ಹಮಾಸ್‌ನ ಉಗ್ರ ನಾಯಕರನ್ನು ಗುರಿಯಾಗಿಸಿ​ಕೊಂಡು ಇಸ್ರೇಲ್‌ ದಾಳಿ ನಡೆ​ಸಿದೆ. ಆದರೆ ಸಾವುನೋವಿನ ಮಾಹಿತಿ ಲಭಿಸಿಲ್ಲ. ದಾಳಿಯನ್ನು ಕತಾರ್‌ ಖಂಡಿಸಿದ್ದು. ‘ಹಮಾಸ್‌ ಪ್ರಧಾನ ಕಚೇರಿಯ ಮೇಲೆ ಇಸ್ರೇಲ್‌ ನಡೆಸಿರುವುದು ಹೇಡಿತನದ ದಾಳಿ. ಇದು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ’ ಎಂದು ಕಿಡಿಕಾರಿದೆ.

ದೋಹಾ: ಕತಾರ್‌ ರಾಜಧಾನಿ ದೋಹಾದಲ್ಲಿ ಹಮಾಸ್‌ನ ಉಗ್ರ ನಾಯಕರನ್ನು ಗುರಿಯಾಗಿಸಿ​ಕೊಂಡು ಇಸ್ರೇಲ್‌ ಮಂಗಳವಾರ ದಾಳಿ ನಡೆ​ಸಿದೆ. ಆದರೆ ಸಾವುನೋವಿನ ಮಾಹಿತಿ ಲಭಿಸಿಲ್ಲ. ದಾಳಿಯನ್ನು ಕತಾರ್‌ ಖಂಡಿಸಿದ್ದು. ‘ಹಮಾಸ್‌ ಪ್ರಧಾನ ಕಚೇರಿಯ ಮೇಲೆ ಇಸ್ರೇಲ್‌ ನಡೆಸಿರುವುದು ಹೇಡಿತನದ ದಾಳಿ.

ಇದು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ’ ಎಂದು ಕಿಡಿಕಾರಿದೆ.ಇಸ್ರೇಲ್‌ ಭದ್ರತಾ ಸಂಸ್ಥೆ ಶಿನ್‌ಬೆಟ್‌ ನೆರವಿ​ನಿಂದ ಈ ದಾಳಿ ನಡೆದಿದೆ. ಕತಾರ್‌ ಅಮೆರಿಕದ ಸ್ನೇಹಿತ ದೇಶವಾಗಿದ್ದು, ಯುದ್ಧ ಸಂಧಾನದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇಂಥದ್ದರಲ್ಲಿ ನಡೆದ ಈ ದಾಳಿ ಶಾಂತಿ ಸಂಧಾನಕ್ಕೆ ಹಿನ್ನಡೆ ತಂದಿದೆ.

 ಈ ಬಗ್ಗೆ ಇಸ್ರೇಲ್‌ ಪ್ರತಿಕ್ರಿಯಿ ಸಿದ್ದು, ‘ಹಮಾಸ್‌ ಉಗ್ರ ಸಂಘಟನೆ ಸೋಲಿಸಲು ಇಸ್ರೇಲ್‌ ತನ್ನ ಕ್ರಮ ಮುಂದುವರೆಸಿದೆ’ ಎಂದಿದೆ. ವಿಶ್ವಸಂಸ್ಥೆ ಕೂಡ ದಾಳಿ ಖಂಡಿಸಿದ್ದು, ‘ಸಮರ ಬಿಟ್ಟು ಶಾಂತಿಯ ಕಡೆ ಗಮನ ಹರಿಸಿ’ ಎಂದಿದೆ.

ಇತ್ತೀಚೆಗಷ್ಟೇ ಇಸ್ರೇಲ್ ಸೇನಾ ಮುಖ್ಯಸ್ಥ ಇಯಾಲ್ ಜಮೀರ್ ವಿದೇಶದಲ್ಲಿರುವ ಹಮಾಸ್‌ ನಾಯಕರ ಮೇಲೆ ದಾಳಿ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಆ ಬಳಿಕ ವಿದೇಶಾಂಗ ಸಚಿವ ಗಿಡಿಯಾನ್ ಇಸ್ರೇಲ್‌ ಅಮೆರಿಕ ಪ್ರಸ್ತಾಪಿಸಿದ ಗಾಜಾ ಜತೆಗಿನ ಕದನ ವಿರಾಮ ಒಪ್ಪಿಕೊಂಡಿದೆ ಎಂದ ಬೆನ್ನಲ್ಲೇ ಈ ಘಟನೆ ನಡೆದಿದೆ.