ಸ್ಟೀಲ್‌ಮನ್ ಟೆಲಿಕಾಂ ಕಂಪನಿಯ ಷೇರುದಾರರ ಜೇಬು ತುಂಬಿಸಿದ ರಿಲಯನ್ಸ್ ಇಂಡಸ್ಟ್ರಿ

Published : Dec 04, 2024, 03:56 PM ISTUpdated : Dec 05, 2024, 11:32 AM IST
ಸ್ಟೀಲ್‌ಮನ್ ಟೆಲಿಕಾಂ ಕಂಪನಿಯ ಷೇರುದಾರರ ಜೇಬು ತುಂಬಿಸಿದ ರಿಲಯನ್ಸ್ ಇಂಡಸ್ಟ್ರಿ

ಸಾರಾಂಶ

ರಿಲಯನ್ಸ್ ಜಿಯೋದಿಂದ 147 ಕೋಟಿ ರೂಪಾಯಿ ಮೌಲ್ಯದ ಆರ್ಡರ್ ಪಡೆದ ನಂತರ ಸ್ಟೀಲ್‌ಮನ್ ಟೆಲಿಕಾಂ ಕಂಪನಿಯ ಷೇರುಗಳು ಶೇ.20 ರಷ್ಟು ಏರಿಕೆಯಾಗಿದೆ. ಈ ಯೋಜನೆಯು ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ,

ಮುಂಬೈ: ಬುಧವಾರ ಸ್ಟೀಲ್‌ಮನ್ ಟೆಲಿಕಾಂ ಕಂಪನಿಯ ಷೇರುಗಳಲ್ಲಿ ಶೇ.20ರಷ್ಟು ಏರಿಕೆ ಕಂಡು ಬಂದಿದೆ.  ಸ್ಟೀಲ್‌ಮನ್ ಟೆಲಿಕಾಂ ಕಂಪನಿಯ ಷೇರುಗಳ ಬೆಲೆ ಈ ತಿಂಗಳಲ್ಲಿ ಅತ್ಯಧಿಕ 154.80 ರೂಪಾಯಿ ಆಗಿತ್ತು.  ಇದೀಗ ಈ ಕಂಪನಿಗೆ ರಿಲಯನ್ಸ್ ಕಂಪನಿಯಿಂದ  (Reliance Projects & Property Management Services Limited) 147 ಕೋಟಿ ರೂಪಾಯಿ ಮೌಲ್ಯದ ಬಹುದೊಡ್ಡ ರ್ಡರ್ ಲಭ್ಯವಾಗಿದೆ. ಮಂಗಳವಾರ  ಎಕ್ಸ್‌ಚೇಂಜ್ ಫೈಲಿಂಗ್ ನಲ್ಲಿ ಕಂಪನಿಗೆ ಇನ್‌ಡೋರ್ ಸ್ಮಾಲ್ ಸೇಲ್, ಇನ್‌ಡೋರ್ ಮತ್ತು ಔಟ್‌ಡೋರ್ ವೈ-ಫೈ ಹಾಗೂ ಎಂಟರ್‌ಪ್ರೈಸ್ ಯುಬಿಆರ್ ನಿರ್ವಹಣೆಗಾಗಿ ಫ್ರಂಟ್‌ಎಂಡ್ ಮತ್ತು ಬ್ಯಾಕ್ ಎಂಡ್  ಮೇಲುಸ್ತುವಾರಿ ತಂಡಗಳ ನೇಮಕ ಮಾಡಲು 147 ಕೋಟಿ ರೂಪಾಯಿ ಆರ್ಡರ್ ಲಭ್ಯವಾಗಿದೆ ಎಂದು ಹೇಳಿದೆ. ಈ ಪ್ರೊಜೆಕ್ಟ್ ಮೂರು ವರ್ಷಗಳಲ್ಲಿ ಮುಕ್ತಾಯವಾಗಲಿದೆ. ಈ ವಿಷಯ ರಿವೀಲ್ ಆಗುತ್ತಿದ್ದಂತೆ 123.48 ರೂ.ಗಳಿದ್ದ ಷೇರು ಬೆಲೆ 154.80 ರೂಪಾಯಿ ಆಗಿದೆ. 

ಸ್ಟೀಲ್‌ಮನ್ ಟೆಲಿಕಾಂ ದೂರಸಂಪರ್ಕ ಉದ್ಯಮದಲ್ಲಿ ಸೇವಾ ಪೂರೈಕೆದಾರರಾಗಿ ಗುರುತಿಸಲ್ಪಟ್ಟಿದೆ. ಸಂವಹನ ಮೂಲಸೌಕರ್ಯವನ್ನು ನಿರ್ವಹಿಸುವ ಮತ್ತು ವಿಸ್ತರಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಭಾರತೀಯ ಟೆಲಿಕಾಂ ವಲಯ ವಿಶ್ವದಲ್ಲಿ ಎರಡನೇ ಅತಿ ದೊಡ್ಡ ದೂರಸಂಚಾರ ಕ್ಷೇತ್ರವಾಗಿದೆ. ತಂತ್ರಜ್ಞಾನದಲ್ಲಿನ ಪ್ರಗತಿ ಮತ್ತು ಬದಲಾಗುತ್ತಿರುವ ಮಾರುಕಟ್ಟೆ ಬೇಡಿಕೆಗಳಿಂದಾಗಿ ಗಮನಾರ್ಹ ಬದಲಾವಣೆಗೆ ಒಳಗಾಗುತ್ತಿದೆ.

ಇದನ್ನೂ ಓದಿ: 1 ಷೇರು, 4 ವರ್ಷ; 5 ಲಕ್ಷಕ್ಕೆ ಸಿಕ್ಕಿದ್ದು 5 ಕೋಟಿ ರೂಪಾಯಿ, ಐಸ್‌ಕ್ರೀಂ ಮಾರಾಟಗಾರ ಇಂದು ಕೋಟ್ಯಧಿಪತಿ

2023-24ರ ಕೇಂದ್ರ ಬಜೆಟ್‌ನಲ್ಲಿ ದೂರಸಂಚಾರ ವಿಭಾಗಕ್ಕೆ 92,000 ಕೋಟಿ ರೂಪಾಯಿ (11.35 ಬಿಲಿಯನ್ ಅಮೆರಿಕನ್ ಡಾಲರ್) ಮಂಜೂರು ಮಾಡಲಾಗಿದೆ. ಇದರಲ್ಲಿ ಶೇ.38ರಷ್ಟು ಆದಾಯ ವೆಚ್ಚ ಮತ್ತು ಶೇ.62ರಷ್ಟು ಬಂಡವಾಳ ವೆಚ್ಚಕ್ಕಾಗಿ ಮೀಸಲಿಡಲಾಗಿದೆ.  ಸೆಪ್ಟೆಂಬರ್ 2024ರವರೆಗೆ ರಿಲಯನ್ಸ್ ಜಿಯೋ ವೈರ್‌ಲೆಸ್ ಸಬ್‌ಸ್ಕ್ರೈಬರ್ ಬೇಸ್  46.37 ಕೋಟಿ ಆಗಿತ್ತು.  ಭಾರತಿ ಏರ್‌ಟೆಲ್ 38.34 ಕೋಟಿ, ವೊಡಾಫೋನ್ ಐಡಿಯಾ 21.24 ಕೋಟಿ ಮತ್ತು ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ 9.18  ಕೋಟಿ  ವೈರ್‌ಲೆಸ್ ಸಬ್‌ಸ್ಕ್ರೈಬರ್ ಗಳನ್ನು ಹೊಂದಿದೆ.

154.80 ರೂಪಾಯಿ ಸ್ಟೀಲ್‌ಮನ್ ಟೆಲಿಕಾಂ ಕಂಪನಿಯ ದಾಖಲೆಯಾಗಿದೆ. ಜೂನ್‌-2024ರಲ್ಲಿ ಸ್ಟೀಲ್‌ಮನ್ ಟೆಲಿಕಾಂ ಷೇರು ಮೌಲ್ಯ 114.50 ರೂಪಾಯಿ ಆಗಿತ್ತು. ಭಾರತದಲ್ಲಿ ಟೆಲಿಕಾಂ ಯೋಜನೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕಂಪನಿಯು ತನ್ನ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಪರಿಣತಿಯನ್ನು ಬಳಸಿಕೊಳ್ಳುವ ಗುರಿಯನ್ನು ಸ್ಟೀಲ್‌ಮನ್ ಟೆಲಿಕಾಂ ಕಂಪನಿಯ ಹೊಂದಿದೆ, ಆಪರೇಟಿಂಗ್ ಮಾರ್ಜಿನ್‌ಗಳನ್ನು ಹೆಚ್ಚಿಸಲು ಸಮರ್ಥ ಸಂಪನ್ಮೂಲ ನಿಯೋಜನೆಯ ಮೇಲೆ ಕೇಂದ್ರೀಕರಿಸಿ ಕೆಲಸ ಮಾಡುತ್ತಿದೆ.

ಇದನ್ನೂ ಓದಿ: ಒಂದೇ ಒಂದು ಸುದ್ದಿಯಿಂದ ₹72 ಷೇರು ಖರೀದಿಗೆ ಮುಗಿಬಿದ್ದ ಜನರು; ಈ ನಟನ ಮಗಳ ಬಳಿಯಲ್ಲಿವೆ 1  ಕೋಟಿ ಷೇರು

Disclaimer: ಷೇರು/ಮ್ಯೂಚುವಲ್‌ ಫಂಡ್‌ ಹೂಡಿಕೆಯು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತದೆ, ದಯವಿಟ್ಟು ಹೂಡಿಕೆ ಮಾಡುವ ಮೊದಲು ನಿಮ್ಮ ಹೂಡಿಕೆ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ. ಏಷ್ಯಾನೆಟ್‌ ಸುವರ್ಣನ್ಯೂಸ್‌ ಇದಕ್ಕೆ ಜವಾಬ್ದಾರರಾಗಿರುವುದಿಲ್ಲ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ