ಭ್ರಷ್ಟಾಚಾರ ತಡೆಯುವುದು ಧನಲೋಭಿ ಮನುಷ್ಯರಿಂದ ಸಾಧ್ಯವಿಲ್ಲವೆಂದೋ ಏನೋ, ಅಲ್ಬೇನಿಯಾದಲ್ಲಿ ಆ ಕೆಲಸಕ್ಕೆ ಎಐ ಸಚಿವೆಯನ್ನು ನೇಮಿಸಲಾಗಿದೆ.
ತಿರಾನೆ: ಭ್ರಷ್ಟಾಚಾರ ತಡೆಯುವುದು ಧನಲೋಭಿ ಮನುಷ್ಯರಿಂದ ಸಾಧ್ಯವಿಲ್ಲವೆಂದೋ ಏನೋ, ಅಲ್ಬೇನಿಯಾದಲ್ಲಿ ಆ ಕೆಲಸಕ್ಕೆ ಎಐ ಸಚಿವೆಯನ್ನು ನೇಮಿಸಲಾಗಿದೆ. ಈ ಮೂಲಕ ಸರ್ಕಾರಕ್ಕೆ ಎಐ ಸದಸ್ಯರನ್ನು ತಂದ ಮೊದಲ ದೇಶ ಎನಿಸಿಕೊಂಡಿದೆ.
ಎಐ ಸಚಿವೆ ‘ಡಿಯೆಲ್ಲಾ’ಳ ಸೇರ್ಪಡೆ ಬಗ್ಗೆ ಪ್ರಧಾನಿ ಎದಿ ರಾಮಾ ಘೋಷಣೆ ಮಾಡಿದ್ದಾರೆ. ಈಕೆ ಎಲ್ಲಾ ಟೆಂಡರ್‌ಗಳ ಮೇಲ್ವಿಚಾರಣೆ ನಡೆಸಲಿದ್ದು, ಅಲ್ಬೇನಿಯಾವನ್ನು ಶೇ.100ರಷ್ಟು ಭ್ರಷ್ಟಾಚಾರ ಮುಕ್ತವಾಗಿಸುತ್ತಾಳೆ’ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ಟೆಂಡರ್ ಕೊಡಲು ಸಚಿವರು ಲಂಚಕ್ಕೆ ಕೈಚಾಚುವುದು ಮತ್ತು ತಮ್ಮ ಪರವಾಗಿರುವವರಿಗೆ ಅವಕಾಶ ನೀಡುವುದನ್ನು ಡಿಯೆಲ್ಲಾ ತಪ್ಪಿಸಲಿದ್ದಾಳೆ.
ಅಲ್ಬೇನಿಯಾದಲ್ಲಿ ಟೆಂಡರ್ ಹಂಚಿಕೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದನ್ನು ತಡೆಯುವ ಜವಾಬ್ದಾರಿಯನ್ನು ಈಗ ಡಿಯೆಲ್ಲಾಳ ಹೆಗಲಿಗೆ ಏರಿಸಲಾಗಿದೆ. ಆದರೆ ಆಕೆಯನ್ನು ಯಾರು ನಿಯಂತ್ರಿಸುತ್ತಾರೆ ಹಾಗೂ ಹ್ಯಾಕ್ ಅಥವಾ ದುರ್ಬಳಕೆ ಆಗುವುದರಿಂದ ಹೇಗೆ ತಡೆಯಬಹುದು ಎಂಬ ಬಗ್ಗೆ ಅವರು ಯಾವುದೇ ಮಾಹಿತಿ ನೀಡಿಲ್ಲ.
ದೇಶದಲ್ಲಿ ಭ್ರಷ್ಟಾಚಾರ ನಿಗ್ರಹ ಆಗದ ಹೊರತೂ ಅದು ಯುರೋಪಿಯನ್ ಒಕ್ಕೂಟ ಸೇರುವುದು ಸಾಧ್ಯವಿಲ್ಲ. ಹೀಗಾಗಿ ಯುರೋಪಿಯನ್ ಒಕ್ಕೂಟ ಸೇರುವ ತನ್ನ ಆಶಯ ಈಡೇರಿಸಿಕೊಳ್ಳಲು ಅಲ್ಬೇನಿಯಾ ಸರ್ಕಾರ ಎಐ ಸಚಿವೆ ನೇಮಿಸಿ, ಭ್ರಷ್ಟಾಚಾರ ಕಡಿವಾಣಕ್ಕೆ ಮುಂದಾಗಿದೆ.
2050ರಲ್ಲಿ ಕಂಟೆಂಟ್ ಕ್ರಿಯೇಟರ್ಸ್ ಹೀಗಾಗ್ತಾರೆ ಅಂತ ಹೇಳ್ತಿದೆ AI, ಹಾರಿಬಲ್
ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ (Social Media Influencer), ಕಂಟೆಂಟ್ ಕ್ರಿಯೇಟರ್ (Content Creator) ತೆರೆ ಮೇಲೆ ಸುಂದರವಾಗಿ ಕಾಣ್ತಾರೆ. ಲಕ್ಷಾಂತರ ಜನರನ್ನು ಆಕರ್ಷಿಸಲು, ವೀವ್ಸ್, ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಅವರು ಸಾಕಷ್ಟು ಕಸರತ್ತು ಮಾಡ್ತಾರೆ. ನಾಳೆ ಕಂಟೆಂಟ್ ಏನು ನೀಡ್ಬೇಕು, ಹೇಗೆ ಬಳಕೆದಾರರನ್ನು ಆಕರ್ಷಿಸಬೇಕು ಎನ್ನುವ ಹುಳು ತಲೆಯಲ್ಲಿ ಸದಾ ಓಡಾಡ್ತಿರುತ್ತೆ. ಜೊತೆಗೆ ಸುಂದರವಾಗಿ ಕಾಣಲು ಒಂದಿಷ್ಟು ಮೇಕಪ್. ಇಡೀ ದಿನ ಮೊಬೈಲ್ ಹಿಡಿದು ವಿಡಿಯೋ ಶೂಟ್, ಎಡಿಟಿಂಗ್, ಪೋಸ್ಟಿಂಗ್, ಚಾಟಿಂಗ್ ಅಂತ ಬ್ಯುಸಿ ಇರುವ ಕಂಟೆಂಟ್ ಕ್ರಿಯೇಟರ್ಸ್ ಉತ್ತಮ ಹಣ ಸಂಪಾದನೆ ಏನೋ ಮಾಡ್ತಿದ್ದಾರೆ. ಆದ್ರೆ ಮುಂದಿನ ದಿನಗಳಲ್ಲಿ ಅವ್ರ ಮುಖ ಲಕ್ಷಣವೇ ಬದಲಾಗಲಿದೆ. ಈಗಿದ್ದಂತೆ ಸುಂದರವಾಗಿ ಅವ್ರು ಕಾಣೋದಿಲ್ಲ. ಬಾಗಿದ ಕುತ್ತಿಗೆ, ಉದ್ದನೆಯ ಬಾಯಿ, ಮುಖದ ಮೇಲೆ ಕಲೆ ಕಾಣಿಸಿಕೊಳ್ಳಲಿದೆ. ಹಾಗಂತ ನಾವು ಹೇಳ್ತಿಲ್ಲ. ತಜ್ಞರು, ಎಐ ಸಹಾಯದಿಂದ ಮಾಡೆಲ್ ಒಂದನ್ನು ಸಿದ್ಧಪಡಿಸಿ, ರಿಲೀಸ್ ಮಾಡಿದ್ದಾರೆ. ತಜ್ಞರು ಬಿಡುಡೆ ಮಾಡಿರುವ ಮಾಡೆಲ್ ಭಯ ಹುಟ್ಟಿಸುವ ಜೊತೆಗೆ ಎಚ್ಚರಿಕೆ ಗಂಟೆಯಾಗಿದೆ.
