
ಬೆಂಗಳೂರಿನ ಟ್ರಾಫಿಕ್ ವಿಶ್ವದಲ್ಲೇ ಪ್ರಸಿದ್ಧಿ ಪಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಈ ವಿಚಾರ ಚರ್ಚೆಯಾಗುತ್ತಲೇ ಇರುತ್ತದೆ. ಟ್ರಾಫಿಕ್ ಸಮಸ್ಯೆಯಿಂದಾಗಿಯೇ ಕೇವಲ 5-10 ನಿಮಿಷದ ಪ್ರಯಾಣಕ್ಕೆ ಅರ್ಧ ಗಂಟೆ ಬೇಕು. ಅರ್ಧ ಗಂಟೆಯ ಪ್ರಯಾಣಕ್ಕೆ ಒಂದು ಗಂಟೆ ಹಿಡಿಯುತ್ತದೆ. ಆದರೆ ಈ ರೀತಿ ಟ್ರಾಫಿಕ್ ದಟ್ಟಣೆ ಆಗೋದಕ್ಕೆ ಕಾರಣ ಯಾರೂ? ಬಹುತೇಕ ಸಂದರ್ಭಗಳಲ್ಲಿ ವಾಹನ ಸವಾರರೇ ಈ ರೀತಿ ಸಂಚಾರ ದಟ್ಟಣೆಗೆ ಕಾರಣರಾಗುತ್ತಾರೆ. ರಾಂಗ್ ರೂಟ್‌ನಲ್ಲಿ ಬರೋದು ಒನ್‌ವೇನಲ್ಲೂ ಟುವೇನಿಂದ ಬರೋದು ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಪಾರ್ಕಿಂಗ್ ಮಾಡಬಾರದ ಜಾಗದಲ್ಲಿ ಪಾರ್ಕಿಂಗ್ ಮಾಡೋದರಿಂದ ಈಗಾಗಲೇ ಉಲ್ಭಣಗೊಂಡ ಟ್ರಾಫಿಕ್ ಮತ್ತಷ್ಟು ಹೆಚ್ಚಾಗುತ್ತದೆ. ಅದೇ ರೀತಿ ಇಲ್ಲೊಂದು ಕಡೆ ರಾಂಗ್ ರೂಟ್‌ನಲ್ಲಿ ಬಂದ ಮಹಿಳೆಯೊಬ್ಬರು ಕಿಲೋ ಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್ ಆಗಲು ಕಾರಣವಾಗಿದ್ದಲ್ಲದೇ ಆಟೋ ಚಾಲಕನೋರ್ವನಿಗೆ ಧಮ್ಕಿ ಹಾಕಿದ್ದಾರೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೀಡಿಯೋ ನೋಡಿದ ಜನ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
@karnatakaportf ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, 2 ನಿಮಿಷ 20 ಸೆಕೆಂಡ್‌ಗಳ ವೀಡಿಯೋದಲ್ಲಿ ಮಹಿಳೆ ರಾಂಗ್ ರೂಟ್‌ನಲ್ಲಿ ಬಂದಿದ್ದು, ಆಟೋ ಚಾಲಕನಿಗೆ ಧಮ್ಕಿ ಹಾಕಿದ್ದಾಳೆ. ಜೊತೆಗೆ ಸಮಾಧಾನ ಮಾಡಿ ಪರಿಸ್ಥಿತಿ ನಿಭಾಯಿಸಲು ಬಂದ ಟ್ರಾಫಿಕ್ ಪೊಲೀಸರ ಜೊತೆಗೂ ವಾಗ್ವಾದಕ್ಕೆ ಇಳಿದಿದ್ದಾಳೆ. ಸಾವಿರಾರು ಜನ ಈ ವೀಡಿಯೋವನ್ನು ವೀಕ್ಷಿಸಿದ್ದು, ನೂರಕ್ಕೂ ಹೆಚ್ಚು ಜನ ಕಾಮೆಂಟ್ ಮಾಡಿದ್ದಾರೆ.
ತಮ್ಮ ಸಣ್ಣ ತಪ್ಪನ್ನು ಒಪ್ಪಿಕೊಳ್ಳಲು ಸಿದ್ಧಳಿಲ್ಲದ ಓರ್ವ ಮಹಿಳೆಯಿಂದ ಒಂದು ಕಿಲೋ ಮೀಟರ್ ಟ್ರಾಫಿಕ್ ಜಾಮ್, 100ಕ್ಕೂ ಹೆಚ್ಚು ಜನರಿಗೆ ತಡವಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಇಲ್ಲಿ ಯಾರದ್ದು ತಪ್ಪು ಎಂದು ಎಕ್ಸ್ ಖಾತೆಯಲ್ಲಿ ವೀಡಿಯೋ ಪೋಸ್ಟ್ ಮಾಡಿ ಪ್ರಶ್ನೆ ಮಾಡಲಾಗಿದೆ. ಮಹಿಳೆ ರಾಂಗ್ ರೂಟ್‌ನಲ್ಲಿ ಬಂದಳು, ಇದರಿಂದ ಆಟೋ ರಿಕ್ಷಾದೊಂದಿಗೆ ಅಪಘಾಥ ಆಯ್ತು. ಆದರೆ ಅದಕ್ಕಿಂತ ಕೆಟ್ಟ ಭಾಗ ಎಂದರೆ ಆಕೆ ತನ್ನ ತಪ್ಪನ್ನು ಅರಿತುಕೊಳ್ಳುವುದು ಬಿಟ್ಟು, ಜಗಳ ಮಾಡಲು, ನಿಂದಿಸಲು ಶುರು ಮಾಡಿದಳು, ಆದರೆ ಆಕೆಯ ತಪ್ಪನ್ನು ಆಕೆ ಒಪ್ಪಿಕೊಳ್ಳಲು ಸಿದ್ಧಳಿರಲಿಲ್ಲ, ತನ್ನ ತಪ್ಪಿಗೆ ಆಕೆ ಕ್ಷಮೆಯನ್ನೂ ಕೇಳಲಿಲ್ಲ, ಜೊತೆಗೆ ಶಾಂತಳಾಗುವುದಕ್ಕೂ ಆಕೆ ಸಿದ್ಧಳಿರಲಿಲ್ಲ, ಟ್ರಾಫಿಕ್ ಪೊಲೀಸರು ಈ ಸ್ಥಿತಿಯನ್ನು ನಿಯಂತ್ರಿಸುವುದಕ್ಕೆ ಪ್ರಯತ್ನಿಸಿದರೂ. ಆಕೆ ಔಟ್ ಆಫ್ ಕಂಟ್ರೋಲ್ ಆಗಿದ್ದಳು. ಆಕೆಯ ವರ್ತನೆಯಿಂದಾಗಿ ಒಂದು ಕಿಲೋ ಮೀಟರ್ ಟ್ರಾಫಿಕ್ ಜಾಮ್ ಆಯ್ತು. ಕೆಲವೊಮ್ಮೆ ರಸ್ತೆಗಳಲ್ಲಿನ ದೊಡ್ಡ ಅಡ್ಡಿಎಂದರೆ ಅದು ಟ್ರಾಫಿಕ್ ಅಲ್ಲ, ಬದಲಾಗಿ ಮನುಷ್ಯರ ದುರಂಕಾರ ಎಂದು ಬರೆಯಲಾಗಿದೆ.
ಬೆಂಗಳೂರಿನ ಕೆಆರ್ ಪುರಂ ಬಳಿ ಈ ಘಟನೆ
ಬೆಂಗಳೂರಿನ ಕೆಆರ್ ಪುರಂ ಬಳಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ ಈ ವೀಡಿಯೋ ನೋಡಿದ ಅನೇಕರು ಹಲವು ಕಾಮೆಂಟ್ ಮಾಡಿದ್ದಾರೆ. ಕೆಆರ್ ಪುರಂ ಟ್ರಾಫಿಕ್ ಪೊಲೀಸರಿಗೆ ವೀಡಿಯೋ ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ವೀಡಿಯೋ ನೋಡಿದ ನಂತರ ಮೊದಲು ಹಾಗೂ ನಂತರದ ವೀಡಿಯೋವನ್ನು ಪೊಲೀಸರು ಹಾಕಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅನೇಕರು ಆಕೆಯ ಲೈಸೆನ್ಸ್ ಬ್ಯಾನ್ ಮಾಡುವಂತೆ ಆಗ್ರಹಿಸಿದ್ದಾರೆ. ಆದರೆ ಆಕೆ ರಾಂಗ್ ರೂಟ್‌ನಲ್ಲಿ ಬಂದಿದ್ದಾರೆ ಎನ್ನಲಾಗುತ್ತಿದ್ದರು. ಆಕೆ ಬರುತ್ತಿದ್ದ ದಿಕ್ಕಿನಿಂದಲೇ ಹಲವು ವಾಹನಗಳು ಬರುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ಇದನ್ನು ನೋಡಿದ ಒಬ್ಬರು ಹೀಗೆ ಕಾಮೆಂಟ್ ಮಾಡಿದ್ದಾರೆ. ಸರಿ, ಅವಳು ತಪ್ಪು ದಾರಿಯಲ್ಲಿ ಬಂದಿದ್ದಾರೆ. ಆದರೆ ಅವಳ ಪಕ್ಕದಲ್ಲಿ ಇರುವ ಇತರ ವಾಹನ ಸವಾರರ ಬಗ್ಗೆ ಏನು ಹೇಳುವಿರಿ? ಅವರು ತಪ್ಪು ದಿಕ್ಕಿನಲ್ಲಿ ಹೋಗಲು ನಿಜವಾಗಿಯೂ ಅವಕಾಶವಿದೆಯೇ? ಅಥವಾ ಅದು ದ್ವಿಮುಖವಿರುವ ಏಕಮುಖ ರಸ್ತೆಯೇ? ಅದು ದ್ವಿಮುಖ ರಸ್ತೆಯಾಗಿದ್ದರೆ, ಆಕೆಯ ಕೃತ್ಯ ದೊಡ್ಡ ಅಪರಾಧವಲ್ಲ, ಅದು ಕೇವಲ ತಪ್ಪು ಸ್ಥಳದಲ್ಲಿ ಓವರ್‌ಟೇಕ್ ಆಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಹಲವರು ಅದು ವನ್ ವೇ ರಸ್ತೆ ಎಂದು ಕಾಮೆಂಟ್ ಮಾಡಿದ್ದಾರೆ. ಹಲವರು ತಪ್ಪಿತಸ್ಥರು ಇದ್ದಾರೆ ಎಂದ ಕಾರಣಕ್ಕೆ ಅವರು ಮಾಡಿದ್ದು ಸರಿ ಎನ್ನಲಾಗದು ಎಂದು ಕಾಮೆಂಟ್ ಮಾಡಿದ್ದಾರೆ. ಈ ಘಟನೆಯ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.
ಇದನ್ನೂ ಓದಿ: ರೈಲಿನಲ್ಲಿ ತಿನಿಸು ಮಾರುತ್ತಿದ್ದ ಯುವಕ ಪರದಾಡುವಂತೆ ಮಾಡಿದ ಪ್ರಯಾಣಿಕ: ವೀಡಿಯೋ ನೋಡಿ ನೆಟ್ಟಿಗರ ಆಕ್ರೋಶ
ಇದನ್ನೂ ಓದಿ: ಹಿಜಾಬ್ ಧರಿಸದೇ ವರ್ಕೌಟ್: ಇರಾನ್ ಟೆಕ್ವಾಂಡೋ ಕೋಚ್ ಬಂಧನ