
ನವದೆಹಲಿ (ಸೆ.20): ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ)ನ ಖಾಲಿ ಇರುವ ಉಪ ಗವರ್ನರ್ ಹುದ್ದೆಗೆ 100 ಅರ್ಜಿಗಳು ಬಂದಿವೆ. ವಿರಳ್ ಆಚಾರ್ಯ ಅವರ ರಾಜೀನಾಮೆಯಿಂದ ತೆರವಾಗಿರುವ ಹುದ್ದೆಗೆ ವಿವಿಧ ಕ್ಷೇತ್ರಗಳಿಂದ 100 ವ್ಯಕ್ತಿಗಳು ಅರ್ಜಿ ಸಲ್ಲಿಸಿದ್ದಾರೆ.
ಕಹಿ ಸುದ್ದಿ: ಮಂಕಾಯ್ತು ಡಾಲರ್ ಎದುರು ರೂಪಾಯಿ ಮೌಲ್ಯದ ಜಿದ್ದಾಜಿದ್ದಿ!
ಅರ್ಹತೆಯುಳ್ಳ ಓರ್ವ ವ್ಯಕ್ತಿಯ ಆಯ್ಕೆಗಾಗಿ ಈ ಅರ್ಜಿಗಳನ್ನು ಉನ್ನತ ಮಟ್ಟದ ಆಯ್ಕೆ ಸಮಿತಿಗೆ ರವಾನಿಸಲಾಗಿದೆ. ಸಚಿವಾಲಯ ಕಾರ್ಯದರ್ಶಿ ನೇತೃತ್ವದ ಹಣಕಾಸು ವಲಯ ನಿಯಂತ್ರಣ ನೇಮಕಾತಿಗಳ ಶೋಧನಾ ಸಮಿತಿ ಉಪಗವರ್ನರ್ ಹುದ್ದೆಗೆ ನೇಮಕಾತಿ ಮಾಡುತ್ತದೆ.
ಸ್ಥಿರಾಸ್ತಿಗೂ ಬರಲಿದೆ ಆಧಾರ್ ರೀತಿ ವಿಶಿಷ್ಟ ಗುರುತಿನ ಸಂಖ್ಯೆ!
ಅರ್ಜಿ ಸಲ್ಲಿಸಿದವರಲ್ಲಿ ಅರ್ಹರನ್ನು ಆಯ್ಕೆ ಮಾಡಬಹುದು ಅಥವಾ ತನಗೆ ಸೂಕ್ತ ಎನ್ನಿಸಿದ ಅರ್ಜಿ ಸಲ್ಲಿಸದ ವ್ಯಕ್ತಿಗಳನ್ನೂ ಆಯ್ಕೆ ಮಾಡುವ ಅಧಿಕಾರ ಈ ಸಮಿತಿಗಿದೆ. ಆರ್‌ಬಿಐ ಉಪ ಗವರ್ನರ್‌ಗೆ ಮಾಸಿಕ 2.25 ಲಕ್ಷ ರು. ಸಂಬಳ ನೀಡಲಾಗುತ್ತದೆ. ಹುದ್ದೆಗೆ ಆಯ್ಕೆ ಬಯಸುವವರು 25 ವರ್ಷ ಸಾರ್ವಜನಿಕ ಆಡಳಿತದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.