ಲವ್ ಜಿಹಾದ್ನಿಂದ ಬದುಕು ನರಕ: ವಿಡಿಯೋ ಮಾಡಿ ಕಣ್ಣೀರಿಟ್ಟ ಕನ್ನಡದ ನಟಿ ದಿವ್ಯಾ

Synopsis
ಲವ್ ಜಿಹಾದ್ಗೆ ಒಳಗಾಗಿ ಮೋಸ ಹೋದ ಕನ್ನಡದ ನಟಿ ದಿವ್ಯಾ ಶ್ರೀಧರ್ ವಿಡಿಯೋ ಪುನಃ ವೈರಲ್ ಆಗ್ತಿದೆ. ಏನದು ನೋಡಿ!
ಲವ್ ಜಿಹಾದ್ ಎನ್ನುವುದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಲೇ ಇದೆ. ಅದರಲ್ಲಿಯೂ ದಿ ಕೇರಳ ಸ್ಟೋರಿ ಚಿತ್ರ ಬಿಡುಗಡೆಯಾದ ಬಳಿಕ, ಹೇಗೆ ಹಿಂದೂ ಹೆಣ್ಣುಮಕ್ಕಳು ಲವ್ ಜಿಹಾದ್ ಬಲೆಗೆ ಬಿದ್ದು, ಒದ್ದಾಡುತ್ತಾರೆ ಎನ್ನುವುದರ ಅರಿವು ಸ್ಪಷ್ಟವಾಗಿ ಆಗಿದೆ. ಇದರ ಹೊರತಾಗಿಯೂ ಯೌವನದ ಯಾವುದೋ ಆಸೆ, ಆಮಿಷ, ಶ್ರೀಮಂತಿಕೆ, ಆಕಾಂಕ್ಷೆಗಳಿಗೆ ಒಳಗಾಗಿ ಹೆಣ್ಣುಮಕ್ಕಳು ಬಲೆಗೆ ಬೀಳುತ್ತಲೇ ಇದ್ದಾರೆ. ಇದು ಸೆಲೆಬ್ರಿಟಿಗಳನ್ನೂ ಬಿಟ್ಟಿಲ್ಲ. ಇದರ ಹೊರತಾಗಿಯೂ ಕೆಲವು ನಟಿಯರು ಎಲ್ಲರ ವಿರೋಧ ಕಟ್ಟಿಕೊಂಡೇ ಮುಸ್ಲಿಂ ಶ್ರೀಮಂತ ನಟರನ್ನು ಮದುವೆಯಾಗಿ ಸುಖಕರವಾದ ಜೀವನ ಸಾಗಿಸುತ್ತಿದ್ದಾರೆ ಎನ್ನುವುದೂ ಸುಳ್ಳಲ್ಲ. ಎಷ್ಟೇ ಟ್ರೋಲಾದರೂ ಕೂಡ ಅವರು ನೆಮ್ಮದಿಯಿಂದ ಬದುಕು ಕಂಡುಕೊಂಡಿದ್ದಾರೆ. ಕರೀನಾ ಕಪೂರ್ 3ನೇ ಪತ್ನಿಯಾಗಿ ಹೋದರೂ ಇದೀಗ ನೆಮ್ಮದಿಯಿಂದ ಇದ್ದಾರೆ. ಆದರೆ ಈ ನಟಿಯರು ಮದುವೆಯಾದ ನಟರು ತಮ್ಮ ಧರ್ಮವನ್ನು ಮರೆಮಾಚಿರಲಿಲ್ಲ. ಮುಸ್ಲಿಮ್ ಎಂದು ತಿಳಿದೇ ನಟಿಯರು ಅವರನ್ನು ವರಿಸಿದ್ದಾರೆ.
ಆದರೆ, ಕನ್ನಡ ಕಿರುತೆರೆಯಲ್ಲಿ ಮಿಂಚಿರುವ ನಟಿ ದಿವ್ಯಾ ಶ್ರೀಧರ್ ಬದುಕು ಮಾತ್ರ ಈಗ ಹಲವಾರು ಯುವತಿಯರಿಗೆ ಆಗುವ ರೀತಿಯಲ್ಲಿ ಆಗಿದೆ. ಹಿಂದೂ ಹೆಸರು ಇಟ್ಟುಕೊಂಡು ಪ್ರೇಮಿಸಿ, ಮದುವೆಯಾಗಿ ಕೊನೆಗೆ ನರಕಕ್ಕೆ ತಳ್ಳಿರುವ ಬಗ್ಗೆ ಇದಾಗಲೇ ಹಲವಾರು ಮಂದಿ ಮಾತನಾಡಿದಂತೆ, ದಿವ್ಯಾ ಕೂಡ ತಮ್ಮ ನೋವನ್ನು ತೋಡಿಕೊಂಡು ಮಾಧ್ಯಮಗಳ ಮುಂದೆ ಬಂದು ಕಣ್ಣೀರು ಸುರಿಸಿರುವ ವಿಡಿಯೋ ಪುನಃ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 2018 ರಲ್ಲಿ ತೆರೆಕಂಡ `ಹುಚ್ ಹುಡುಗಿ' ಚಿತ್ರದಲ್ಲಿ ದಿವ್ಯಾ ಅಭಿನಯಿಸಿದ್ದಾರೆ. ನಟಿ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿಯೂ ಅನುಭವಿಸಿದ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟದ್ದರು. ಅಂದಹಾಗೆ, ದಿವ್ಯಾ ಅವರು, ಆರ್ನವ್ ಅಲಿಯಾಸ್ ಅಮ್ಜದ್ಖಾನ್ ಅವರನ್ನು ಪ್ರೇಮಿಸಿ ಮದುವೆಯಾಗಿದ್ದರು. ಆದರೆ, ಕೊನೆಗೆ ತಾವು ಅನುಭವಿಸಿದ್ದ ನೋವಿನ ಕುರಿತು ನಟಿ ವಿಡಿಯೋ ಮಾಡಿ ಕಣ್ಣೀರಿಟ್ಟಿದ್ದರು. ತಮಿಳು ಸೀರಿಯಲ್‌ನಲ್ಲಿ ನಟಿಸುವಾಗ ದಿವ್ಯಾ ಶ್ರೀಧರ್‌ಗೆ ಆರ್ನವ್ ಪರಿಚಯ ಆಗಿದೆ. ಐದು ವರ್ಷ ಡೇಟಿಂಗ್ ಮಾಡಿ ನಂತರ ಮದುವೆಯಾದರೂ ಈತನ ನಿಜ ಹೆಸರು ಅರ್ನವ್ ಅಲ್ಲ, ಬದಲಿಗೆ ಅಮ್ಜದ್ ಖಾನ್ (Amzad Khan Mohammed) ಎಂದು ನಟಿಗೆ ತಿಳಿದೇ ಇರಲಿಲ್ಲ! ನಿಜವಾದ ಹೆಸರು ಹೇಳದೆ ಆರ್ನವ್ ಎಂದು ಸುಳ್ಳು ಹೇಳಿದ್ದಾರೆ ಎಂದು ನಂತರ ದಿವ್ಯಾ ಹೇಳಿದ್ದರು. 'ನನಗೂ ಅಮ್ಜದ್ ಖಾನ್‌ಗೂ ಮದುವೆ ಆಗಿದೆ. ಆದರೆ ಎಲ್ಲೂ ಹೇಳಿಕೊಳ್ಳಬಾರದು, ಗೌಪ್ಯವಾಗಿ ಇಡಬೇಕು ಎಂದು ಬೆದರಿಕೆ ಹಾಕಿದ್ದಾರೆ' ಎಂದು ವಿಡಿಯೋದಲ್ಲಿ ದಿವ್ಯಾ ಕಣ್ಣೀರಿಟ್ಟಿದ್ದರು. ಆರ್ನವ್ ನನಗೆ ತುಂಬಾ ಹಿಂಸೆ ಕೊಡುತ್ತಿದ್ದಾರೆ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾದಂತೆ ಎಚ್ಚರಿಕೆ ಕೊಟ್ಟಿದ್ದಾರೆ. ಇದೇ ವಿಚಾರದಲ್ಲಿ ಹಲವು ಬಾರಿ ನನ್ನ ಮೇಲೆ ಹಲ್ಲೆ ಆಗಿದೆ ಎಂದಿದ್ದರು ದಿವ್ಯಾ.
ಪಾಕ್ ವಿರುದ್ಧ ಪ್ರತಿಭಟನೆ ವೇಳೆ ಹೀಗೆ ದೇಶಪ್ರೇಮ ಮೆರೆದ್ರಾ ಕರ್ನಾಟಕದ ಮಹಿಳೆಯರು? ವಿಡಿಯೋ ನೋಡಿ!
'ಮನೆ ತೆಗೆದುಕೊಳ್ಳಲು ನಾನೇ ಹಣಕಾಸಿನ ನೆರವು ನೀಡಿದ್ದೇನೆ. ಮದುವೆಗಿಂತ ಮೊದಲು ಲಾಕ್‌ಡೌನ್ ಟೈಂನಲ್ಲಿ ಅವನಿಗೆ ಏನೂ ಕಲಸ ಇರಲಿಲ್ಲ. ಕೆಲಸವಿಲ್ಲದೇ ಮನೆಯಲ್ಲಿ ಇದ್ದ, ಆಗ 30 ಲಕ್ಷ ಲೋನ್ ಕೊಡಿಸಿ 30 ಸಾವಿರದಂತೆ ಲೋನ್ ಕಟ್ಟಿದ್ದೇನೆ ಅವನಿಗೆ ಕೆಲಸವಿಲ್ಲದಿದ್ದರೂ ನಾನೇ ಸಾಕಿದ್ದೇನೆ ಮಗುವಿನ ತರಹ ಅವರಿಗೆ ಏನೂ ಆಗದಂತೆ ಜೋಪಾನವಾಗಿ ನೋಡಿಕೊಂಡಿದ್ದೀನಿ' ಎಂದು ವಿಡಿಯೋದಲ್ಲಿ ದಿವ್ಯಾ ಮಾತನಾಡಿದ್ದರು. ಅಸಲಿಗೆ, 2014ರಲ್ಲಿ ಶಕ್ತಿ ಧಾರಾವಾಹಿ ಮೂಲಕ ಬಣ್ಣ ಜರ್ನಿ ಆರಂಭಿಸಿದ ಅಮ್ಜದ್ ಖಾನ್ ಮೊಹಮ್ಮದ್ ಅತಿ ಕಡಿಮೆ ಅವಧಿಯಲ್ಲಿ ಜನಪ್ರಿಯತೆ ಪಡೆದುಕೊಂಡವರು. ಈ ಸಮಯದಲ್ಲಿ ದಿವ್ಯಾಳ ಜೊತೆ ಪ್ರೀತಿಯಲ್ಲಿ ಬಿದ್ದು ಆಕೆಗೆ ಜಾತಿ ಮತಾಂತರ ಆಗುವಂತೆ ಒತ್ತಾಯ ಮಾಡಿದ್ದಾರೆ. ಪೋಷಕರಿಗೆ ಪ್ರೀತಿ ವಿಚಾರ ತಿಳಿಸಬೇಕು ಅವರಿಂದ ಮದುವೆ ಅನುಮತಿ ಪಡೆಯಬೇಕು ಎಂದು 2022ರ ಫೆಬ್ರವರಿಯಲ್ಲಿ ದಿವ್ಯಾ ಮುಸ್ಲಿಂಗೆ ಮತಾಂತರ ಆಗಿದ್ದಾರೆ. ಅಂದಹಾಗೆ ದಿವ್ಯಾ ಬೆಂಗಳೂರಿನವರು. (Bangalore) ಕನ್ನಡದ ಆಕಾಶ ದೀಪ, (Akasha Deepa) ಸೇವಂತಿ ಸೇರಿ ಕೆಲವೊಂದು ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ. ನಂತರ ಅವರಿಗೆ ತಮಿಳು ಕಿರುತೆರೆಯಲ್ಲಿ ಅವಕಾಶ ದೊರೆತಿದೆ. ಅಲ್ಲಿ ಅಮ್ಜದ್ ಖಾನ್ ಮೊಹಮ್ಮದ್ ಪರಿಚಯವಾಗಿತ್ತು.
ಕೆಲವು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ ಇಸ್ಲಾಂ ಧರ್ಮದ ಪ್ರಕಾರ ದಿವ್ಯಾ ಮತ್ತು ಅಮ್ಜದ್ ಖಾನ್ ಮೊಹಮ್ಮದ್ ಮದುವೆಯಾಗಿದ್ದಾರೆ. ಮದುವೆಯಿಂದ ವೃತ್ತಿ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಮದುವೆ ವಿಚಾರವನ್ನು ಸೀಕ್ರೆಟ್ ಆಗಿಟ್ಟಿದ್ದಾರೆ. ಈ ನಡುವೆ ಕಿರುತೆರೆಯ ಮತ್ತೊಬ್ಬಳ ಜತೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ದಿವ್ಯಾ ಸತ್ಯ ಬಿಚ್ಚಿಟ್ಟಿದ್ದರು. ನಂತರ, ಇಸ್ಲಾಂ ಧರ್ಮದ ಪ್ರಕಾರ ಮದುವೆ ಆದ ನಂತರ ಹಿಂದು ಸಂಪ್ರದಾಯದಲ್ಲೂ ಮದುವೆ ಆಗಬೇಕು ಎಂದು ದಿವ್ಯಾ ಡಿಮಾಂಡ್ ಮಾಡಿದ ಕಾರಣ ಕಾಂಚಿಪುರಂನಲ್ಲಿರುವ ದೇಗುಲದಲ್ಲಿ ಸರಳವಾಗಿ ಮತ್ತೊಮ್ಮೆ ಮದುವೆಯಾಗಿದ್ದಾರೆ. ನಂತರ ದಿವ್ಯಾ ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ ಅಮ್ಜದ್ ಖಾನ್ ಮೊಹಮ್ಮದ್ ದೂರವಾಗುತ್ತಿರುವುದಾಗಿ ನಟಿ ಹೇಳಿಕೊಂಡಿದ್ದರು. ಅನಾರೋಗ್ಯದಿಂದ ದಿವ್ಯಾ ವಿಡಿಯೋ ಮಾಡುವ ಸಂದರ್ಭದಲ್ಲಿ ಚೆನ್ನೈನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆಗ ಅವರು ತುಂಬು ಗರ್ಭಿಣಿಯಾಗಿದ್ದರು. ಆದರೆ ಕೈಯಲ್ಲಿ ಕಾಸಿಲ್ಲ. ಇದ್ದದ್ದನ್ನೆಲ್ಲಾ ಪತಿಗೆ ಸುರಿದು ಆಗಿದೆ. ಇನ್ನು ಡೆಲವರಿಗೆ ಕೆಲವೇ ದಿನಗಳು ಬಾಕಿ ಇವೆ. ಆದರೆ ಈಗಲೂ ಅನಿವಾರ್ಯವಾಗಿ ನಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ ಎಂದಿದ್ದರು.
ಪಾಕಿಸ್ತಾನದ ಟಿವಿಯಲ್ಲೂ ಸಿದ್ದರಾಮಯ್ಯ ಫೇಮಸ್: ಸುದ್ದಿಯ ವಿಡಿಯೋ ವೈರಲ್- ನಿರೂಪಕಿ ಹೇಳಿದ್ದೇನು ಕೇಳಿ...