ಇಂದು ಲಕ್ಷ್ಮೀ ವಾರ: ನಿರ್ಮಲಾ ಸೀತಾರಾಮನ್ ಘೋಷಣೆ ಆಹ್ಲಾದಕರ!

By Web DeskFirst Published Sep 20, 2019, 12:21 PM IST
Highlights

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರ್ಜರಿ ಘೋಷಣೆ| ಆರ್ಥಿಕ ಪುನಶ್ಚೇತನಕ್ಕೆ ಮುನ್ನುಡಿ ಬರೆದ ಮೋದಿ ಸರ್ಕಾರ| ಕಾರ್ಪೊರೇಟ್ ವಲಯಕ್ಕೆ ತೆರಿಗೆ ಕಡಿತ ಘೋಷಣೆ ಮಾಡಿದ ವಿತ್ತ ಸಚಿವೆ| ಗೃಹ ಬಳಕೆಯ ವಸ್ತುಗಳ ಉತ್ಪಾದನಾ ಕಂಪನಿಗಳಿಗೆ ತೆರಿಗೆ ಕಡಿತ| ಶೇ.30ರ ಬದಲು ಶೇ.25.2ಕ್ಕೆ ತೆರಿಗೆ ಕಡಿತ ಮಾಡುವ ನಿರ್ಧಾರ| ಗೃಹ ಬಳಕೆಯ ವಸ್ತುಗಳ ಮೇಲಿನ ಹೂಡಿಕೆಗೆ ಉತ್ತೇಜನದ ಆಶಾವಾದ| ಸುಗ್ರೀವಾಜ್ಞೆ ಮೂಲಕ ಅಗತ್ಯ ವಸ್ತುಗಳ ಮೇಲಿನ ತೆರಿಗೆ ಇಳಿಕೆಗೆ ಕ್ರಮ| ಕೇಂದ್ರದ ನಿರ್ಧಾರದಿಂದ ಬಿಸ್ಕಟ್ ಹಾಗೂ ಆಟೋಮೊಬೈಲ್ ಕ್ಷೇತ್ರಗಳಿಗೆ ಭಾರೀ ರಿಲೀಫ್|

ನವದೆಹಲಿ(ಸೆ.20): ಆರ್ಥಿಕ ಕುಸಿತಕ್ಕೆ ಒಂದೊಂದೇ ಪರಿಹಾರ ಕಂಡುಕೊಳ್ಳುತ್ತಿರುವ ಕೇಂದ್ರ ಸರ್ಕಾರ, ಹಲವು ಹೊಸ ಘೋಷಣೆಗಳ ಮೂಲಕ ಆರ್ಥಿಕ ಪುನಶ್ಚೇತನಕ್ಕೆ ಮುಂದಡಿ ಇಡುತ್ತಿದೆ.

ಅದರಂತೆ ಕಾರ್ಪೊರೇಟ್ ವಲಯಕ್ಕೆ ಭರ್ಜರಿ ಕೊಡುಗೆ ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ತೆರಿಗೆ ಕಡಿತ ಮಾಡುವ ಮೂಲಕ ಪುನಶ್ಚೇತನದ ಮುನ್ನಡಿ ಬರೆದಿದ್ದಾರೆ.

FM Sitharaman: To promote growth, a new provision has been inserted in the income tax act with effect from fiscal year 2019-20, which allows any domestic company to pay income tax at the rate of 22% subject to condition they will not avail any incentive or exemptions pic.twitter.com/6BuykamM1J

— ANI (@ANI)

ಗೃಹ ಬಳಕೆಯ ವಸ್ತುಗಳ ಉತ್ಪಾದನಾ ಕಂಪನಿಗಳಿಗೆ ತೆರಿಗೆ ಕಡಿತಗೊಳಿಸಿರುವ ಕೇಂದ್ರ ಸರ್ಕಾರ, ಈ ಮೊದಲಿನ ಶೇ.30ರ ಬದಲು ಶೇ.25.2ಕ್ಕೆ ತೆರಿಗೆ ಕಡಿತ ಮಾಡುವ ನಿರ್ಧಾರಕ್ಕೆ ಬಂದಿದೆ. ಶೇ.22ರವರೆಗೂ ತೆರಿಗೆ ಕಡಿತದ ಅವಕಾಶ ಒದಗಿಸಲಾಗಿದೆ.

ಗೃಹ ಬಳಕೆಯ ವಸ್ತುಗಳ ಮೇಲಿನ ಹೂಡಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ತೆರಿಗೆ ಕಡಿತ ಮಾಡುವ ನಿರ್ಧಾರಕ್ಕೆ ಬರಲಾಗಿದ್ದು, ಸುಗ್ರೀವಾಜ್ಞೆ ಮೂಲಕ ಅಗತ್ಯ ವಸ್ತುಗಳ ಮೇಲಿನ ತೆರಿಗೆ ಇಳಿಕೆಗೆ ಕ್ರಮ ಕೈಗೊಂಡಿದೆ.

Finance Minister Nirmala Sitharaman: The effective tax rate for these companies shall be 25.17 % inclusive of all surcharge and cess. https://t.co/nFJoh5ypch

— ANI (@ANI)

ಕೇಂದ್ರದ ಈ ನಿರ್ಧಾರದಿಂದ ಮಂದಗತಿಯಲ್ಲಿ ಸಾಗುತ್ತಿರುವ ಬಿಸ್ಕಟ್ ಹಾಗೂ ಆಟೋಮೊಬೈಲ್ ಕ್ಷೇತ್ರಗಳು ವೇಗ ಹೆಚ್ಚಿಸಿಕೊಳ್ಳಲಿವೆ ಎಂದು ಆಶಾವಾದ ವ್ಯಕ್ತಪಡಿಸಲಾಗಿದೆ.

click me!