ನಾನು ಈವರೆಗೂ ಚೇರ್ ಮೇಲೆ ಕುಳಿತು ಒಂದು ಸನ್ಮಾನ ಮಾಡಿಸಿಕೊಂಡಿಲ್ಲ. ರಮ್ಯ ಎಂಬ ಹುಡುಗಿ ನನ್ನ ಬಗ್ಗೆ ಪಿಹೆಚ್‌ಡಿ ಮಾಡಿ ಪುಸ್ತಕ ಬರೆದಿದ್ದಾಳೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರು (ಅ.16): ನಾನು ಈವರೆಗೂ ಚೇರ್ ಮೇಲೆ ಕುಳಿತು ಒಂದು ಸನ್ಮಾನ ಮಾಡಿಸಿಕೊಂಡಿಲ್ಲ. ರಮ್ಯ ಎಂಬ ಹುಡುಗಿ ನನ್ನ ಬಗ್ಗೆ ಪಿಹೆಚ್‌ಡಿ ಮಾಡಿ ಪುಸ್ತಕ ಬರೆದಿದ್ದಾಳೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ರಘುಗೂ ನನಗೂ ಯಾವುದೇ ಸಂಬಂಧ ಇಲ್ಲ, ಹತ್ತು ನಿಮಿಷ ರಘು ಜೊತೆ ಮಾತಾಡಿಲ್ಲ. ನನ್ನ ಅನುಮತಿ ಪಡೆದಿಲ್ಲ, ನನ್ನ ಬಾಲ್ಯದಿಂದ ಈವರೆಗೆ ಬರೆದಿದ್ದಾರೆ. ವಿಧಿಯಿಲ್ಲದೆ ಬಂದಿದ್ದೇನೆ, ಕಾಣದೆ ಇರುವ ಇಂತಹ ಭಕ್ತರಿಗಾಗಿ ಬಂದಿದ್ದೇನೆ. ನನಗೆ ಪುಸ್ತಕ ಓದುವ ಅಭ್ಯಾಸ ಇಲ್ಲ. ಚಿಕ್ಕವಯಸ್ಸಿನಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಉಡುಪಿಗೆ ಹೋಗಿದ್ದೆ, ಅಲ್ಲಿನ ಭಾಷಣವನ್ನು ಇಲ್ಲಿಗೆ ತಂದಿದ್ದಾರೆ ಎಂದರು.
ಉಗ್ರಪ್ಪ ರಾಜಕಾರಣಿ, ಲಾ ಮೇಕರ್. 12ನೇ ವಯಸ್ಸಿಗೆ ಸ್ಕೂಲ್ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದೆ. ಮಾಧವ ನಾಯಕ್ ಎಂಥ ಗೆಳೆಯ ನನಗೆ ಸಿಕ್ಕಿದ್ದ. ಪೋಲಿಟಿಕಲ್ ಲೀಡರ್ ಆಗಬೇಕು, ರಾಜಕಾರಣ ಮಾಡಬೇಕು ಎಂದು ನಿರ್ಧಾರ ಮಾಡಿದೆ. 8 ಬಾರಿ ಗೆದ್ದು, ಇಲ್ಲಿ ನಿಂತಿದ್ದೇನೆ. ಟ್ರಬಲ್ ಶೂಟರ್ ಅಂತ ಹೆಸರು ಇಟ್ಟಿದ್ದಾರೆ. ಈ ವೇಳೆ ರಾಜೀವ್ ಗಾಂಧಿಯವರ ಜೊತೆಗಿನ ಮಾತುಕತೆಯನ್ನು ಡಿಕೆಶಿ ನೆನಪು ಮಾಡಿಕೊಂಡರು. ಗ್ರೇಟರ್ ಬೆಂಗಳೂರು ಮೂಲಕ 500 ಮಂದಿ ಹೊಸ ನಾಯಕರು ಬರ್ತಾರೆ. ಲೀಡರ್ ಗಳನ್ನ ಸೃಷ್ಠಿಮಾಡಬೇಕೆ ಹೊರತು ಹಿಂಬಾಲಕರನ್ನ ಅಲ್ಲ ಅಂತ ನಂಬಿರುವವನು ನಾನು. ನನಗೂ 63 ವರ್ಷ ಆಯ್ತು, ಇನ್ನು ಹತ್ತು ವರ್ಷ ರಾಜಕೀಯದಲ್ಲಿ ಕೆಲಸ ಮಾಡಬಹುದು. ರಾಜಕೀಯ ಸ್ಥಾನಮಾನ ಸಿಗದವರನ್ನ ವಂಚಿತರು ಎಂದು ಡಿಕೆಶಿ ಹೇಳಿದರು.
ಈಗಿನ ಮಕ್ಕಳಿಗೆ ಟೀಚರ್ ಸುಳ್ಳು ಹೇಳಲಾಗದು. ಮಗು ಎಲ್ಲವನ್ನ ಪೋನ್ ನಲ್ಲಿ ತಿಳಿದುಕೊಳ್ಳುತ್ತೆ, ಶ್ರಮ ಪಡಬೇಕಿಲ್ಲ. ಪಕ್ಷ ಭೇದ ಮರೆತು ನನ್ನ ಕಷ್ಟ ಕಾಲದಲ್ಲಿ ನನ್ನ ಜೊತೆ ನಿಂತ ಜನ, ತಿಹಾರ್ ಜೈಲ್ ನಲ್ಲಿ ಇದ್ದಾಗ, ಕೋರ್ಟ್ ಮುಂದೆ ಸಾಕಷ್ಟು ಜನ ಬಂದಿದ್ರು. ನನ್ನ ಕಷ್ಟದ ಜೊತೆ ನಿಂತವರಿಗೆ ಅಭಿನಂದಿಸುತ್ತೇನೆ. ಸೋಲನ್ನೂ ನಾನು ಒಪ್ಪುತ್ತೇನೆ, ಪ್ರತಿ ಬಾರಿ ನಾನೇ ಗೆಲ್ಲಲಾಗದು. ಏನೇನೋ ಕತೆಗಳನ್ನ ಕಟ್ಟಿ ಅಪಾದನೆ ಮಾಡ್ತಾರೆ, ರಾಜಕಾರಣ ನಿಂತ ನೀರಲ್ಲ. ದೇವೇಗೌಡರ ವಿರುದ್ಧ ಹೋರಾಟ ಮಾಡಿದ್ದೆ, ಪಕ್ಷದ ಆದೇಶದ ಮೇರೆಗೆ ಕುಮಾರಸ್ವಾಮಿ ಕೈಯನ್ನ ಎತ್ತಬೇಕಾಗಿತ್ತು. ಜೈಲಿಗೆ ಹೋದ ಮೇಲೆ ನಾವೇನು ದುಡ್ಡು ಹೊಡಿ ಎಂದು ಹೇಳಿದ್ವಾ? ಎಂದು ನಂತರ ಮಾತಾಡಿದ್ದಾರೆ. ಯಾರ್ಯಾರು ಏನೇನು ಮಾತನಾಡಿದ್ದಾರೆ ಗೊತ್ತಿದೆ. ಈ ಪುಸ್ತಕದಲ್ಲಿ ಶೇ.99ರಷ್ಟು ನಿಜವಿದೆ. ಎಲ್ಲರೂ 'ಎ ಸಿಂಬಲ್ ಆಫ್ ಲಾಯಲ್ಟಿ ಡಿಕೆಶಿ' ಪುಸ್ತಕವನ್ನು ಓದಿ ಎಂದು ಹೇಳಿದರು.
ನ.6ರಂದು ಬಿಡುಗಡೆ ಮಾಡುವೆ
ದೆಹಲಿಯಿಂದ ಪೋನ್ ಬಂತು, ನೀವು ಡಿಸಿಎಂ ಆಗ್ತಿರಾ? ಜೈಲ್ ಹೋಗ್ತಿರಾ ಎಂದ್ರು. ಅಶೋಕ್ ಜೊತೆ ಅಧಿವೇಶನದಲ್ಲಿ ಮಾತಾಡಿದೆ. ನನ್ನ ಯಾರೂ ಕ್ಷಮೆ ಕೇಳು ಎಂದು ಹೇಳಿಲ್ಲ ಎಂದು ಮೈತ್ರಿ ಸರ್ಕಾರ ಪತನದ ಸಂದರ್ಭವನ್ನ ಡಿಕೆಶಿ ಮೆಲಕು ಹಾಕಿದರು ಜೊತೆಗೆ ಸದಾ ವಸ್ತಲೇ ವಿವಾದವನ್ನು ಪ್ರಸ್ತಾಪಿಸಿದರು. ನೀರಿನ ಹೆಜ್ಜೆ ಎಂಬ ಪುಸ್ತಕವನ್ನ ನವೆಂಬರ್ 6ರಂದು ಬಿಡುಗಡೆ ಮಾಡುವೆ. ಮಲ್ಲಿಕಾರ್ಜುನ ಖರ್ಗೆಯವರ ಬಳಿ ಮತ್ತೊಂದು ಪುಸ್ತಕ ಬಿಡುಗಡೆ ಮಾಡಿಸುವೆ. ದೇವೇಗೌಡರಿಗೆ ಪ್ರಧಾನ ಮಂತ್ರಿಗಳೇ ಎಂದು ಸ್ವಾಮೀಜಿ ಹೇಳಿದ್ರು. ಸಂಸ್ಕೃತವನ್ನ ಎರಡು ವರ್ಷ ಕಲಿತೆ . ವಿಶ್ವರೂಪ ದರ್ಶನ ಇತ್ತು ಉಡುಪಿಯಲ್ಲಿ, ಆ ಸಂದರ್ಭದಲ್ಲಿ ಶ್ಲೋಕ ರೀಕಾಲ್ ಮಾಡ್ಕೊಂಡೆ. ಆ ಶ್ಲೋಕವನ್ನ ಇಲ್ಲಿ ಹೇಳೋಣ ಎಂದೆನೆಸಿದೆ ಎಂದು ಡಿಕೆಶಿ ಶ್ಲೋಕ ಹೇಳಿದರಲ್ಲದೇ, ಆ ಶ್ಲೋಕವನ್ನ 25 ಲಕ್ಷ ಜನ ನೋಡಿದ್ದಾರೆ ಎಂದು ಹೇಳಿದ್ರು. ನಾನು ಗ್ರಾಜುಯೇಟ್ ಆಗಿರಲಿಲ್ಲ, ಹುಟ್ಟುವ ಮಕ್ಕಳಿಗೆ ಸೀಟು ಕೊಡಿ ಎಂದು ಕೇಳಿದೆ, ಸೀಟು ಕೊಟ್ರು. ನನ್ನ ಮಕ್ಕಳು ಓದು ಎಂದು ಓದಿಸಿದ್ರು, 47ನೇ ವಯಸ್ಸಿಗೆ ಗ್ರಾಜುಯೇಟ್ ಆದೆ. ಮಂತ್ರಿಗಿಂತ ಗ್ರಾಜುಯೇಟ್ ಖುಷಿಯ ವಿಚಾರ ಎಂದು ಡಿಕೆಶಿ ಹೇಳಿದರು.
