userpic
user icon
0 Min read

ಸಂಸದೆಯೇ ದಿ ಕೇರಳ ಸ್ಟೋರಿ ತೋರಿಸಿದ್ರೂ ಬಾರದ ಬುದ್ಧಿ! ಮುಸ್ಲಿಂ ಜೊತೆ ಪರಾರಿಯಾದವಳ ಪಾಡಿದು

BJP MP Pragya Singh Thakur takes girl to The Kerala Story elopes with  Muslim lover suc
BJP MP Pragya Singh Thakur takes 19-year-old girl to watch The Kerala Story, she elopes with her Muslim lover

Synopsis

ಮುಸ್ಲಿಂ ಯುವಕನನ್ನು ಲವ್​ ಮಾಡಿದ್ರೆ ಏನಾಗುತ್ತದೆ ಎಂದು ಖುದ್ದು ಸಂಸದೆ  ಪ್ರಜ್ಞಾ ಸಿಂಗ್ ಠಾಕೂರ್​ ದಿ ಕೇರಳ ಸ್ಟೋರಿ ಚಿತ್ರ ತೋರಿಸಿದ್ರೂ ಬುದ್ಧಿ ಬರದೇ ನರ್ಸಿಂಗ್​ ವಿದ್ಯಾರ್ಥಿನಿ ಓಡಿ ಹೋಗಿ ಸಿಕ್ಕಿಬಿದ್ದಿದ್ದಾಳೆ. 
 

ಹಿಂದೂ ಯುವತಿಯರ ಬ್ರೇನ್​ವಾಷ್​ (Brain wash) ಮಾಡಿ ಅವರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡುವುದು ನಂತರ ಅವರನ್ನು ಐಸಿಸ್​ ಉಗ್ರರ ಲೈಂಗಿಕ ತೃಷೆ ತೀರಿಸಿಕೊಳ್ಳಲು ಬಳಸಿಕೊಳ್ಳುವುದು ಇಲ್ಲವೇ ಮಕ್ಕಳನ್ನು ಹೆರುವ ಯಂತ್ರವನ್ನಾಗಿ ಮಾಡಿ ಮುಸ್ಲಿಂ ಸಂತತಿಯನ್ನು ಹೆಚ್ಚಿಸಿಕೊಳ್ಳುವ ಕರಾಳ ಸತ್ಯ ಘಟನೆಯುಳ್ಳ ದಿ ಕೇರಳ ಸ್ಟೋರಿ ಸಿನಿಮಾ ಇದಾಗಲೇ ಬಾಲಿವುಡ್​ನ ಕೆಲವು ದಾಖಲೆಗಳನ್ನು ಉಡೀಸ್​ ಮಾಡಿದೆ. 25 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ, ಹಲವರ ವಿರೋಧ, ಕೆಲ ರಾಜ್ಯಗಳಲ್ಲಿ ಬ್ಯಾನ್​ ಮಾಡಿದರ ನಡುವೆಯೂ 250 ಕೋಟಿ ರೂಪಾಯಿ ಗಳಿಕೆಯನ್ನು ಮೀರಿ ಭರ್ಜರಿಯಾಗಿ ಮುನ್ನಡೆಯುತ್ತಲೇ ಸಾಗಿದೆ. ಇದೊಂದು ನೈಜ ಘಟನೆ, ಇದರಲ್ಲಿ ಯಾವ ಧರ್ಮವನ್ನೂ ಅವಹೇಳನ ಮಾಡಿಲ್ಲ, ಇರುವ ಸತ್ಯ ಘಟನೆಗಳನ್ನೇ ತೋರಿಸಲಾಗಿದೆ ಎಂದು ಖುದ್ದು ಕೆಲ ಮುಸ್ಲಿಂ ಮುಖಂಡರೇ ಮಾತನಾಡುತ್ತಿದ್ದರೂ ಕಾಂಗ್ರೆಸ್ಸಿಗರು,  ಕೆಲ ಎಡಪಂಥೀಯ ನಟರು  ಸೇರಿದಂತೆ ಕೆಲವರು ಇದೊಂದು ಕಾಲ್ಪನಿಕ ಕಥೆ ಎನ್ನುತ್ತಲೇ ಬಂದಿದ್ದಾರೆ.

ಅದೇನೆ ಇರಲಿ. ಆದರೆ ಈಗ ದಿ ಕೇರಳ ಸ್ಟೋರಿಯನ್ನು (The Kerala story) ಹೋಲುವ ಇನ್ನೊಂದು ಭಯಾನಕ ಘಟನೆ ಬೆಳಕಿಗೆ ಬಂದಿದೆ. ಭೋಪಾಲ್‌ನ 19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ತನ್ನ ಮುಸ್ಲಿಂ ಗೆಳೆಯನೊಂದಿಗೆ ಓಡಿಹೋಗಿರುವುದು ವರದಿಯಾಗಿದೆ. ವಿದ್ಯಾರ್ಥಿನಿಯ ಮದುವೆಗೂ ಮುನ್ನ ಪ್ರೇಮಿ ಯೂಸುಫ್‌ (Yusuf) ನೊಂದಿಗೆ ಓಡಿಹೋಗಿದ್ದಾಳೆ ಈ ವಿದ್ಯಾರ್ಥಿನಿ. ಕುತೂಹಲದ ಸಂಗತಿ ಏನೆಂದರೆ, ಈಕೆ ಮುಸ್ಲಿಂ ಯುವಕನನ್ನು ಲವ್​ ಮಾಡುತ್ತಿರುವುದು ತಿಳಿಯುತ್ತಿದ್ದಂತೆಯೇ ಆಕೆಯ ಕುಟುಂಬಸ್ಥರಿಗೆ ತಮ್ಮ ಮಗಳ ಭವಿಷ್ಯ ಏನಾಗುತ್ತದೆ ಎಂದು ತಿಳಿಯಲು ಹೆಚ್ಚು ಹೊತ್ತು ಬೇಕಾಗಿರಲಿಲ್ಲ. ಇದು ಸುದ್ದಿಯಾಗುತ್ತಲೇ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ತನ್ನ ಪ್ರಿಯಕರನಿಂದ ದೂರವಿರುವಂತೆ ಬಾಲಕಿಗೆ ಸಲಹೆ ನೀಡಿದ್ದರು. ಅಷ್ಟೇ ಅಲ್ಲದೇ ದಿ ಕೇರಳ ಸ್ಟೋರಿ ವೀಕ್ಷಿಸಲು ಯುವತಿಯನ್ನು ಪ್ರಜ್ಞಾ ಸಿಂಗ್ (Prajna Singh Thakur) ಕರೆದುಕೊಂಡು ಕೂಡ ಹೋಗಿದ್ದರು.

ಶೂಟಿಂಗ್ ಸ್ಪಾಟ್​​ಗೆ ಮೊದಲು ನಟಿ ಬಂದ್ರೆ ಏನಾಗತ್ತೆ? ಕೆಟ್ಟ ಅನುಭವ ಬಿಚ್ಚಿಟ್ಟ ಅದಾ ಶರ್ಮಾ

ಇದಾಗಲೇ ಕೆಲವು ಕಡೆಗಳಲ್ಲಿ ದಿ ಕೇರಳ ಸ್ಟೋರಿ ನೋಡಿದ ಹಿಂದೂ ಯುವತಿಯರು ತಾವು ಕೂಡ ಹೀಗೆಯೇ ಮೋಸ ಹೋಗಿರುವ ಅರಿವಾಗುತ್ತಲೇ  ಮುಸ್ಲಿಂ ಯುವಕರ ಜೊತೆ ಫ್ರೆಂಡ್​ಷಿಪ್​ ಕಟ್​ ಮಾಡಿಕೊಂಡಿರುವುದು ವರದಿಯಾಗಿದೆ. ಆದರೆ ಈ ಯುವತಿ ಮಾತ್ರ ಯಾವುದಕ್ಕೂ ಕ್ಯಾರೇ ಮಾಡದೇ ಬ್ರೇನ್​ವಾಷ್​ (Brain Wash) ಮಾಡಿದ್ದ ಪ್ರಿಯಕರನ ಜೊತೆ  ಮದುವೆಗೆ ಸ್ವಲ್ಪ ಮೊದಲು  ಓಡಿ ಹೋಗಿದ್ದಳು. ಭೋಪಾಲ್‌ನ ನಯಾ ಬಸೇರಾ ಪ್ರದೇಶದಲ್ಲಿ ವಾಸಿಸುವ 19 ವರ್ಷದ ಹುಡುಗಿಯ ಕುಟುಂಬದ ಪ್ರಕಾರ, ಯೂಸುಫ್ ಅವರ ನೆರೆಮನೆಯವ. ತಮ್ಮ ಮಗಳ ಬ್ರೇನ್​ವಾಷ್​  ಮಾಡಿರುವ ಆತ, ಮಗಳನ್ನು ಓಡಿಸಿಕೊಂಡು ಹೋಗಿದ್ದಾನೆ ಎಂದು ದೂರು ದಾಖಲಿಸಿದ್ದರು.

 ಭೋಪಾಲ್‌ನ ಕಮಲಾ ನಗರ ಪೊಲೀಸ್ ಠಾಣೆಗೆ (Police Station) ದೂರು ಸಲ್ಲಿಸಿದ್ದರು. ನಂತರ ಮಗಳನ್ನು ಕರೆತರುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದು ಕೂಡ ಇನ್ನೊಂದು ದಿ ಕೇರಳ ಸ್ಟೋರಿ ಆಗಲಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿ ಯೂಸುಫ್, ಹುಡುಗಿಯ ಹೆಸರಿನಲ್ಲಿ ಬ್ಯಾಂಕ್ ಸಾಲ ಸಹ ತೆಗೆದುಕೊಂಡಿರುವುದು ಬೆಳಕಿಗೆ ಬಂದಿದೆ. ಅದರ ಇಎಂಐ (EMI) ಕಟ್ಟುವಂತೆ ಯುವತಿಗೆ ಒತ್ತಾಯಿಸುತ್ತಿದ್ದನಂತೆ. ಅಷ್ಟೇ ಅಲ್ಲದೇ ಪೊಲೀಸ್​ ದಾಖಲೆಯಲ್ಲಿ ಯುಸುಫ್ ವಿರುದ್ಧ ಆರಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿವೆ. ಇಷ್ಟೆಲ್ಲಾ ತನ್ನ ಕಣ್ಣೆದುರೇ ನಡೆದಿದ್ದರೂ ಯುವತಿ ಮಾತ್ರ ಆತನನ್ನು ನಂಬಿದ್ದು, ತಾನು ಸ್ವ ಇಚ್ಛೆಯಿಂದ ಹೋಗಿರುವುದಾಗಿ ಹೇಳಿಕೆ ಕೊಟ್ಟಿದ್ದಾಳೆ. 

The Kerala Story: ಮತಾಂತರದ ರೋಲ್​ ಒಪ್ಪಿದ್ದೇಕೆ ಎಂಬ ಗುಟ್ಟು ಬಿಚ್ಚಿಟ್ಟ 'ಆಸಿಫಾ'
 

Latest Videos