ಆರ್‌ಎಸ್‌ಎಸ್‌ ಒಂದು ಭೂಗತ ಸಂಸ್ಥೆ, ದೊಣ್ಣೆ ಹಿಡಿದು ಓಡಾಡುವವರು ದನ, ಎಮ್ಮೆ ಕಾಯಲು, ಆರೆಸ್ಸೆಸ್‌ನವರನ್ನು ದನ ಕಾಯಲು ಕಳುಹಿಸಿ ಎಂದು ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಹೇಳಿದ್ದಾರೆ.

ಬೆಂಗಳೂರು (ಅ.18): ಆರ್‌ಎಸ್‌ಎಸ್‌ ಒಂದು ಭೂಗತ ಸಂಸ್ಥೆ, ದೊಣ್ಣೆ ಹಿಡಿದು ಓಡಾಡುವವರು ದನ, ಎಮ್ಮೆ ಕಾಯಲು, ಆರೆಸ್ಸೆಸ್‌ನವರನ್ನು ದನ ಕಾಯಲು ಕಳುಹಿಸಿ ಎಂದು ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್‌ ನೋಂದಾಯಿಸಿಕೊಳ್ಳುವ ತನಕ ಅದರ ಚಟುವಟಿಕೆಗಳ ಮೇಲೆ ನಿಷೇಧ ಹೇರುವಂತೆ ಆಗ್ರಹಿಸಿದರು. ಸಂಘ ಕಾನೂನಾತ್ಮಕವಾಗಿ ನೋಂದಣಿಯೇ ಆಗಿಲ್ಲ. ನೋಂದಾಣಿಯಾಗದ ಸಂಸ್ಥೆಯಿದ ಏನಾದರೂ ನಡೆದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಆರೆಸ್ಸೆಸ್ಸಿಗರು ಪೊಲೀಸರ ಅನುಮತಿ ಪಡೆದು ಯಾವುದೇ ಶಾಖೆ, ಬೈಠಕ್‌, ಪಥಸಂಚಲನ ನಡೆಸುವುದಿಲ್ಲ. ದೇಶದಲ್ಲಿ ಆರೆಸ್ಸೆಸ್‌ನವರಿಗೆ ಬೇರೆ ಕಾನೂನಿಲ್ಲ. ಹಾಗಾಗಿ ಕಲಬುರಗಿಯಲ್ಲಿ ಪಥಸಂಚಲನಕ್ಕೆ ಅವಕಾಶ ನೀಡಬಾರದು. ಈ ಸಂಬಂಧ ದನಿ ಎತ್ತಿದ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಬೆದರಿಕೆ ಹಾಕಿದ್ದಾರೆ. ಇವರೆಲ್ಲಾ ರಣಹೇಡಿಗಳೆಂದು ಕಿಡಿಕಾರಿದರು. ಆರೆಸ್ಸೆಸ್‌ ಕಾನೂನಾತ್ಮಕವಾಗಿ ನೋಂದಣಿ ಆಗದ ಸಂಸ್ಥೆ. ಹಾಗಾಗಿ ನೋಂದಣಿ ಆಗುವವರೆಗೂ ಸರ್ಕಾರ ಅದರ ಶಾಖೆ, ಬೈಠಕ್‌, ಪಥಸಂಚಲನ ಯಾವುದೇ ಚಟುವಟಿಕೆಗಳಿಗೂ ಅನುಮತಿ ನೀಡಬಾರದು. ನೋಂದಣಿಯಾಗದ ಸಂಸ್ಥೆಯಿಂದ ಏನಾದರೂ ನಡೆದರೆ ಯಾರು ಹೊಣೆ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಒತ್ತಾಯಿಸಿದ್ದಾರೆ.

ಆರೆಸ್ಸೆಸ್‌ ನೋಂದಣಿವರೆಗೆ ಚಟುವಟಿಕೆ ನಿಷೇಧಿಸಿ: ಆರೆಸ್ಸೆಸ್‌ ಒಂದು ನೋಂದಾಯಿತ ಸಂಸ್ಥೆಯೇ ಅಲ್ಲ. ಪೊಲೀಸರ ಅನುಮತಿ ಪಡೆದು ಅವರು ಯಾವುದೇ ಶಾಕೆ, ಬೈಠಕ್‌, ಪಥಸಂಚಲನ ನಡೆಸುವುದಿಲ್ಲ. ದೇಶದಲ್ಲಿ ಆರೆಸ್ಸೆಸ್‌ನವರಿಗೆ ಬೇರೆ ಕಾನೂನು ಇಲ್ಲ. ಹಾಗಾಗಿ ಕಲಬುರಗಿಯಲ್ಲಿ ಪಥಸಂಚಲನಕ್ಕೆ ಅವಕಾಶ ನೀಡಬಾರದು. ಈ ಸಂಬಂಧ ದನಿ ಎತ್ತಿದ್ದ ಸಚಿವ ಪ್ರಯಾಂಕ್‌ ಖರ್ಗೆ ಅವರಿಗೆ ಬೆದಕರಿಕೆ ಹಾಕಿದ್ದಾರೆ. ಇದೆಲ್ಲಾ ರಣಹೇಡಿಗಳ ಕೆಲಸ. ಧೈರ್ಯ ಇದ್ದರೆ ನೇರವಾಗಿ ಬರಲಿ. ನಾವು ಎದುರಿಸಲು ಸಿದ್ಧರಿದ್ದೇವೆ ಎಂದರು. ಆರೆಸ್ಸೆಸ್‌ ಒಂದು ಭೂಗತ ಸಂಸ್ಥೆ. ದೊಣ್ಣೆ ಹಿಡಿದುಕೊಂಡು ಓಡಾಡುವವರು ದನ, ಎಮ್ಮೆ ಕಾಯಲು. ಇವರನ್ನೂ ಬೇಕಿದ್ದರೆ ದನ ಕಾಯಲು ಕಳುಹಿಸಲಿ. ಗಣವೇಶ ಅಲ್ಲ ಯಾವ್‌ ವೇಷ ಆದ್ರೂ ಹಾಕಿಕೊಳ್ಳಲಿ ಎಂದರು.

ಸುಧಾ ಮೂರ್ತಿ ದಂಪತಿ ವಿರುದ್ಧ ಹರಿಪ್ರಸಾದ್‌ ವಾಗ್ದಾಳಿ

‘ತೆರಿಗೆ ವಿನಾಯಿತಿ ಸೇರಿದಂತೆ ಸರ್ಕಾರದಿಂದ ಹಲವು ಸವಲತ್ತುಗಳನ್ನು ಪಡೆದು ಜಗದಗಲ ಬೆಳೆದ ಸಂಸ್ಥೆಗಳ ಮಾಲೀಕರು, ಜನರ ಏಳಿಗೆಗಾಗಿ ನಡೆಯುತ್ತಿರುವ ಸಮೀಕ್ಷೆಯನ್ನೇ ತಿರಸ್ಕರಿಸುವುದು ಉದ್ಧಟತನದ ಪರವಾವಧಿ, ಸ್ವಾರ್ಥ ಮನಸ್ಥಿತಿ’ ಎಂದು ಬಿ.ಕೆ.ಹರಿಪ್ರಸಾದ್‌ ಕಿಡಿಕಾರಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದ ಇನ್ಫೋಸಿಸ್‌ನ ಡಾ.ಸುಧಾಮೂರ್ತಿ ದಂಪತಿ ನಿಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.