ನೀವೇ ಆರಂಭಿಸಬಹುದು TATA ZUDIO, ಬಂಡವಾಳ, ಲಾಭದ ಪ್ರಮಾಣ ಎಷ್ಟು? 

By Mahmad Rafik  |  First Published Dec 4, 2024, 1:17 PM IST

TATA ZUDIO ಫ್ರಾಂಚೈಸಿ ಪಡೆದು ಸ್ವಂತ ವ್ಯಾಪಾರ ಆರಂಭಿಸುವ ಅವಕಾಶ. ಟಾಟಾ ಝುಡಿಯೋದ ಫ್ರಾಂಚೈಸಿ ಪಡೆಯೋದು ಹೇಗೆ? ಸ್ಟೋರ್ ಆರಂಭವಾದ ಎಷ್ಟು ಲಾಭ ನಿಮ್ಮದಾಗುತ್ತೆ ಎಂಬುದರ ಮಾಹಿತಿ ಇಲ್ಲಿದೆ.


ನವದೆಹಲಿ:  ನೀವು ಹೊಸ ಬ್ಯುಸಿನೆಸ್ ಆರಂಭಿಸಬೇಕೆಂದು ಪ್ಲಾನ್ ಮಾಡಿಕೊಂಡಿದ್ದೀರಾ? ಹೊಸ ಮತ್ತು ಸ್ವಂತ ವ್ಯವಹಾರದ ಕನಸು ಕಾಣುತ್ತಿರೋರಿಗೆ ಸುವರ್ಣವಕಾಶವೊಂದು ಬಂದಿದೆ.  ಬಟ್ಟೆ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿರುವ ಜುಡಿಯೋ ಶಾಪಿಂಗ್ ಸ್ಟೋರ್ ನಿಮ್ಮೂರಿನಲ್ಲಿ ಆರಂಭಿಸಬಹುದು. TATA ZUDIOದ ಫ್ರಾಂಚೈಸಿ ಪಡೆದು ನಿಮ್ಮದೇ ಸ್ವಂತ ವ್ಯಾಪಾರ ಆರಂಭಿಸಬಹುದಾಗಿದೆ.  TATA ZUDIOದಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳಿಗೆ ಬೇಕಾಗುವ  ಎಲ್ಲಾ ಮಾದರಿಗಳು ಬಟ್ಟೆಗಳು ಕೈಗಟಕುವ ದರದಲ್ಲಿ ಸಿಗುತ್ತವೆ. 

ಈಗಾಲೇ TATA ZUDIO ಮಾರುಕಟ್ಟೆಯಲ್ಲಿ ತನ್ನದೇ ಬ್ರ್ಯಾಂಡ್ ಕ್ರಿಯೇಟ್ ಮಾಡಿದ್ದರಿಂದ ನಿಮಗೆ ಯಾವುದೇ ಪ್ರಮೋಷನ್ ಮಾಡುವ ಅವಶ್ಯಕತೆ ಇರಲ್ಲ. ಗ್ರಾಹಕರು ಕೇವಲ TATA ZUDIO ಹೆಸರು ಕೇಳಿಯೇ ನಿಮ್ಮ ಔಟ್‌ಲೆಟ್‌ಗೆ ಗ್ರಾಹಕರು ಬರುತ್ತಾರೆ. ಹೊಸ ವ್ಯವಹಾರ ನಿಮ್ಮದಾಗಿದ್ದರೆ ಪ್ರಚಾರಕ್ಕಾಗಿಯೇ ಬಂಡವಾಳದಲ್ಲಿನ ಒಂದು ಭಾಗವನ್ನು  ಎತ್ತಿಡಬೇಕಾಗುತ್ತದೆ. ಈಗಾಗಲೇ ಗ್ರಾಹಕರ ನಂಬಿಕೆಯನ್ನು ಗಳಿಸಿರೋ ಕಂಪನಿಯಾಗಿರುವ ಕಾರಣ ಜಾಹೀರಾತಿನ ಹಣ ಉಳಿತಾಯವಾಗಲಿದೆ.  TATA ZUDIO ಔಟ್‌ಲೆಟ್ ಆರಂಭಿಸಲು ಹೇಗೆ ಫ್ರಾಂಚೈಸಿ ಪಡೆದುಕೊಳ್ಳಬೇಕು ಎಂಬುದರ ಮಾಹಿತಿ ನೋಡೋಣ ಬನ್ನಿ. 

Latest Videos

ಹೇಗೆ ಸಿಗುತ್ತೆ  TATA ZUDIO ಫ್ರಾಂಚೈಸಿ?
*ಫ್ರಾಂಚೈಸ್ ಇಂಡಿಯಾ ವೆಬ್‌ಸೈಟ್ ಪ್ರಕಾರ, TATA ZUDIO ಫ್ರಾಂಚೈಸಿ ಪಡೆಯಲು ಮೊದಲು ನೀವು 10 ಲಕ್ಷ ರೂಪಾಯಿಯ ಒನ್-ಟೈಮ್ ಫ್ರಾಂಚೈಸಿಂಗ್ ಫೀಸ್ ಪಾವತಿಸಬೇಕಾಗುತ್ತದೆ.
*ಔಟ್‌ಲೆಟ್ ಆರಂಭಿಸಲು 2-5 ಕೋಟಿ ರೂಪಾಯಿ ಬಂಡವಾಳ ಬೇಕಾಗುತ್ತದೆ. ಈ ಬಂಡವಾಳದಲ್ಲಿ ಸ್ಟೋರ್ ಸೆಟ್‌ಅಪ್, ಇಂಟಿರೀಯರ್, ಪ್ರಮೋಷನ್ ಸೇರಿದಂತೆ ಎಲ್ಲಾ ಖರ್ಚುಗಳು ಸೇರಿರುತ್ತವೆ. 
*TATA ZUDIO ಔಟ್‌ಲೆಟ್ ಆರಂಭಿಸಲು 6000-8000 ಚದರ ಮೀಟರ್ ಸ್ಥಳ ಬೇಕಾಗುತ್ತದೆ. 
*ZUDIOದ ವ್ಯವಹಾರ  FOCO (Franchise Owned, Company Operated) ಮಾಡೆಲ್ ಹೊಂದಿದೆ.  FOCO ಅಂದ್ರೆ ಸ್ಟೋರ್ ಮಾಲೀಕನ ಬಂಡವಾಳ ಹಾಕಿದ್ರು ಎಲ್ಲದರ ನಿರ್ವಹಣೆಯನ್ನು ಕಂಪನಿಯೇ ಮಾಡಲಾಗಿದೆ. 
*ರಿಟರ್ನ್ ಆನ್ ಇನ್ವೆಸ್ಟಮೆಂಟ್ ಬಗ್ಗೆ ನೋಡೋದಾದ್ರೆ ಹಾಕಿದ ಬಂಡವಾಳ ಲಾಭದೊಂದಿಗೆ ಹಿಂಪಡೆಯಲು 2 ರಿಂದ 3 ವರ್ಷ ಬೇಕಾಗುತ್ತದೆ. ಸಾಮಾನ್ಯವಾಗಿ ಪ್ರತಿ ತಿಂಗಳು ಶೇ.15-20ರಷ್ಟು ಲಾಭ ಸಿಗುತ್ತದೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಲಾಭದ ಪ್ರಮಾಣ ಹೆಚ್ಚಾಗಲಿದೆ. 

ಫ್ರಾಂಚೈಸಿಯ ಲಾಭ
ಝುಡಿಯೋ ಟಾಟಾ ಗ್ರೂಪ್‌ನಿಂದ ನಿರ್ವಹಣೆ ಆಗುತ್ತಿರುವ ಕಾರಣ ಮಾರುಕಟ್ಟೆಯಲ್ಲಿ ವಿಶ್ವಾಸಹರ್ತೆಯನ್ನು ಪಡೆದುಕೊಂಡಿದ್ದರಿಂದ ಗ್ರಾಹಕರನ್ನು ಆಕರ್ಷಿಸಬಹುದು.  ಕಡಿಮೆ ಬೆಲೆಯಲ್ಲಿ ಸ್ಟೈಲಿಶ್ ಮತ್ತು ಟ್ರೆಂಡಿಂಗ್ ಬಟ್ಟೆಗಳು ಸಿಗೋದರಿಂದ ಹೆಚ್ಚು ಬೇಡಿಕೆಯನ್ನು ಹೊಂದಿದೆ.  ಟಾಟಾ ಕಂಪನಿಯಿಂದಲೇ ಸ್ಟೋರ್ ಸೆಟ್‌ಅಪ್ ಮತ್ತು ಜಾಹೀರಾತಿನಲ್ಲಿಯೂ ಸಹಾಯ ಸಿಗಲಿದೆ.  TATA ZUDIO ಫ್ರಾಂಚೈಸಿ ಆರಂಭಿಸಲು ಮೊದಲ ಹಂತದಲ್ಲಿ 60 ರಿಂದ 80 ಲಕ್ಷ ರೂಪಾಯಿ ಬಂಡವಾಳದ ಅವಶ್ಯಕತೆ ಇರುತ್ತದೆ. 

undefined

ಫ್ರಾಂಚೈಸಿಯ ಸವಾಲುಗಳು
ಟಾಟಾ ಝುಡಿಯೋಗೆ ಮಾರುಕಟ್ಟೆಯಲ್ಲಿ  Reliance Trends, Max, Pantaloons ಸೇರಿದಂತೆ ಹಲವು ಬ್ರ್ಯಾಂಡ್‌ಗಳು ಪೈಪೋಟಿಯನ್ನು ನೀಡುತ್ತಿವೆ.  ಈ ಎಲ್ಲಾ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಬೇಕಾಗುತ್ತದೆ. ನಿಮ್ಮ ಸ್ಟೋರ್ ಆರಂಭಿಸುವ ಸ್ಥಳ ಇಲ್ಲಿ ಪ್ರಮುಖವಾಗಿರುತ್ತದೆ.  ಸ್ಥಳೀಯವಾಗಿಯೂ  ನಿಮ್ಮ ಸ್ಟೋರ್ ಬಗ್ಗೆ ಪ್ರಚಾರ ನಡೆಸಬೇಕಾಗುತ್ತದೆ.  ಇದರ ಜೊತೆಗೆ ಪ್ರತಿ ತಿಂಗಳು ಮಾರಾಟವಾದ ಉತ್ಪನ್ನದ ಮೇಲೆ ಶೇ.4-6ರಷ್ಟು ರಾಯಲ್ಟಿಯನ್ನು ಪಾವತಿಸಬೇಕಾಗುತ್ತದೆ.  ಆರಂಭದಲ್ಲಿ ಈ ಮೊತ್ತ ಕಡಿಮೆಯಾಗಿದ್ರೂ ನಂತರ ಈ ಪ್ರಮಾಣ ಏರಿಕೆಯಾಗುವ ಸಾಧ್ಯತೆ ಇರುತ್ತದೆ. 

ಇದನ್ನೂ ಓದಿ: 1500 ರೂಪಾಯಿಯಿಂದ ಆರಂಭಿಸಿ ಇಂದು 3 ಕೋಟಿ ಕಂಪನಿಯ ಒಡತಿಯಾದ ಗೃಹಿಣಿ

ಫ್ರಾಂಚೈಸಿ ಪಡೆಯುವ ಪ್ರಕ್ರಿಯೆ
ಟಾಟಾ ಝುಡಿಯೋ ವೆಬ್‌ಸೈಟ್‌ ಮೂಲಕ ಫ್ರಾಂಚೈಸಿ ತಂಡದ ಸದಸ್ಯರನ್ನು ಸಂಪರ್ಕಿಸಿ,  ಸೂಚಿಸಿದ ಅರ್ಜಿಯನ್ನು ಭರ್ತಿ ಮಾಡಬೇಕು.  ಈ ಅರ್ಜಿ ಸಲ್ಲಿಸಿದ ನಂತರ ಫ್ರಾಂಚೈಸಿ ತಂಡದ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ನೀವು ಸೂಚಿಸಿದ ಸ್ಥಳದಲ್ಲಿ ಮಾರುಕಟ್ಟೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಈ ಪ್ರಕ್ರಿಯೆ ಬಳಿಕ ಕರಾರು ಪತ್ರಕ್ಕೆ ಸಹಿ ಮಾಡಿ ಸಿಕೊಳ್ಳಲಾಗುತ್ತದೆ. 

ಕರಾರು ಪತ್ರದಲ್ಲಿ ವ್ಯಾಪಾರಕ್ಕೆ ಸಂಬಂಧಿಸಿದ ಎಲ್ಲಾ ಷರತ್ತುಗಳಿರುತ್ತದೆ. ಒಪ್ಪಂದದ ಬಳಿಕ ಸ್ಟೋರ್ ಸೆಟ್‌ಅಪ್ ಕೆಲಸ ಆರಂಭವಾಗುತ್ತದೆ. ಕಂಪನಿಯಿಂದಲ ಇಂಟಿರಿಯರ್ ವಿನ್ಯಾಸಕ್ಕೆ ಸಹಾಯ ಸಿಗುತ್ತದೆ. ಔಟ್‌ಲೆಟ್ ಆರಂಭದ ವೇಳೆ ಕಂಪನಿಯ ಮಾರುಕಟ್ಟೆ ತಜ್ಞರಿಂದಲೇ ಜಾಹೀರಾತು ನೀಡಲಾಗುತ್ತದೆ. 

ಇದನ್ನೂ ಓದಿ: ಈ ಯಂತ್ರ ಅಳವಡಿಸಿ ಬ್ಯುಸಿನೆಸ್ ಆರಂಭಿಸಿದ್ರೆ ಪ್ರತಿ ತಿಂಗಳು 2 ಲಕ್ಷ ರೂಪಾಯಿ ಲಾಭ

click me!