userpic
user icon
0 Min read

ರಸ್ತೆ ಬದಿ ಎಳನೀರು ಕುಡಿಯೋ ಮುನ್ನ ಹುಷಾರ್‌, ತಾಜಾ ಆಗಿರಲು ಚರಂಡಿ ನೀರೂ ಬಳಸ್ತಾರೆ ನೋಡಿ!

Vendor sprinkles drain water on coconuts in Noida, arrested Vin
coconut

Synopsis

ಎಳನೀರು ಆರೋಗ್ಯಕ್ಕೆ ತುಂಬಾ ಒಳ್ಳೇದು. ಮನೆಯಿಂದ ಹೊರಗಡೆ ಚಾಟ್ಸ್‌, ತಿಂಡಿ ಇನ್ನೇನೋ ತಿನ್ನೋದು ಬೇಡಾಂತ ಹಲವರು ರಸ್ತೆಬದಿಯಲ್ಲಿ ಮಾರೋ ಎಳನೀರು ಕುಡೀತಾರೆ. ನೀವೂ ಅಂಥವರಾ? ಹಾಗಿದ್ರೆ ಆ ಎಳನೀರು ಕೂಡಾ ಕುಡಿಯೋಕೆ ಯೋಗ್ಯವಲ್ಲ ಅನ್ನೋದನ್ನು ತಿಳ್ಕೊಂಡು ಬಿಡಿ.

ತಾಜಾತನ ಕಾಪಾಡಿಕೊಳ್ಳಲು ರಸ್ತೆ ಬದಿ ಮಾರಾಟ ಮಾಡುವ ಹೂವು, ಹಣ್ಣು, ಎಳೆ​ನೀ​ರುಗಳಿಗೆ ನೀರು ಚುಮುಕಿಸುವುದು ಸಾಮಾನ್ಯ. ಆದರೆ ಆ ನೀರು ಚರಂಡಿಯದ್ದಾಗಿದ್ದರೆ.? ಹೌದು.. ಉತ್ತರ ಪ್ರದೇಶದ ನೊಯ್ಡಾದಲ್ಲಿ ಎಳೆ​ನೀ​ರು ವ್ಯಾಪಾರಿಯೊಬ್ಬ ಎಳೆ​ನೀ​ರಿನ ಕಾಯಿಗಳಿಗೆ ಚರಂಡಿಯ ಗಲೀಜು ನೀರು ಚುಮುಕಿಸಿದ್ದಾನೆ. ಈ ವಿಡಿಯೋ ವೈರಲ್‌ ಆಗಿದ್ದು, ಇದೀಗ ವ್ಯಾಪಾರಿ ಸಮೀರ್‌(28) ನನ್ನು ಪೊಲೀಸರು ಬಂಧಿಸಿದ್ದಾರೆ. ಚರಂಡಿ ನೀರು ತೆಗೆದು ಗಡಿಯಲ್ಲಿದ್ದ ತೆಂಗಿಗೆ ಆತ ನೀರು ಚುಮುಕಿಸುತ್ತಿರುವ ವಿಡಿಯೋ ನೋಡಿದರೆ ಯಪ್ಪಾ..! ಎಳೆ​ನೀರೇ ಬೇಡ.. ತೆಂಗಿ​ನ​ಕಾ​ಯಿ ಇಲ್ಲದೆ ಅಡುಗೆ ಮಾಡಿದ್ರಾಯ್ತು ಅನ್ನಿಸದಿರದು.

ಎಳನೀರು ಆರೋಗ್ಯಕ್ಕೆ ತುಂಬಾ ಒಳ್ಳೇದು. ಮನೆಯಿಂದ ಹೊರಗಡೆ ಚಾಟ್ಸ್‌, ತಿಂಡಿ ಇನ್ನೇನೋ ತಿನ್ನೋದು ಬೇಡಾಂತ ಹಲವರು ರಸ್ತೆಬದಿಯಲ್ಲಿ ಮಾರೋ ಎಳನೀರು ಕುಡೀತಾರೆ. ನೀವೂ ಅಂಥವರಾ? ಹಾಗಿದ್ರೆ ಆ ಎಳನೀರು ಕೂಡಾ ಕುಡಿಯೋಕೆ ಯೋಗ್ಯವಲ್ಲ ಅನ್ನೋದನ್ನು ತಿಳ್ಕೊಂಡು ಬಿಡಿ. ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿ, ರಸ್ತೆಬದಿಯ ಚರಂಡಿ ನೀರನ್ನು (Drainage water) ಮಗ್‌ನಲ್ಲಿ ತುಂಬುತ್ತಾನೆ. ನಂತರ ಅದನ್ನು ತನ್ನ ಗಾಡಿಯಲ್ಲಿನ ಎಳನೀರಿನ (Coconut) ಮೇಲೆ ಚಿಮುಕಿಸುತ್ತಾನೆ.

ಬಾಯಿ ಚಪ್ಪರಿಸಿಕೊಂಡು ಭೇಲ್ ತಿನ್ತೀರಾ? ಮಂಡಕ್ಕಿ ಹೇಗ್ ಮಾಡ್ತಾರೆ ನೋಡಿದ್ರೆ ವಾಕರಿಕೆ ಬರೋದು ಖಂಡಿತ!

ವಿಡಿಯೋ ವೈರಲ್ ಆದ ಬಳಿಕ ಪೊಲೀಸರಿಂದ ಕ್ರಮ
ಬಿಸ್ರಖ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಅನಿಲ್ ಕುಮಾರ್ ಅವರ ಪ್ರಕಾರ, ಈ ವಿಡಿಯೋ ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ (Social media) ಕಾಣಿಸಿಕೊಂಡಿದೆ. ಈ ವಿಡಿಯೋವನ್ನು ಶ್ರೀ ರಾಧಾ ಸ್ಕೈ ಗಾರ್ಡನ್ ಎತ್ತರದ ಸಂಕೀರ್ಣದ ಹೊರಗೆ ಚಿತ್ರೀಕರಿಸಲಾಗಿದೆ. ಜಾಗೃತಗೊಂಡು, ಮಾರಾಟಗಾರರನ್ನು (Vendors) ಗುರುತಿಸಿ ಅದೇ ದಿನ ಸ್ಥಳದಲ್ಲಿ ಬಂಧಿಸಲಾಯಿತು. 

ತೆಂಗಿನಕಾಯಿಗೆ ಡ್ರೈನೇಜ್‌ ನೀರನ್ನು ಚಿಮುಕಿಸುತ್ತಿರುವುದನ್ನು ತೋರಿಸುವ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ ಮಾರಾಟಗಾರನನ್ನು ನೋಯ್ಡಾದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು (Officers) ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ವೈರಲ್ ಆದ ಬಳಿಕ ವಿಷಯ ತಿಳಿದು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸ್ಥಳೀಯ ಬಿಸ್ರಖ್ ಪೊಲೀಸ್ ಠಾಣೆಯ ಉಸ್ತುವಾರಿ ಅನಿಲ್ ಕುಮಾರ್ ರಜಪೂತ್ ಹೇಳಿದ್ದಾರೆ. 'ಆರೋಪಿಯನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 270 (ಜೀವಕ್ಕೆ ಅಪಾಯಕಾರಿ ಕಾಯಿಲೆಯ ಸೋಂಕನ್ನು ಹರಡುವ ಮಾರಣಾಂತಿಕ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ' ಎಂದು ಅವರು ಹೇಳಿದರು.

ಪೊಲೀಸರ ಪ್ರಕಾರ, ಆರೋಪಿ ಸಮೀರ್, ಉತ್ತರ ಪ್ರದೇಶದ ಬರೇಲಿ ಜಿಲ್ಲೆಯವನು. ವೀಡಿಯೊದಲ್ಲಿ, ಸಮೀರ್ ಚರಂಡಿಯಿಂದ ನೀರನ್ನು ಸಂಗ್ರಹಿಸಿ ತನ್ನ ಗಾಡಿಯಲ್ಲಿ ಇರಿಸಲಾದ ತೆಂಗಿನಕಾಯಿಗೆ ಚಿಮುಕಿಸುತ್ತಿರುವುದು ಕಂಡುಬಂದಿದೆ. ರಸ್ತೆಬದಿಯಲ್ಲಿ ಆಹಾರ ತಯಾರಿಸುವ ವ್ಯಕ್ತಿ ಚರಂಡಿ ನೀರಿನಲ್ಲಿಯೇ ಪ್ಲೇಟ್‌ಗಳನ್ನು ತೊಳೆಯುವ ವಿಡಿಯೋ ಇತ್ತೀಚಿಗೆ ವೈರಲ್ ಆಗಿತ್ತು. ಅದೇನೆ ಇರ್ಲಿ, ಮನೆಯಿಂದ ಹೊರಗಡೆ ಏನನ್ನಾದರೂ ತಿನ್ನುವ ಮುನ್ನ ಹತ್ತು ಬಾರಿ ಯೋಚಿಸುವುದು ಒಳಿತು. ಇಲ್ಲದಿದ್ರೆ ಆರೋಗ್ಯ (Health) ಹದಗೆಡೋದು ಖಂಡಿತ.

ಪಾನಿಪುರಿ ನೀರಿಗೆ ಮೂತ್ರ ಬೆರೆಸಿದ 'ಅಂಕಲ್': ತೆರೆ ಹಿಂದಿನ ವಿಡಿಯೋ ವೈರಲ್!

Latest Videos