ಫ್ರಾನ್ಸ್‌ನಲ್ಲಿ ರಾಜಕೀಯ ಕೋಲಾಹಲ ಸೃಷ್ಟಿಯಾಗಿದೆ. ಫ್ರಾನ್ಸ್ ಸಂಸತ್ತಿನಲ್ಲಿ ನಡೆದ ವಿಶ್ವಾಸ ಮತಯಾಚನೆಯಲ್ಲಿ ಫ್ರಾನ್ಸ್ ಪ್ರಧಾನಿ ಫ್ರಾಂಕೋಯಿಸ್ ಬೈರೋ ಹಿನ್ನಡೆ ಅನುಭವಿಸಿದ್ದಾರೆ. ವಿಶ್ವಾಸ ಮತಕಳೆದುಕೊಂಡ ಹಿನ್ನಲೆಯಲ್ಲಿ ಫ್ರಾನ್ಸ್ ಸರ್ಕಾರ ಪತನಗೊಂಡಿದೆ.
ಫ್ರಾನ್ಸ್ (ಸೆ.08) ನೇಪಾಳದಲ್ಲಿ ಸರ್ಕಾರವೇ ಅಲುಗಾಡುತ್ತಿದೆ. ಇತ್ತ ಫ್ರಾನ್ಸ್‌ನಲ್ಲಿ ಸರ್ಕಾರ ಪತನಗೊಂಡಿದೆ. ಫ್ರಾನ್ಸ್ ಪ್ರಧಾನಿ ಫ್ರಾಂಕೋಯಿಸ್ ಬೈರೋ ವಿಶ್ವಾಸಮತ ಕಳೆದುಕೊಂಡ ಹಿನ್ನಲೆಯಲ್ಲಿ ಸರ್ಕಾರ ಪತನಗೊಂಡಿದೆ. ಫ್ರಧಾನಿ ಫ್ರಾಂಕೋಯಿಸ್ ಬೈರೂ ಸರ್ಕಾರದ ವಿರುದ್ಧ ಸಂಸದರು ಅವಿಶ್ವಾಸ ಮತ ಚಲಾಯಿಸಿದ್ದಾರೆ. ಇದರ ಪರಿಣಾಮ ಸರ್ಕಾರ ಪತನಗೊಂಡಿದ್ದು ಮಾತ್ರವಲ್ಲ, ಫ್ರಾನ್ಸ್ ಅದ್ಯಕ್ಷ ಇಮ್ಯಾನ್ಯುಯೆಲ್ ಮಾರ್ಕೋನ್‌ಗೆ ತೀವ್ರ ಸಂಕಷ್ಟ ಎದುರಾಗಿದೆ. ಕಾರಣ ಕಳೆದ 12 ತಿಂಗಳಲ್ಲಿ ಇದೀಗ ಫ್ರಾನ್ಸ್ 4ನೇ ಪ್ರಧಾನಿಯನ್ನು ನೋಡಲಿದೆ. ಕಳೆದ ಪ್ರಧಾನಿ ಮಿಚೆಲ್ ಬಾರ್ನಿಯರ್ ಕೂಡ ಅವಿಶ್ವಾಸ ಮತದಿಂದ ಪ್ರಧಾನಿ ಸ್ಥಾನದಿಂದ ಕೆಳಗಿಳಿದಿದ್ದರು.
8 ತಿಂಗಳಲ್ಲಿ ಸರ್ಕಾರ ಪತನ
ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮಾರ್ಕೋನ್, ಫ್ರಾನ್ಸ್ ಪ್ರಧಾನಿಯಾಗಿ ಫ್ರಾಂಕೋಯಿಸ್ ಆಯ್ಕೆ ಮಾಡಿದ್ದರು. ಇದೀಗ 8 ತಿಂಗಳಲ್ಲಿ ಫ್ರಾಂಕೋಯಿಸ್ ವಿರುದ್ದ ಅವಿಶ್ವಾಸ ಮತ ಚಲಾವಣೆಯಾಗಿದೆ. 364 ಸದಸ್ಯರ ಬಲದಲ್ಲಿ ಫ್ರಾಂಕೋಯಿಸ್ 194 ಅವಿಸ್ವಾಸ ಮತ ಪಡೆದಿದ್ದಾರೆ.
ಫ್ರಾನ್ಸ್‌ನಿಂದ 26 ರಫೇಲ್ ಮರೀನ್ ಫೈಟರ್ ಜೆಟ್ ಖರೀದಿ, 63 ಸಾವಿರ ಕೋಟಿ ಡೀಲ್‌ಗೆ ಒಪ್ಪಿದ ಭಾರತ!
ಫ್ರಾನ್ಸ್ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಸರ್ಕಾರದ ಸಚಿವರು, ಸಂಸದರೇ ಫ್ರಾಂಕೋಯಿಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇತ್ತ ಅರ್ಥವ್ಯವಸ್ಥೆ ಸರಿಯಾಗಿ ಮುನ್ನಡಸದ ಫ್ರಾಂಕೋಯಿಸ್ ವಿರುದ್ದ ಅವಿಶ್ವಾಸ ನಿರ್ಣಯಕ್ಕೆ ಮಂದಾಗಿದ್ದರು. ಇದರ ಬೆನ್ನಲ್ಲೇ ಫ್ರಾಂಕೋಯಿಸ್ ವಿಶ್ವಾಸ ಮತಯಾಚನೆ ಮಾಡಿದ್ದರು. ಆದರೆ ಫಲಿತಾಂಶ ಫ್ರಾಂಕೋಯಿಸ್ ಪರವಾಗಿರಲಿಲ್ಲ. ವಿಶ್ವಾ ಮತ ಯಾಚನೆ ವೇಳೆ ಫ್ರಾಂಕೋಯಿಸ್ ಭಾಷಣ ಮಾಡಿದ್ದರು. ಈ ವೇಳೆ ಫ್ರಾನ್ಸ್ ಅಭಿವೃದ್ಧಿ, ಫ್ರಾನ್ಸ್ ಕಟ್ಟಿಬೆಳೆಸಲು ನಿಮ್ಮೆಲ್ಲರ ಸಹಕಾರ ಬೇಕಿದೆ ಎಂದು ಮನವಿ ಮಾಡಿದ್ದರು. ಫ್ರಾನ್ಸ್ ಸಾಲ ಮುಕ್ತ ಮಾಡಲು ಹಾಗೂ ಆರ್ಥಿಕತೆಯನ್ನು ಸರಿದಾರಿಗೆ ತರಲು ಎಲ್ಲರೂ ಸಹಾಕರ ನೀಡಬೇಕು ಎಂದು ಮತಯಾಚನೆ ಮಾಡಿದ್ದರು. ಆದರೆ ಹೆಚ್ಚಿನ ಮತಗಳು ವಿರುದ್ಧವಾಗಿತ್ತು.
