ಭಗವಾ ಝಂಡಾ ಪಕ್ಷ ಕಟ್ಟುವ ಸೂಚನೆ ನೀಡಿದ ಯತ್ನಾಳ್, ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ನನ್ನ ನೇತೃತ್ವದಲ್ಲೇ ಸರ್ಕಾರ ರಚನೆಯಾಗಲಿದೆ, ಸರ್ಕಾರ ರಚನೆ ದಿನ 11 ಜೆಸಿಬಿಗೆ ಪೂಜೆ ಮಾಡುತ್ತೇನೆ ಎಂದು ಯತ್ನಾಳ್ ಹೇಳಿದ್ದಾರೆ.
ಬಾಗಲಕೋಟೆ (ಅ.04) ಬಿಜೆಪಿಯಿಂದ ಉಚ್ಚಾಚನೆಗೊಂಡರೂ ರಾಜ್ಯದಲ್ಲಿ ಅಪಾರ ಬೆಂಬಲ ಪಡೆದಿರುವ ಬಸನಗೌಡ್ ಪಾಟೀಲ್ ಯತ್ನಾಳ್ ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಬಾರಿ ಯತ್ನಾಳ್ ಹೇಳಿಕೆಯಿಂದ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಬಿಜೆಪಿ ಸೇರಿಸಿಕೊಳ್ಳಲಿದ್ದರೆ, ಭಗವಾ ಝಂಡ ಪಕ್ಷ ಕಟ್ಟುವುದಾಗಿ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಸಿದ್ದಾರೆ. ನನ್ನ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ. ಕರ್ನಾಟಕದಲ್ಲಿ ಯೋಗಿ ಆದಿತ್ಯನಾಥ್ ಮಾದರಿಯ ಬುಲ್ಡೋಜರ್ ಸರ್ಕಾರ ಆಡಳಿತ ನಡೆಸಲಿದೆ ಎಂದು ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ.
ಹೊಸ ಪಕ್ಷ ಕಟ್ಟುವ ಎಚ್ಚರಿಕೆ
ಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲ್ಲೂಕಿನ ಮದಬಾವಿ ಗ್ರಾಮದಲ್ಲಿ ಮಾತನಾಡಿದ ಯತ್ನಾಳ್ ಹೊಸ ಪಕ್ಷ ಕಟ್ಟುವ ಸೂಚನೆ ನೀಡಿದ್ದಾರೆ. ಇನ್ನು ರಾಜ್ಯದಲ್ಲಿ ಹಣ ಬಲದಲ್ಲಿ ಚುನಾವಣೆ ನಡೆಯುವುದಿಲ್ಲ. ಕಾರಣ ಈಗಾಗಲೇ ಹಣ ಪಡೆದು ಹಲವು ಚುನಾವಣೆ ನಡೆದಿದೆ. ಹಣ ಕೊಟ್ಟು ಚುನಾವಣೆ ಗೆದ್ದವರು ಮಾಡಿದ್ದು ಅಷ್ಟಕಷ್ಟೆ ಎಂದು ಯತ್ನಾಳ್ ಹೇಳಿದ್ದಾರೆ.
ಪ್ರಮಾಣವಚನ ಸ್ವೀಕಾರ ಸಿದ್ದು, ಸವದಿ ನೋಡುತ್ತಾರೆ
ಸಿದ್ದು ಅಣ್ಣ ಸವದಿ ಅವರ ನಮ್ಮನ್ನು ತೆಗೆದುಕೊಳ್ಳದಿದ್ದರೆ ನಮ್ಮದೇ ಹೊಸ ಭಗವಾ ಝಂಡಾ ಪಕ್ಷ ರಚನೆಯಾಗುತ್ತದೆ. ನಾನೇ ಸರ್ಕಾರ ರಚನೆ ಮಾಡುತ್ತೇನೆ. ಟಿವಿಯಲ್ಲಿ ನಮ್ಮ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಸಿದ್ದು, ಸವದಿ ನೋಡುತ್ತಾರೆ ಎಂದು ಯತ್ನಾಳ್ ಹೇಳಿದ್ದಾರೆ.
11 ಜೆಸಿಬಿಗಳ ಪೂಜೆ
ನನ್ನ ನೇತೃತ್ವದಲ್ಲಿ ರಚನೆಯಾಗುವ ಸರ್ಕಾರ, ಪ್ರಮಾಣ ವಚನ ದಿನ 11 ಜೆಸಿಬಿಗಳ ಪೂಜೆ ಮಾಡುತ್ತೇನೆ. ದೇಶದ ವಿರುದ್ಧ ಮಾತನಾಡಿದರೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅಣ್ಣನ ಹಾಗೇ ಕ್ರಮ ಕೈಗೊಳ್ಳುತ್ತೇನೆ. ನಮ್ಮದು ಯೋಗಿ ಮಾದರಿಯ ಬುಲ್ಡೋಜರ್ ಸರ್ಕಾರ ಎಂದು ಯತ್ನಾಳ್ ಹೇಳಿದ್ದಾರೆ. ಅಭಿವೃದ್ಧಿಗೂ ಜೇಸಿಬೆ ಬೇಕು, ಕ್ಯಾನಲ್ ಸೇರಿದಂತೆ ಕಾಮಗಾರಿಗಳಿಗೂ ಜೆಸಿಬಿ ಬೇಕು ಎಂದು ಯೋಗಿ ಮಾದರಿಯ ಬುಲ್ಡೋಜರ್ ಸರ್ಕಾರದ ಮಾದರಿ ಎಂದು ಯತ್ನಾಳ್ ಹೇಳಿದ್ದಾರೆ.
ಹೊಸ ಪಕ್ಷ ಕಟ್ಟಿ ಎಂದು ಸೂಚನೆ ನೀಡಿದ್ದ ಸಿದ್ದರಾಮಯ್ಯ
ಸದನದಲ್ಲಿ ಸಿದ್ದರಾಮಯ್ಯ ಮಾತನಾಡುವ ವೇಳೆ ಮಧ್ಯಪ್ರವೇಶಿಸಿದ ಬಸನಗೌಡ ಪಾಟೀಲ್ ಯತ್ನಾಳ್‌ಗೆ, ನೀವು ಬಿಜೆಪಿಯಿಂದ ಉಚ್ಚಾಟೆನಗೊಂಡಿದ್ದೀರಿ ಎಂದು ಟಾಂಗ್ ನೀಡಿದ್ದರು. ತಕ್ಷಣವೇ ಪ್ರತಿಕ್ರಿಯೆ ನೀಡಿದ ಬಸನಗೌಡ ಪಾಟೀಲ್ ಯತ್ನಾಳ್, ಸಿದ್ದರಾಮಯ್ಯವರೇ ನಿಮ್ಮನ್ನು ದೇವೇಗೌಡರು ಪಾರ್ಟಿಯಿಂದ ಉಚ್ಚಾಟನೆ ಮಾಡಿದ್ದರು. ನಮ್ಮನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿದ್ದಾರೆ. ಉಚ್ಚಾಟನೆಯಾದವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಹಾಸ್ಯಚಟಾಕಿ ಹಾರಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಸನಗೌಡ್ ಪಾಟೀಲ್ ಯತ್ನಾಳ್ ಅವರೇ, ನೀವು ಒಂದು ಪಕ್ಷ ಕಟ್ಟಿ, ಮುಖ್ಯಮಂತ್ರಿಯಾಗಿ ಎಂದು ಸಲಹೆ ನೀಡಿದ್ದರು.
