ವಿಧಾನಸಭೆಯಲ್ಲಿ ಬಿಗ್ಬಾಸ್ ಗೆದ್ದಿದ್ದು ಗಿಲ್ಲಿ ಅಲ್ಲ ನಿರ್ಮಲಾ ಸೀತಾರಾಮನ್ ಎಂದ ಪ್ರದೀಪ್ ಈಶ್ವರ್

Published : Jan 27, 2026, 09:02 PM ISTUpdated : Jan 27, 2026, 09:06 PM IST
nirmala sitaraman, gilli nata, pradeep Ishwar

ಸಾರಾಂಶ

ವಿಧಾನಸಭೆಯಲ್ಲಿ ಶಾಸಕ ಪ್ರದೀಪ್ ಈಶ್ವರ್, ಬಿಗ್‌ಬಾಸ್ 11ರ ವಿನ್ನರ್ ಗಿಲ್ಲಿ ಅಲ್ಲ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ನಿಜವಾದ ವಿಜೇತರು ಎಂದು ವ್ಯಂಗ್ಯವಾಡಿದ್ದಾರೆ. ಅವರ ಈ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕನ್ನಡ ಬಿಗ್‌ಬಾಸ್ 11 ಅನ್ನು ಗಿಲ್ಲಿ ನಟ ಗೆದ್ದು, ಊರು ತುಂಬಾ ಫೇಮಸ್ ಆಗಿ ಊಹೆಗೂ ಮೀರಿ ಅಭಿಮಾನಿಗಳನ್ನು ಜೊತೆಗೆ ಜನಪ್ರಿಯತೆಯನ್ನು ಗಳಿಸಿರೋದು ಗೊತ್ತೇ ಇದೆ. ಪ್ರತಿ ಮನೆಯ ಪುಟ್ಟ ಮಕ್ಕಳು ಗಿಲ್ಲಿಯನ್ನು ಗುರುತು ಹಿಡಿತಾರೆ. ಹೀಗಿರುವಾಗ ವಿಧಾನಸಭೆಯಲ್ಲಿ ಶಾಸಕ ಪ್ರದೀಪ್ ಈಶ್ವರ್ ಅವರು ಬಿಗ್ಬಾಸ್ ಗೆದ್ದಿರೋದು ಗಿಲ್ಲಿ ಅಲ್ಲ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಎಂದು ವ್ಯಂಗ್ಯವಾಡಿದ್ದಾರೆ. ಹೌದು ವಿಧಾನಸಭೆಯಲ್ಲಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ಗಿಲ್ಲಿ ಗೆದ್ದ 50 ಲಕ್ಷ ಹಣದಲ್ಲಿ 60 ಶೇಕಡಾ ಟ್ಯಾಕ್ಸ್‌ಗೆ ಹೋಗುತ್ತೆ ಹೀಗಾಗಿ ಬಿಗ್ಬಾಸ್ ಗೆದ್ದಿರೋದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಗಿಲ್ಲಿ ಅಲ್ಲ ಎಂದು ಹೇಳುತ್ತಾ ಕೇಂದ್ರದ ಟ್ಯಾಕ್ಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಪ್ರದೀಪ್ ಈಶ್ವರ್ ಮಾತಿಗೆ ಜನ ಪ್ರತಿಕ್ರಿಯಿಸ್ತಿದ್ದಾರೆ.

ವಿಧಾನಸಭೆಯಲ್ಲಿ ಪ್ರದೀಪ್ ಈಶ್ವರ್ ಹೇಳಿದ್ದೇನು?

ಸಭಾಧ್ಯಕ್ಷರೇ ಎಲ್ಲರೂ ಅಂದುಕೊಂಡಿದ್ದಾರೆ ಬಿಗ್ಬಾಸ್ ವಿನ್ನರ್ ಗಿಲ್ಲಿ ಅಂತ. ಆದರೆ ನಾನು ಹೇಳಲು ಬಯಸುವೆ ಬಿಗ್ಬಾಸ್ ವಿನ್ನರ್ ಗಿಲ್ಲಿ ಅಲ್ಲ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಯಾಕೆ ಅಂದ್ರೆ ಕೊಟ್ಟಿರುವ 50 ಲಕ್ಷದಲ್ಲಿ ಶೇಕಡಾ 18 ಜಿಎಸ್‌ಟಿ, ಶೇಕಡಾ 30 ಆದಾಯ ತೆರಿಗೆ, ಶೇಕಡಾ 4 ಸೆಸ್, ಹೀಗೆ ಗೆದ್ದ ಹಣದ ಶೇಕಡಾ 52ರಷ್ಟು ನಿರ್ಮಲಾ ಸೀತಾರಾಮ್ ಅವರಿಗೆ ಹೋಗುವುದರಿಂದ ನಿಜವಾದ ಬಿಗ್ಬಾಸ್ ವಿನ್ನರ್ ನಿರ್ಮಲಾ ಸೀತಾರಾಮನ್ ಅವರು ಎಂದು ನಾನು ಹೇಳುವುದಕ್ಕೆ ಬಯಸುವೆ, ಪಾಪ ಮಂಡ್ಯದ ಹುಡುಗನಿಗೆ ಹೋಗುವುದು ಕೇವಲ ಶೇಕಡಾ 48 ಮಾತ್ರ. ಅಂದ್ರೆ ಈ ತೆರಿಗೆ ನೀತಿ ಹೇಗೆ ಜನಸಾಮಾನ್ಯರಿಗೆ ಸಮಸ್ಯೆ ಮಾಡ್ತಿದೆ ಅಂತ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕಳ್ಳಭಟ್ಟಿ ತಯಾರಿ ಘಟಕದ ಮೇಲೆ ದಾಳಿ ನಡೆಸಿದ ಪೊಲೀಸರಿಗೆ 3 ತಿಂಗಳಮಗುವನ್ನು ನೋಡಿಕೊಳ್ಳುವ ಶಿಕ್ಷೆ..!

ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ವೀಡಿಯೋ ನೋಡಿದ ಒಬ್ಬರು ನಿಮ್ಮದೇ ಸರ್ಕಾರವಿದೆ ರಾಜ್ಯ ಟ್ಯಾಕ್ಸ್‌ ಕಡಿತ ಮಾಡಿಬಿಡಿ ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ತಲೆ ಇಲ್ಲದ ಭಾಷಣ, ಇನ್‌ಕಾಮ್ ಟ್ಯಾಕ್ಸ್ ಎಲ್ಲರಿಗೂ ಬೀಳುತ್ತದೆ. ಗಿಲ್ಲಿ ಏನು ಮೇಲಿಂದ ಬಂದವರೇ ಎಂದು ಪ್ರಶ್ನಿಸಿದ್ದಾರೆ.

ಹಾಗಿದ್ರೆ 50 ಲಕ್ಷ ಗೆದ್ದ ಗಿಲ್ಲಿ ನಟನ ಕೈಗೆ ಸಿಗೋ ಹಣ ಎಷ್ಟು?

ಬಿಗ್ ಬಾಸ್ ಕನ್ನಡ ಸೀಸನ್ 12 ಗೆದ್ದ ಗಿಲ್ಲಿ ನಟ ತಾವು ಗೆದ್ದ ₹50 ಲಕ್ಷ ನಗದು ಬಹುಮಾನದ ಮೇಲೆ ಸರಿಸುಮಾರು 31.2 ಶೇಕಡಾ ತೆರಿಗೆಯನ್ನು ಪಾವತಿಸಬೇಕು, ಇದರ ಪರಿಣಾಮವಾಗಿ ಸುಮಾರು 15.6 ಲಕ್ಷ ರೂಪಾಯಿ ಕಡಿತವಾಗುತ್ತದೆ. ಒಟ್ಟು ಕಡಿತವು ಆದಾಯ ತೆರಿಗೆ ಇಲಾಖೆಯ ಸೆಕ್ಷನ್ 194B ಅಡಿಯಲ್ಲಿ 30% ಆದಾಯ ತೆರಿಗೆ ಮತ್ತು 4% ಸೆಸ್ (ರೂ. 60,000)ಅನ್ನು ಒಳಗೊಂಡಿದೆ. ಹೀಗಾಗಿ ಇದೆಲ್ಲಾ ಕಡಿತಗೊಂಡು ಅವರಿಗೆ ಸುಮಾರು 34.4 ಲಕ್ಷ ರೂ ನಿವ್ವಳ ಮೊತ್ತ ಮನೆಗೆ ತೆಗೆದುಕೊಂಡು ಹೋಗುವುದಕ್ಕೆ ಸಿಗುತ್ತದೆ. ಕಾರುಗಳು ಅಥವಾ ಉಡುಗೊರೆಗಳಂತಹ ಇತರ ಬಹುಮಾನಗಳಿಗೂ ಸಹ ಇದೇ ರೀತಿಯ ತೆರಿಗೆ ನಿಯಮ ಅಳವಡಿಕೆಯಾಗುತ್ತದೆ.

ಇದನ್ನೂ ಓದಿ: ಧರೆಗಿಳಿದ ದೇವಲೋಕ: ಮೈನಸ್ 20 ಡಿಗ್ರಿಯಿಂದಾಗಿ ಹೆಪ್ಪುಗಟ್ಟಿದ ನಯಾಗಾರ ಫಾಲ್ಸ್‌ನ ಮನಮೋಹಕ ದೃಶ್ಯ

 

 

PREV
Read more Articles on
click me!

Recommended Stories

ಬೆಂಗಳೂರಿನ ಸಿಗ್ನಲ್ ಇನ್ನು ಎಷ್ಟು ಹೊತ್ತಿದೆ? ಈಗ ಸ್ವದೇಶಿ ನ್ಯಾವಿಗೇಶನ್ ಆ್ಯಪ್ ಮ್ಯಾಪಲ್ಸ್‌ನಲ್ಲಿ ಲಭ್ಯ
ಬೆಂಗಳೂರಿನ 9 ಮೆಟ್ರೋ ನಿಲ್ದಾಣಗಳಲ್ಲಿ ಉಚಿತ ಪಾರ್ಕಿಂಗ್; ನಿಮ್ಮ ಹತ್ತಿರದ ನಿಲ್ದಾಣ ಯಾವುದಿದೆ ಚೆಕ್ ಮಾಡಿ