‘ಪಕ್ಷದ ಮೇಲಿನ ನಿಮ್ಮ ಬದ್ಧತೆಗಿಂತ ದೇಶದ ಮೇಲಿನ ಪ್ರೀತಿಯಿಂದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತಚಲಾಯಿಸಿ ’ ಎಂದು ಇಂಡಿಯಾ ಮೈತ್ರಿಕೂಟದ ಉಪರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ನ್ಯಾ। ಬಿ. ಸುದರ್ಶನ್ ರೆಡ್ಡಿ ಸಂಸದರಿಗೆ ಮನವಿ ಮಾಡಿದ್ದಾರೆ.
ನವದೆಹಲಿ : ‘ಪಕ್ಷದ ಮೇಲಿನ ನಿಮ್ಮ ಬದ್ಧತೆಗಿಂತ ದೇಶದ ಮೇಲಿನ ಪ್ರೀತಿಯಿಂದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತಚಲಾಯಿಸಿ ’ ಎಂದು ಇಂಡಿಯಾ ಮೈತ್ರಿಕೂಟದ ಉಪರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ನ್ಯಾ। ಬಿ. ಸುದರ್ಶನ್ ರೆಡ್ಡಿ ಸಂಸದರಿಗೆ ಮನವಿ ಮಾಡಿದ್ದಾರೆ.
ಸೆ.9ರಂದು ಉಪರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಸಂಸದರಿಗಾಗಿ 12 ನಿಮಿಷಗಳ ವಿಡಿಯೋ ಸಂದೇಶ ನೀಡಿರುವ ಅವರು, ‘ನಿಮ್ಮ ಬೆಂಬಲವನ್ನು ನನಗಾಗಿ ಅಲ್ಲ. ನಮ್ಮನ್ನು ಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯ ಎಂದು ವ್ಯಾಖ್ಯಾನಿಸುವ ಮೌಲ್ಯಗಳಿಗಾಗಿ ಮತ ಹಾಕಿ. ಈ ಚುನಾವಣೆಯಲ್ಲಿ ಪಕ್ಷದ ವಿಪ್ ಇಲ್ಲ. ಮತಪತ್ರ ರಹಸ್ಯವಾಗಿದೆ. ನಿಮ್ಮ ಪಕ್ಷದ ಮೇಲಿನ ನಿಷ್ಠೆಗೆ ಆದ್ಯತೆ ನೀಡಬೇಡಿ. ಬದಲಾಗಿ ದೇಶದ ಮೇಲಿನ ಪ್ರೀತಿಗೆ ಮತ ನೀಡಿ. ಪ್ರಜಾಪ್ರಭುತ್ವ ಕಾಪಾಡಲು ನೈತಿಕ ಜವಾಬ್ದಾರಿ ಹೊತ್ತಿದ್ದೀರಿ. ಇದು ಕೇವಲ ಉಪರಾಷ್ಟ್ರಪತಿ ಆಯ್ಕೆಯಲ್ಲ. ಭಾರತದ ಚೈತನ್ಯಕ್ಕಾಗಿ ಮತ’ ಎಂದು ಹೇಳಿದ್ದಾರೆ.
ಉಪರಾಷ್ಟ್ರಪತಿ ಚುನಾವಣೆ: ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ಬಿ.ಸುದರ್ಶನ್ ರೆಡ್ಡಿ ವಿಪಕ್ಷಗಳ ಅಭ್ಯರ್ಥಿ
ನವದೆಹಲಿ : ಇಂಡಿಯಾ ಬ್ಲಾಕ್ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಬಿ. ಸುದರ್ಶನ್ ರೆಡ್ಡಿ ಅವರನ್ನು ಎನ್‌ಡಿಎಯ ಸಿಪಿ ರಾಧಾಕೃಷ್ಣನ್ ವಿರುದ್ಧ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಹೆಸರಿಸಿದೆ. ಮೈತ್ರಿಕೂಟದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನ್ಯಾಯಮೂರ್ತಿ ರೆಡ್ಡಿ ಆಗಸ್ಟ್ 21 ರಂದು ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೇಳಿದರು. "ಎಲ್ಲಾ ಇಂಡಿಯಾ ಒಕ್ಕೂಟದ ಪಕ್ಷಗಳು ಸಾಮಾನ್ಯ ಅಭ್ಯರ್ಥಿಯನ್ನು ಹೊಂದಲು ನಿರ್ಧರಿಸಿವೆ, ಈ ನಿರ್ಧಾರವನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ. ಎಲ್ಲಾ ವಿರೋಧ ಪಕ್ಷಗಳು ಒಂದೇ ಹೆಸರಿಗೆ ಒಪ್ಪಿಕೊಂಡಿವೆ ಎಂದು ನನಗೆ ಸಂತೋಷವಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ದೊಡ್ಡ ಸಾಧನೆಯಾಗಿದೆ" ಎಂದು ಖರ್ಗೆ ಹೇಳಿದರು.
ರಾಧಾಕೃಷ್ಣನ್ ಅವರ ಸರ್ವಾನುಮತದ ಆಯ್ಕೆಗಾಗಿ ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳಿಗೆ ಮನವಿ ಮಾಡಿದ ನಂತರವೇ ಈ ಘೋಷಣೆ ಹೊರಬಿದ್ದಿದೆ. ರಾಧಾಕೃಷ್ಣನ್ ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗಿನ ಸಂಪರ್ಕವಿರುವುದರಿಂದ ವಿರೋಧ ಪಕ್ಷಗಳು ಅವರನ್ನು ಬೆಂಬಲಿಸಲು ನಿರಾಕರಿಸಿದ್ದವು ಎಂದು ವರದಿಯಾಗಿದೆ.
