಲಿ ಒಂದಾದ ರಿಲಯನ್ಸ್‌ನ ಪ್ರತಿಷ್ಠಿತ ಅಂಗಸಂಸ್ಥೆಯಾದ ಜಿಯೋಗೆ 'ಜಿಯೋಹಾಟ್‌ಸ್ಟಾರ್.ಕಾಮ್' (jiohotstar.com) ಡೊಮೈನ್‌ಅನ್ನು ಉಚಿತವಾಗಿ ನೀಡಲು ಒಪ್ಪಿಕೊಂಡಿದ್ದಾರೆ. ಸೇವೆ ಎನ್ನುವ ರೂಪದಲ್ಲಿ ಉಚಿತವಾಗಿ ನಾವು ಈ ಡೊಮೈನ್‌ಅನ್ನು ರಿಲಯನ್ಸ್‌ಗೆ ವರ್ಗಾವಣೆ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ದೆಹಲಿ ಮೂಲದ ಡೆವಲಪರ್ ಬಳಿಯಿಂದ ಅವರು ಈ ಡೊಮೈನ್ ಅನ್ನು ಖರೀದಿ ಮಾಡಿದ್ದರು. 'ಇಂದು ನಾವು ಮಿಶ್ರ ಭಾವನೆಯೊಂದಿಗೆ ಇದನ್ನು ಬರೆಯುತ್ತಿದ್ದೇವೆ. jiohotstar.com ನೊಂದಿಗೆ ನಮ್ಮ ಪ್ರಯಾಣವು ಕೊನೆಗೊಳ್ಳುತ್ತಿದೆ. ದೆಹಲಿಯ ಯುವ ಡೆವಲಪರ್ ಒಬ್ಬರ ಕನಸನ್ನು ಬೆನ್ನಟ್ಟಲು ಸಹಾಯ ಮಾಡುವ ನಿಟ್ಟಿನಲ್ಲಿ ಸರಳವಾಗಿ ಆರಂಭವಾದ ಪ್ರಯಾಣ ಇದಾಗಿತ್ತು' ಎಂದು ವೆಬ್‌ಸೈಟ್‌ನಲ್ಲಿ ಅವರ ಸಂದೇಶ ಹಾಕಲಾಗಿದೆ.
ಏನಿದು ಡೊಮೈನ್ ಹಿಂದಿನ ಕಥೆ: ಈ ಡೊಮೈನ್‌ಅನ್ನು ಅವರು ದೆಹಲಿ ಮೂಲಕದ ಅಪ್ಲಿಕೇಶನರ್ ಡೆವಲಪರ್ ಬಳಿಯಿಂದ ಖರೀದಿ ಮಾಡಿದ್ದರು. ಬರೋಬ್ಬರಿ 8.5 ಬಿಲಿಯನ್ ಯುಎಸ್ ಡಾಲರ್ ಅಥವಾ 70,352 ಕೋಟಿ ರೂಪಾಯಿಗೆ ರಿಲಯನ್ಸ್ ಜಿಯೋ ಹಾಗೂ ಡಿಸ್ನಿ ಹಾಟ್‌ಸ್ಟಾರ್ ಕಂಪನಿಯು ವಿಲೀನವಾಗಲಿದೆ ಅನ್ನೋದು ಕೇವಲ ರೂಮರ್ ಆಗಿದ್ದಾಗಲೇ ಕಳೆದ ವರ್ಷ ಈ ಡೊಮೈನ್‌ಅನ್ನು ರಿಜಿಸ್ಟರ್ ಮಾಡಿಸಿಕೊಂಡಿದ್ದರು.
ವಿಲೀನಗೊಂಡು ಸದ್ಯ ರಿಲಯನ್ಸ್ ಜೆವಿ ಎನ್ನುವ ಹೆಸರಿನಲ್ಲಿರುವ ಕಂಪನಿ ಭಾರತದ ಅತಿದೊಡ್ಡ ಮೀಡಿಯಾ ಹಾಗೂ ಎಂಟರ್‌ಟೇನ್‌ಮೆಂಟ್ ಕಂಪನಿ ಎನಿಸಲಿದ್ದು, ಅಂದಾಜು 26 ಸಾವಿರ ಕೋಟಿ ರೂಪಾಯಿ ಆದಾಯ ತರುವ ನಿರೀಕ್ಷೆ ಇದೆ. ವಿಲೀನವನ್ನು ಔಪಚಾರಿಕವಾಗಿ ಘೋಷಿಸಿದ ನಂತರ, ಡೆವಲಪರ್ ಡೊಮೇನ್‌ಗೆ ಬದಲಾಗಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ತನ್ನ ಉನ್ನತ ವ್ಯಾಸಂಗಕ್ಕೆ ಧನಸಹಾಯ ಮಾಡುವಂತೆ ರಿಲಯನ್ಸ್‌ಗೆ ಹೇಳಿದ್ದರು.
ಆದರೆ, ಇದಕ್ಕೆ ರಿಲಯನ್ಸ್ ನಿರಾಕರಿಸಿದ್ದರಿಂದ ಡೆವಲಪರ್ ಈ ಡೊಮೈನ್‌ಅನ್ನು ದುಬೈ ಮೂಲದ ಅಣ್ಣ-ತಂಗಿಗೆ ಮಾರಾಟ ಮಾಡಿದ್ದರು. ಈ ಹಂತದಲ್ಲಿ ದುಬೈ ಮೂಲದ ಅಣ್ಣ-ತಂಗಿಯನ್ನು ರಿಲಯನ್ಸ್ ಐಪಿ ಕಾನೂನು ಟೀಮ್ ಸಂಪರ್ಕಿಸಿದೆ. ಆದರೆ, ಯಾವುದೇ ಪೇಮೆಂಟ್ ಅಥವಾ ಡೀಲ್ ಇಲ್ಲದೆ ರಿಲಯನ್ಸ್‌ಗೆ ಡೊಮೈನ್ ವರ್ಗಾವಣೆ ಮಾಡಿದ್ದೇವೆ. ಆನ್‌ನೈನ್‌ಲ್ಲಿ ಪ್ರಕಟವಾಗಿರುವಂತೆ ಯಾವುದೇ ದೊಡ್ಡ ಮೊತ್ತ ಸ್ವೀಕರಿಸಿಲ್ಲ ಎಂದಿದ್ದಾರೆ.
ವೆಬ್ ಸಿರೀಸ್ Ranking: ಗ್ರೇಟೆಸ್ಟ್ ಆಫ್ ಆಲ್ ಟೈಮ್, ಓವರ್‌ಹೈಪ್ ಯಾವುದು ಅನ್ನೋದನ್ನ ನೋಡಿ!
ಯಾರಿಂದಲೂ ನಮ್ಮ ಮೇಲೆ ಒತ್ತಡ ಇದ್ದಿರಲಿಲ್ಲ. ಯಾವುದೇ ರೀತಿಯ ಡೀಲ್ ಕೂಡ ಆಗಿಲ್ಲ. ಅವರಿಗೆ ಈ ಡೊಮೈನ್ ಬಹಳ ಉಪಯೋಗವಾಗುತ್ತದೆ ಅನ್ನೋ ಕಾರಣಕ್ಕೆ ಸಂಪೂರ್ಣವಾಗಿ ಇದನ್ನು ಅವರಿಗೆ ವರ್ಗಾಯಿಸಿದ್ದೇವೆ. ಇದನ್ನು ಬಳಸುತ್ತಾರೋ? ಇಲ್ಲವೋ? ಎನ್ನುವುದು ಅವರಿಗೆ ಬಿಟ್ಟ ವಿಚಾರ ಎಂದಿದ್ದಾರೆ. ಮುಂಬೈಗೆ ಭೇಟಿ ನೀಡಿ ಒಪ್ಪಂದಕ್ಕೆ ಸಹಿ ಹಾಕಿದ ನಂತರವೇ ಈ ಡೊಮೈನ್ ವರ್ಗಾವಣೆ ಆಗಲಿದೆ. "ನಾವು ಡ್ರಾಫ್ಟ್‌ಗಾಗಿ ಕಾಯುತ್ತಿದ್ದೇವೆ" ಎಂದು ಅವರು ಹೇಳಿದ್ದಾರೆ.
ಬರೋಬ್ಬರಿ 70 ಸಾವಿರ ಕೋಟಿ ಉದ್ಯಮವಾಗಿ ಹೊರಹೊಮ್ಮಿದ ಜಿಯೋ-ಸ್ಟಾರ್ ಇಂಡಿಯಾ!