Asianet Suvarna News Asianet Suvarna News

ಕೋಲಾರದಲ್ಲಿ ಬತ್ತುತ್ತಿವೆ ಕೆರೆ, ಬಾವಿಗಳು: ಬರಪೀಡಿತ ಜಿಲ್ಲೆ ಎಂದು ಘೋಷಿಸುವಂತೆ ರೈತರ ಆಗ್ರಹ

ಕಳೆದ ಬಾರಿ ಮಳೆ ಆದಂತೆ ಈ ಬಾರಿಯೂ ವರುಣ ಕೃಪೆ ತೋರಿಸ್ತಾನೆ ಅಂತಾ ರೈತರು ಕಾದಿದ್ರು. ಒಳ್ಳೆ ಬೆಳೆ ಬೆಳೆದು ಲಾಭದ ನೀರಿಕ್ಷೆಯಲ್ಲಿದ್ರು. ಆದ್ರೆ ಈ ಬಾರಿ ಅನ್ನದಾತನ ನಿರೀಕ್ಷೆ ಹುಸಿಯಾಗಿದೆ.
 

ಮಳೆಗಾಗಿ ಕಾದು ಕುಳಿತ ರೈತ..ವರುಣ ಕೃಪೆ ತೋರದೆ ಒಣಗಿ ಹೋದ ಬೆಳೆಗಳು. ಇದು ಬರದ ನಾಡು ಅನ್ನೋ ಹಣೆ ಪಟ್ಟಿಕಟ್ಟಿಕೊಂಡ ಕೋಲಾರದ ಪರಿಸ್ಥಿತಿ. ಕಳೆದ ಎರಡು ವರ್ಷದಿಂದ ಮಳೆ(Rain) ಅನ್ನದಾತರ ಸಂತೋಷ ಪಡಿಸಿತ್ತು. ಭಾರೀ ಮಳೆಯಿಂದ ಕೆರೆ ಕೋಡಿ ಒಡೆದು ರೈತರ(Farmer) ಮೊಗದಲ್ಲಿ ಮಂದಹಾಸ ಮೂಡಿತ್ತು. ಕೆ.ಸಿ ವ್ಯಾಲಿ ತುಂಬಿ ರೈತರು ಒಳ್ಳೆಯ ಬೆಳೆ ಕೂಡ ಬೆಳೆದಿದ್ರು. ಆದ್ರೆ ಈ ಬಾರಿ ಮಳೆ ಇಲ್ಲದೇ ಆಂತಕದಲ್ಲಿ ಕಾಲ ಕಳೆಯುವ ಪರಿಸ್ಥಿತಿ ಎದುರಾಗಿದೆ. ದಾಖಲೆ ಪ್ರಮಾಣದಲ್ಲಿ ಬಂದಿದ್ದ ವರುಣ ಈ ಬಾರಿ ಕೃಪೆಯೇ ತೋರಿಲ್ಲ. ಬೆಳೆ ನೀರಿಲ್ಲದ ಪರಿಸ್ಥಿತಿ ಒಂದೆಡೆ ಆದ್ರೆ, ಮತ್ತೊಂದೆಡೆ ಜನರು, ಜಾನುವಾರುಗಳಿಗೂ ಕುಡಿಯೋಕು ನೀರಿಲ್ಲದ ಪರಿಸ್ಥಿತಿ ಎದುರಾಗಿದೆ. ಎರಡೂ ವಷ೯ಗಳಿಂದ ತುಂಬಿದ ಅಮ್ಮೇರಬಳ್ಳಿ ಕೆರೆ ಸೇರಿ ಹಲವು ಕೆರೆಗಳು ಬತ್ತಿ ಹೋಗಿವೆ. ಕಳೆದ ಬಾರಿ ಆಗಸ್ಟ್‌ ಹೊತ್ತಿಗೆ 70 ರಷ್ಟು ಬಿತ್ತನೆ ಆಗಿತ್ತು..ಒಳ್ಳೆಯ ಮಳೆ ಆಗಿತ್ತು ಎಂದ ಕೃಷಿ ಇಲಾಖೆ ಅಧಿಕಾರಿ ಈ ಬಾರಿ 17 ರಷ್ಟು ಮಾತ್ರ ಮಳೆ ಆಗಿದ್ದು ಬರದ ಪರಿಸ್ಥಿತಿ ಇದೆ ಅಂದ್ರು.

ಇದನ್ನೂ ವೀಕ್ಷಿಸಿ:  ಮಳೆ ಇಲ್ಲದೇ ಒಣಗಿ ಹೋದ ಮಕ್ಕೆಜೋಳ ಬೆಳೆ! ಲೋನ್‌ ಕಟ್ಟುವಂತೆ ರೈತರಿಗೆ ಬ್ಯಾಂಕ್‌ ನೋಟಿಸ್

Video Top Stories