ಗೂಗಲ್ ಸಿಇಒ ಸುಂದರ್ ಪಿಚೈ ಮೂರು ಬನಾನಾ ಇಮೋಜಿ ಹಾಕಿ ಟ್ವೀಟ್ ಮಾಡಿದ್ದಾರೆ. ಇಲ್ಲಿ ಒಂದೇ ಒಂದು ಶಬ್ದ, ಹ್ಯಾಶ್‌ಟ್ಯಾಗ್ ಏನೂ ಬಳಸಿಲ್ಲ. ಆದರೆ ಪಿಚೈ ಟ್ವೀಟ್ ರಹಸ್ಯವನ್ನು ಎಐ ಟೂಲ್ ಬಯಲು ಮಾಡಿದೆ.

ಕ್ಯಾಲಿಫೋರ್ನಿಯಾ (ಆ.27) ಮಾರ್ಮಿಕವಾಗಿ, ಪರೋಕ್ಷವಾಗಿ, ರಹಸ್ಯ ಹಿಡಿದಿಟ್ಟುಕೊಂಡು ಟ್ವೀಟ್ ಮಾಡುವುದು, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದು ಹೊಸದೇನಲ್ಲ. ಆದರೆ ಇದೀಗ ಗೂಗಲ್ ಸಿಇಒ ಸುಂದರ್ ಪಿಚೈ ಮಾಡಿದ ಟ್ವೀಟ್ ಭಾರಿ ಸದ್ದು ಮಾಡುತ್ತಿದೆ. ಸುಂದರ್ ಪಿಚೈ ಕೇವಲ ಮೂರು ಬಾಳೇಹಣ್ಣಿನ ಇಮೋಜಿ ಹಾಕಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ನಲ್ಲಿ ಕೇವಲ ಬನನಾ ಇಮೋಜಿ ಬಿಟ್ಟರೆ ಇನ್ನೇನು ಇಲ್ಲ. ಹ್ಯಾಶ್‌ಟ್ಯಾಗ್, ಒಂದು ಪದ, ವಾಕ್ಯ ಯಾವುದೂ ಇಲ್ಲ. ಆದರೂ ಗೂಗಲ್ ಸಿಇಒ ಮಾಡಿದ ಟ್ವೀಟ್‌ನ್ನು ಗ್ರಾಕ್ ಎಐ ಟೂಲ್ ಊಹಿಸಿದೆ.

ಎಲಾನ್ ಮಸ್ಕ್ ಗ್ರಾಕ್ ಇಮ್ಯಾಜಿನ್ ಎಐನಿಂದ ರಹಸ್ಯ ಬಯಲು

ಸುಂದರ್ ಪಿಚೈ ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಹಲವರು ಏನಿದು ಎಂದು ಪ್ರಶ್ನಿಸಿದ್ದಾರೆ. ಹಲವರು ಈ ಕುರಿತು ಮೀಮ್ಸ್ ಮಾಡಿ ಹರಿಬಿಟ್ಟಿದ್ದಾರೆ. ಸುಂದರ್ ಪಿಚೈ ಟ್ವೀಟ್ ಕುರಿತು ಹಲವು ಜೋಕ್ಸ್ ಕೂಡ ಹರಿದಾಡಿದೆ. ಕೆಲವರು ಸುಂದರ್ ಪಿಚೈ ಟ್ವೀಟ್ ಅಕೌಂಟ್ ಹ್ಯಾಕ್ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರ ನಡುವೆ ಹಲವರು ಎಲಾನ ಮಸ್ಕ್ ಮಾಲೀಕತ್ವದ ಗ್ರಾಕ್ ಇಮ್ಯಾಜಿನ್ ಎಐ ಟೂಲ್ ಬಳಿ ಏನಿದು ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಗ್ರಾಕ್ ಇಮ್ಯಾಜಿನ್ ಎಐ ಟೂಲ್ ಸುಂದರ್ ಪಿಚೈ ಟ್ವೀಟ್ ಒಳಾರ್ಥವನ್ನು ಹೇಳಿದೆ.

ಸುಂದರ್ ಪಿಚೈ ಗೂಗಲ್ ಎಐ ಟೂಲ್ ಕುರಿತು ಹೈಪ್ ಕ್ರಿಯೇಟ್ ಮಾಡಿದ್ದಾರೆ. ಗೂಗಲ್ ಶೀಘ್ರದಲ್ಲೇ ನ್ಯಾನೋ ಬನಾನಾ ಎಐ ಟೂಲ್ ಲಾಂಚ್ ಮಾಡುತ್ತಿದೆ. ಇಮೇಜ್ ಎಡಿಟಿಂಗ್ ಹಾಗೂ ಜನರೇಶನ್ ಟೂಲ್ ಇದಾಗಿದ್ದು, ಗೂಗಲ್ ಭರ್ಜರಿಯಾಗಿ ಲಾಂಚ್ ಮಾಡಲು ಮುಂದಾಗುತ್ತಿದೆ. ಈ ಕುರಿತು ಸುಂದರ್ ಪಿಚೈ ಜನರ ತಲೆಗೆ ಹುಳಬಿಡಲು ಈ ಟ್ವೀಟ್ ಮಾಡಿದ್ದಾರೆ ಎಂದು ಗ್ರಾಕ್ ಇಮ್ಯಾಜಿನ್ ಎಐ ಟೂಲ್ ಅಧಿಕೃತ ಟ್ವೀಟ್ ಮೂಲಕ ಹೇಳಿದೆ.

Scroll to load tweet…

ನ್ಯಾನೋ ಬನಾನಾ, ಗೂಗಲ್ ಡೀಪ್ ಮೈಂಡ್

ಆಗಸ್ಟ್ 26ರಂದು ಗೂಗಲ್ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ನ್ಯಾನೋ ಬನಾನಾ ಎಐ ಟೂಲ್ ಕುರಿತು ಹೇಳಿಕೊಂಡಿದೆ. ಗೂಗಲ್ ಡೀಪ್ ಮೈಂಡ್ ಮೂಲಕ ನ್ಯಾನೋ ಬನಾನಾ ತಂತ್ರಜ್ಞಾನ ಎಐ ಟೂಲ್ ಕುರಿತು ವಿವರ ನೀಡಿದೆ. ಈ ವರ್ಷದ ಆರಂಭದಲ್ಲಿ ಗೂಗಲ್ ಫ್ಲಾಶ್ 2.0 ಮೂಲಕ ಗೂಗಲ್ ಇಮೇಜ್ ಜನರೇಶನ್ ಹಾಗೂ ಎಡಿಟಿಂಗ್ ಎಐ ಟೂಲ್ ಲಾಂಚ್ ಮಾಡಿತ್ತು. ಈ ಟೂಲ್ ಗೂಗಲ್ ಜೆಮಿನಿ ಎಪಿಐ ಹಾಗೂ ಗೂಗಲ್ ಎಐ ಸ್ಟುಡಿಯೋದಲ್ಲಿ ಲಭ್ಯವಿದೆ.