ಉತ್ತರ ಇಂಗ್ಲೆಂಡ್‌ನ ವಾಲ್ಸಾಲ್‌ನಲ್ಲಿ 20 ವರ್ಷದ ಭಾರತೀಯ ಮೂಲದ ಯುವತಿಯ ಮೇಲೆ ಭೀಕರ ಅತ್ಯಾ೧ಚಾರ ನಡೆದಿದೆ. ಪೊಲೀಸರು ಇದನ್ನು ಜನಾಂಗೀಯ ಪ್ರೇರಿತ ದಾಳಿ ಎಂದು ಪರಿಗಣಿಸಿದ್ದು, ಆರೋಪಿಯ ಪತ್ತೆಗಾಗಿ ಸಿಸಿಟಿವಿ ದೃಶ್ಯಗಳನ್ನು ಬಿಡುಗಡೆ ಮಾಡಿ ತನಿಖೆ ನಡೆಸುತ್ತಿದ್ದಾರೆ.
ಉತ್ತರ ಇಂಗ್ಲೆಂಡ್‌ನ ವಾಲ್ಸಾಲ್‌ನಲ್ಲಿ 20 ವರ್ಷದ ಭಾರತೀಯ ಮೂಲದ ಯುವತಿಯ ಮೇಲೆ ನಡೆದ ಭೀಕರ ಅತ್ಯಾ೧ಚಾರ ಪ್ರಕರಣ ಆ ಇಂಗ್ಲೆಂಡ್‌ನಲ್ಲಿ ಭಾರತೀಯ ನಿವಾಸಿಗಳಿಗೆ ಆತಂಕ ಮೂಡಿಸಿದೆ. ಶನಿವಾರ ಸಂಜೆ (ಅಕ್ಟೋಬರ್ 25) ಪಾರ್ಕ್ ಹಾಲ್ ಪ್ರದೇಶದ ಬೀದಿಯಲ್ಲಿ ಈ ಘಟನೆ ನಡೆದಿದ್ದು, ವೆಸ್ಟ್ ಮಿಡ್‌ಲ್ಯಾಂಡ್ಸ್ ಪೊಲೀಸರು ತಕ್ಷಣ ಸ್ಥಳಕ್ಕೆ ತೆರಳಿ ತನಿಖೆ ಆರಂಭಿಸಿದ್ದಾರೆ. ಆರೋಪಿಯನ್ನು ಗುರುತಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿರುವ ಪೊಲೀಸರು, ಈ ದಾಳಿಯನ್ನು ಜನಾಂಗೀಯ ಪ್ರೇರಿತ ಅಪರಾಧ ಎಂದು ಪರಿಗಣಿಸಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾದ ಕೃತ್ಯ:
ಪೊಲೀಸ್ ವರದಿಯಂತೆ, ಆರೋಪಿ 30 ವರ್ಷ ವಯಸ್ಸಿನ ಬಿಳಿಯ ಚರ್ಮದ ಬ್ರಿಟಿಷ್ ಪ್ರಜೆಯಾಗಿದ್ದು, ಸಣ್ಣ ಕೂದಲು ಮತ್ತು ದಾಳಿಯ ಸಮಯದಲ್ಲಿ ಕಪ್ಪು ಬಟ್ಟೆ ಧರಿಸಿದ್ದಾನೆ. ಸಿಸಿಟಿವಿ ದೃಶ್ಯಗಳಲ್ಲಿ ಆತ ಸ್ಪಷ್ಟವಾಗಿ ಕಂಡುಬಂದಿದ್ದು, ಆ ಪ್ರದೇಶದಲ್ಲಿ ಅನುಮಾನಾಸ್ಪದ ಚಟುವಟಿಕೆಗಳನ್ನು ಗಮನಿಸಿದ ಯಾರಾದರೂ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಒತ್ತಾಯಿಸಿ ಮನವಿ ಮಾಡಿದ್ದಾರೆ. ಪ್ರಕರಣದ ತನಿಖಾಧಿಕಾರಿ ಡಿಎಸ್ ರೋನನ್ ಟೈರರ್ ಮಾತನಾಡಿ, 'ಇದು ಯುವತಿಯ ಮೇಲೆ ನಡೆದ ಅತ್ಯಂತ ಭೀಕರ ದಾಳಿ. ಆರೋಪಿಯನ್ನು ಬಂಧಿಸಲು ನಾವು ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ. ಸಾಕ್ಷ್ಯಗಳ ಸಂಗ್ರಹ ಮತ್ತು ಶೋಧಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲೇ ಅವನನ್ನು ವಶಕ್ಕೆ ಪಡೆಯಲಿದ್ದೇವೆ ಎಂದು ವಿಶ್ವಾಸವ್ಯಕ್ತಪಡಿಸಿದ್ದಾರೆ.
ಮನೆಗೆ ನುಗ್ಗಿ ಕೃತ್ಯ:
ಸಿಖ್ ಫೆಡರೇಶನ್ ಯುಕೆ ವರದಿಯಂತೆ, ಸಂತ್ರಸ್ತೆ ಪಂಜಾಬಿ ಮೂಲದ ಭಾರತೀಯ ಮಹಿಳೆಯಾಗಿದ್ದು, ಆರೋಪಿ ಆಕೆಯ ಮನೆಯ ಬಾಗಿಲು ಒಡೆದು ಒಳನುಗ್ಗಿ ಕೃತ್ಯ ಎಸಗಿದ್ದಾನೆ. ಈ ಘಟನೆಯಿಂದ ಸ್ಥಳೀಯ ಸಮುದಾಯದಲ್ಲಿ ಭಯ ಮತ್ತು ಆತಂಕ ವ್ಯಾಪಿಸಿದ್ದು, ವಾಲ್ಸಾಲ್ ಪೊಲೀಸ್ ಮುಖ್ಯ ಸೂಪರಿಂಟೆಂಡೆಂಟ್ ಫಿಲ್ ಡಾಲ್ಬಿ 'ಸಮುದಾಯದಲ್ಲಿ ಉಂಟಾಗಿರುವ ಆತಂಕವನ್ನು ಗಮನಿಸಿ ಆ ಪ್ರದೇಶದಲ್ಲಿ ಪೊಲೀಸ್ ಗಸ್ತ್ ಹೆಚ್ಚಿಸಲಾಗುವುದು' ಎಂದು ಭರವಸೆ ನೀಡಿದ್ದಾರೆ.
ಹಿಂದಿನ ಪ್ರಕರಣದೊಂದಿಗೆ ಸಂಬಂಧವಿಲ್ಲ:
ಕೇವಲ ಕೆಲವು ವಾರಗಳ ಹಿಂದೆ ಹತ್ತಿರದ ಓಲ್ಡ್‌ಬರಿ ಪ್ರದೇಶದಲ್ಲಿ ಬ್ರಿಟಿಷ್ ಸಿಖ್ ಮಹಿಳೆಯ ಮೇಲೆ ಜನಾಂಗೀಯ ಕಾರಣದಿಂದಾಗಿ ಅತ್ಯಾ೧ಚಾರ ನಡೆದಿತ್ತು. ಆದರೆ ಈ ಎರಡೂ ಪ್ರಕರಣಗಳ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಡಿಎಸ್ ಟೈರರ್ ಸ್ಪಷ್ಟಪಡಿಸಿದ್ದಾರೆ. ಆದರೂ ದಕ್ಷಿಣ ಏಷ್ಯನ್ ಮೂಲದ ಮಹಿಳೆಯರ ಮೇಲೆ ಸತತ ದಾಳಿಗಳು ಆತಂಕ ಹೆಚ್ಚಿಸಿವೆ.ಪೊಲೀಸರು ಸಾರ್ವಜನಿಕರ ಸಹಕಾರಕ್ಕಾಗಿ ಕಾಯುತ್ತಿದ್ದಾರೆ. ಯಾರಾದರೂ ಆ ಪ್ರದೇಶದಲ್ಲಿ ಅನುಮಾನಾಸ್ಪದ ವ್ಯಕ್ತಿಯನ್ನು ಕಂಡಿದ್ದರೆ ಅಥವಾ ಸಿಸಿಟಿವಿ ದೃಶ್ಯಗಳನ್ನು ಹೊಂದಿದ್ದರೆ ತಕ್ಷಣ ಮಾಹಿತಿ ನೀಡುವಂತೆ ಕೋರಿದ್ದಾರೆ. ಈ ಘಟನೆ ಭಾರತೀಯ ಸಮುದಾಯದ ಭದ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
