ಸಚಿವ ಪ್ರಿಯಾಂಕ್ ಖರ್ಗೆಯವರು, ಬಿಜೆಪಿ ನಾಯಕರು ತಮ್ಮ ಮಕ್ಕಳನ್ನು ಆರ್‌ಎಸ್‌ಎಸ್ ಶಾಖೆಗೆ ಕಳುಹಿಸಿ, ಗಣವೇಶ ಧರಿಸಿ ಗೋಮೂತ್ರ ಕುಡಿದರೆ ತಾವು ಆರ್‌ಎಸ್‌ಎಸ್ ಬಗ್ಗೆ ಮಾತನಾಡುವುದನ್ನು ನಿಲ್ಲಿಸುವುದಾಗಿ ಸವಾಲು ಹಾಕಿದ್ದಾರೆ. ಸರ್ಕಾರಿ ಸ್ಥಳಗಳಲ್ಲಿ ಪಥಸಂಚಲನದಂತಹ ಕಾರ್ಯಕ್ರಮಗಳಿಗೆ ಅನುಮತಿ ಕಡ್ಡಾಯ.
ಬೆಂಗಳೂರು (ಅ.17): ಸರ್ಕಾರದ ವೈಫಲ್ಯ ಡೈವರ್ಟ್ ಮಾಡಲು ಆರ್‌ಎಸ್‌ಎಸ್ ವಿಚಾರ ಬಳಸಲಾಗುತ್ತಿದೆ ಎಂದರೆ ಡೈವರ್ಟ್ ಅಂತನೇ ಅಂದುಕೊಳ್ಳಲಿ ಏನಿವಾಗ..? ಆರ್‌ಎಸ್‌ಎಸ್ ಬಗ್ಗೆ ನನ್ನ ಮಾತು ನಿಲ್ಲಿಸಬೇಕು ಅಂದರೆ, ಬಿಜೆಪಿ ನಾಯಕರ ಮಕ್ಕಳು ಆರ್‌ಎಸ್‌ಎಸ್ ಶಾಖೆ ಸೇರಿ ರಸ್ತೆಗೆ ಬರಬೇಕು. ಎಲ್ಲಾ ಬಿಜೆಪಿ ನಾಯಕರ ಮಕ್ಕಳು ಗಣವೇಶ ಧರಿಸಿ ಗೋಮೂತ್ರ ಕುಡೀರಿ ಆಗ ನಾನು ಮಾತು ನಿಲ್ಲಿಸುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ಡೈವರ್ಟ್ ಅಂತನೇ ಅಂದುಕೊಳ್ಳಲಿ ಏನಿವಾಗ? ಬೇಡಿಕೆ ಇಲ್ಲೀಗಲ್ ಇದ್ಯಾ ಬೇಡಿಕೆ ಅಸಂವಿಧಾನಿಕ ಇದ್ಯಾ? ಇವರು ಯಾಕೆ ಇಷ್ಟು ಹೆದರುತ್ತಿದ್ದಾರೆ? ಸರ್ಕಾರಿ ಆದೇಶದಲ್ಲಿ ಬಂದರೂ ಇವರ ಹೆಸರು ಇರೋದಿಲ್ಲ. ನಾವು ಆರ್‌ಎಸ್‌ಎಸ್ ಅಂತ ಹೇಳೇ ಇಲ್ಲ. ಒಂದು ಯೂನಿಫಾರ್ಮ್ ತರೋದಕ್ಕೆ ಈ ರೀತಿ ಮಾಡ್ತಾ ಇದ್ದೀವಿ. ಇವರು ಯಾಕೆ ಇಷ್ಟು ಮಾತಾಡ್ತಾ ಇದ್ದಾರೆ. ಸರ್ಕಾರ ಸರಿ ಇಲ್ಲ ಅಂದರೆ ನೀವೇ ಬೀದಿಗಿಳಿರಿ ಯಾರು ಬೇಡ ಅಂದರು. ಸಂವಿಧಾನಿಕವಾಗಿ ಬುದ್ದ ಬಸವ ಅಂಬೇಡ್ಕರ್ ತತ್ವ ತರಲು ಹೊರಟಿದ್ದೇವೆ ಅಷ್ಟೆ. ಪ್ರಬುದ್ಧ ಸಮಾಜ ನಿರ್ಮಾಣ ಮಾಡಲು ನಾವು ಹೊರಟಿದ್ದೇವೆ. ಪ್ರಬುದ್ದ ಸಮಾಜ ಇದ್ದರೆ ಸಮೃದ್ಧ ಸಮಾ ಇರಲಿದೆ. ಇದಕ್ಕೆ ಬಿಜೆಪಿಯವರಿಗೆ ಸಮಸ್ಯೆ ಇದ್ದರೆ ಅದು ನಮ್ಮ ಸಮಸ್ಯೆ ಅಲ್ಲ ಎಂದರು.
ಬಿಜೆಪಿ ನಾಯಕರ ಮಕ್ಕಳು ಗಣವೇಶ ಧರಿಸಿ ರಸ್ತೆಗೆ ಇಳಿಯಲಿ:
ಬಿಜೆಪಿಯವರಿಗೆ ತಡೆದುಕೊಳ್ಳಲು ಆಗದಿದ್ದರೆ ಕೇಶವಕೃಪ ಹತ್ರ ಹೋಗಿ ಬಾಯಿ ಬಡ್ಕೊಳ್ಳಿ. ವೈಯಕ್ತಿಕ ಟೀಕೆ ಅಲ್ಲ, ನೀವು ಮಾಡ್ತಾ ಇರೋದು ಅಷ್ಟೆ ನಮ್ಮ ಪ್ರಶ್ನೆಗೆ ಅವರ ಬಳಿ ಉತ್ತರ ಇಲ್ಲ. ನಿಮ್ಮ ಮಕ್ಕಳು ಈ ಶಾಖೆಯಲ್ಲಿ ಇಲ್ಲ ಎಂಬುದಷ್ಟೆ ನನ್ನ ಪ್ರಶ್ನೆ. ತಾಕತ್ ಇದ್ರೆ ಬ್ಯಾನ್ ಮಾಡಿ ಅಂದರೆ, ಈ ಶಾಖಾದಲ್ಲಿ ನಿಮ್ಮ ಮಕ್ಕಳು ಇಲ್ಲ, ಗೋ ರಕ್ಷಣೆ ಯಾಕಿಲ್ಲ? ತ್ರಿಶೂಲ ದೀಕ್ಷ ಕೊಟ್ಟು ಯಾವಾಗ ನಿಮ್ಮ ಮಕ್ಕಳನ್ನ ರಸ್ತೆಗೆ ಬಿಡ್ತೀರಾ? ಅವರ ಮಕ್ಕಳಿಗೆ ರಸ್ತೆಗೆ ಬಿಡಲಿ ನೋಡೊಣ. ಯಾಕೆ ನಾಲ್ಕು ದಿನದಿಂದ ಪುಡಾರಿಗಳಿಂದ ಬೆದರಿಕೆ ಹಾಕಿಸ್ತಾ ಇದ್ದೀರ. ನನ್ನ ಮಾತು ನಿಲ್ಲಿಸಬೇಕು ಅಂದರೆ, ಬಿಜೆಪಿ ನಾಯಕರ ಮಕ್ಕಳು ಆರ್‌ಎಸ್‌ಎಸ್ ಶಾಖೆ ಸೇರಿ ರಸ್ತೆಗೆ ಬರಬೇಕು. ಎಲ್ಲಾ ಬಿಜೆಪಿ ನಾಯಕರ ಮಕ್ಕಳು ಗಣವೇಶ ಧರಿಸಿ ಗೋಮೂತ್ರ ಕುಡೀರಿ ಆಗ ನಾನು ಮಾತು ನಿಲ್ಲಿಸುತ್ತೇನೆ ಎಂದು ಸವಾಲು ಹಾಕಿದರು.
ಲಾಠಿ ಹಿಡಿದುಕೊಂಡು ಪಥ ಸಂಚಲನ ಮಾಡೋದು ಯಾವ ಧರ್ಮದಲ್ಲಿದೆ?
ನಾವು ತರ್ತಾ ಇರೋ ಕಾನೂನು ಸರ್ಕಾರಿ ಶಾಲೆ, ಮೈದಾನ ಉದ್ಯಾನವನಗಳಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಅಂತ ಕಾನೂನು. ನಾವು ಮಾಡಿದ ಕಾನೂನು ಪಾಲನೆ ಮಾಡಿ, ಇಲ್ಲ ಬೇಡ ಅಂದ್ರೆ ಕಾನೂನು ಕ್ರಮ ಆಗುತ್ತದೆ. ಪರ್ಮಿಷನ್ ತೆಗೆದುಕೊಂಡು ಮಾಡಿ ಅಷ್ಟೇ. ಸಿಎಂ ಮಾಡಿದ ಕಾನೂನು ಮುರಿದರೆ ಎಷ್ಟು ಸಮಸ್ಯೆ ಆಗುತ್ತದೆ ಗೊತ್ತಲ್ಲ. 100 ಕಡೆ ಪಥ ಸಂಚಲನ ಮಾಡಿದ್ರಲ್ಲ, ಯಾರ ಪರ್ಮಿಷನ್ ಪಡೆದರು ಇವರು?ಶಾಂತಿ ಪ್ರಿಯರು ಅಂತಾರೆ ಯಾಕೆ ಲಾಠಿ ಹಿಡಿದುಕೊಂಡರು, ಯಾವ ಧರ್ಮದಲ್ಲಿ, ಗ್ರಂಥದಲ್ಲಿ ಇದೆ ಹೇಳಿ? ಎಂದು ಪ್ರಶ್ನೆ ಮಾಡಿದರು.
ಆರ್‌ಎಸ್‌ಎಸ್‌ನವರು ಕಲಬುರಗಿಗೆ ಬಂದು ಪರ್ಮಿಷನ್ ಕೇಳಲಿ:
ನಾವು ಆರ್‌ಎಸ್‌ಎಸ್‌ನವರ ಹೆಸರೇ ಪ್ರಸ್ತಾಪ ಮಾಡಿಲ್ಲ, ಅಂದರೆ ಇವರಿಗೆ ಯಾಕೆ ಇಷ್ಟು ನೋವು? ಒಂದು ಆರ್ಗನೈಸೇಷನ್ ಅನ್ನೋದನ್ನ ಸರ್ಕಾರ ಮಾಡಿದರೆ ಮಾತನಾಡಲಿ. ಈ ಕಾನೂನು ಎಲ್ಲರಿಗೂ ಅನ್ವಯಿಸುತ್ತದೆ. ಕಲಬುರ್ಗಿಯಲ್ಲಿ ಪಥಸಂಚಲನ ಪರ್ಮಿಷನ್ ತೆಗೆದುಕೊಂಡು ಮಾಡಲಿ. ಅಕ್ಟೋಬರ್ 23ಕ್ಕೆ ಯಾಕೆ ದೀಪಾವಳಿಗೆ ಮಾಡಲಿ. ಇವರ ಅನುಕೂಲಕ್ಕೆ ಮಾಡ್ತಾ ಇದ್ದಾರೆ. ಕಳೆದ ವರ್ಷದಲ್ಲಿ ಬಿಜೆಪಿ ನಾಯಕರು ಪ್ರಿಯಾಂಕ್ ಖರ್ಗೆ ವಿರುದ್ಧ ಹೋರಾಟಕ್ಕೆ ಕಲುಬುರಗಿಗೆ 4 ಬಾರಿ ಬಂದಿದ್ದಾರೆ. ಪಥ ಸಂಚಲನ ಮಾಡಲಿ, ಮೊದಲು ಪರ್ಮಿಷನ್ ತಗೆದುಕೊಳ್ಳಲಿ. ಆದರೆ ಎಲ್ಲಾ ಬಿಜೆಪಿ ನಾಯಕರ ಮಕ್ಕಳು ಗಣ ವೇಷದಲ್ಲಿ ಬರಲಿ ಸ್ವಾಗತ ಮಾಡ್ತೀನಿ ಎಂದು ಹೇಳಿದರು.
ಎಲ್ಲರೂ ಕಾನೂನು ಪಾಲಿಸಬೇಕು ಅಷ್ಟೇ?
ಕೆಲವರು ಪ್ರಬುದ್ಧತೆ ಬಗ್ಗೆ ಮಾತನಾಡುತ್ತಾರೆ. ದರೆ, ನನಗೆ ಪ್ರಬುದ್ಧತೆ ಬಂದಿದೆ ಅದಕ್ಕೆ ಪತ್ರ ಬರೆದಿರೋದು. ಜನರು ಆಶಿರ್ವಾದ ಮಾಡಿದ್ದಾರೆ ಅದಕ್ಕಾಗಿ ಈ ಕೆಲಸ ಮಾಡ್ತಾ ಇದ್ದೀನಿ. ಕಾನೂನು ಅರಿವನ್ನು ಇವರಿಗೆ ಹೇಳ್ತಾ ಇದ್ದೀನಿ. ಫಾಲೋ ದಿ ಲಾ ಫಾಲ್ ಇನ್ ಲಾ ಲೈನ್ ಅಷ್ಟೇ. 2023ರಲ್ಲಿ ಜಗದೀಶ್ ಶೆಟ್ಟರ್ ಬರೆದ ಪತ್ರ ಅದು. ಅವಾಗಿನ ಬಿಜೆಪಿನ ನಾಯಕರು ಯಾಕೆ ವಿರೋಧ ಮಾಡಲಿಲ್ಲ? ಅದನ್ನ ನಾನು ಎಚ್ಚರಿಸುತ್ತಿದ್ದೇನೆ ಅಷ್ಟೇ. ಅದನ್ನೇ ನಾವು ಕಾನೂನು ಮಾಡ್ತಾ ಇದ್ದೀವಿ. ಎಲ್ಲವನ್ನೂ ಒಗ್ಗೂಡಿಸಿ ಕಾನೂನು ಮಾಡ್ತಾ ಇದ್ದೀವಿ. ಯಾವುದೇ ಕಾರ್ಯಕ್ರಮದಲ್ಲಿ ಕಾನೂನು ಉಲ್ಲಂಘನೆ ಆಗುತ್ತೆ ಅಂತ ಗೊತ್ತಾದ್ರೆ ಪರ್ಮಿಷನ್ ಕೊಡಲ್ಲ ಎಂದರು.
ದೇಶದಲ್ಲಿ ಯಾವುದೇ ಒಳ್ಳೆಯ ಸಂಘಟನೆ ಬೆದರಿಕೆ ಮಾಡ್ತಾರೆ ಹೇಳಿ? ಯೂಥ್ ಕಾಂಗ್ರೆಸ್ ಪರ್ಮಿಷನ್ ಕೇಳಿದರು, ಪ್ರತಿಭಟನೆಗೆ ಅವಕಾಶ ಕೊಡಲಿಲ್ಲ. ಆಗ ಯಾಕೆ ಮಾತನಾಡಲಿಲ್ಲ ಅವರು, ಆರ್‌ಎಸ್‌ಎಸ್ ಯಾಕೆ ಮಾತಾಡಲಿಲ್ಲ. ಒಂದೇ ಪಕ್ಷಕ್ಕೆ ಯಾಕೆ ಇದು ನೋವಾಗ್ತಾ ಇದೆ ಗೊತ್ತಿಲ್ಲ. ಈಗಾಗಲೇ ತನಿಖೆ ನಡೆಯುತ್ತಿದೆ. ಶೋಭಾ ಕರಂದ್ಲಾಜೆ ಅವರಿಗೆ ಕಾರ್ಯಕರ್ತರನ್ನ ಜೈಲಿಗೆ ಕಳಿಸೋಕೆ ಯಾಕೆ ಅಷ್ಟು ಅವಸರ? ನಾವು ಏನೇ ಮಾಡಿದರೂ ಕಾನೂನಿನ ಅಡಿಯಲ್ಲಿ ಮಾಡ್ತೀವಿ ಎಂದು ಸವಾಲು ಹಾಕಿದರು.
