Global Survey : ಭಾರತದ ಬಗ್ಗೆ 24 ದೇಶಗಳ ಜನರು ತಮ್ಮ ಅಭಿಪ್ರಾಯ ಹೇಳಿವೆ. ಅದ್ರಲ್ಲಿ ಪುರುಷರು ಹಾಗೆ ಮಹಿಳೆಯರ ಅಭಿಪ್ರಾಯ ಭಿನ್ನವಾಗಿದೆ. ಸ್ವಭಾವತಃ ಯಾರು ಪಾಸಿಟಿವ್ ಥಿಂಕ್ ಹೆಚ್ಚು ಮಾಡ್ತಾರೆ ಗೊತ್ತಾ? 

ಅಮೆರಿಕದ ಚಿಂತಕರ ಚಾವಡಿ ಪ್ಯೂ ಸಂಶೋಧನಾ ಕೇಂದ್ರ ಜನವರಿ 8 ಮತ್ತು ಏಪ್ರಿಲ್ 26, 2025 ರ ನಡುವೆ ಅಂತರರಾಷ್ಟ್ರೀಯ ಸಮೀಕ್ಷೆ (International survey) ಒಂದನ್ನು ನಡೆಸಿದೆ. ಇದರಲ್ಲಿ, ವಿಶ್ವದ 24 ದೇಶಗಳ ಜನರಿಗೆ ಭಾರತದ ಬಗ್ಗೆ ಇರುವ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ಸಮೀಕ್ಷೆಯಲ್ಲಿ ಶೇಕಡಾ 47 ರಷ್ಟು ಜನರು ಭಾರತದ ಬಗ್ಗೆ ಸಕಾರಾತ್ಮಕ ಅಭಿಪ್ರಾಯವನ್ನು ನೀಡಿದ್ದಾರೆ. ಶೇಕಡಾ 38 ರಷ್ಟು ಜನರು ನಕಾರಾತ್ಮಕ ಅಭಿಪ್ರಾಯ ಹೊಂದಿದ್ದಾರೆ. ಇನ್ನು ಶೇಕಡಾ 13 ರಷ್ಟು ಜನರು ಯಾವುದೇ ಅಭಿಪ್ರಾಯವನ್ನು ನೀಡಲಿಲ್ಲ.ಈ ಸಮೀಕ್ಷೆಯಲ್ಲಿ ಒಂದು ಕುತೂಹಲಕಾರಿ ವಿಷಯ ಬೆಳಕಿಗೆ ಬಂದಿದೆ. 24 ದೇಶಗಳಲ್ಲಿ ಮಹಿಳೆಯರಿಗೆ ಹೋಲಿಸಿದ್ರೆ ಭಾರತದ ಬಗ್ಗೆ ಪುರುಷರು ಹೆಚ್ಚು ಸಕಾರಾತ್ಮಕ ದೃಷ್ಟಿಕೋನ ಹೊಂದಿದ್ದಾರೆ.

ಜಪಾನ್ನಲ್ಲಿ ಶೇಕಡಾ 65, ನೆದರ್ಲ್ಯಾಂಡ್ಸ್ನಲ್ಲಿ ಶೇಕಡಾ 54, ಜರ್ಮನಿಯಲ್ಲಿ ಶೇಕಡಾ 63, ಅರ್ಜೆಂಟೀನಾದಲ್ಲಿ ಶೇಕಡಾ 33, ಪೋಲೆಂಡ್ನಲ್ಲಿ ಶೇಕಡಾ 40 ಮತ್ತು ಹಂಗೇರಿಯಲ್ಲಿ ಶೇಕಡಾ 49 ರಷ್ಟು ಪುರುಷರು ಭಾರತದ ಬಗ್ಗೆ ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಿದ್ದಾರೆ. ಅದೇ ಈ ದೇಶಗಳಲ್ಲಿ ಮಹಿಳೆಯರು ಪುರುಷರಿಗಿಂತ ಭಾರತದ ಬಗ್ಗೆ ಕಡಿಮೆ ಸಕಾರಾತ್ಮಕ ಅಭಿಪ್ರಾಯವನ್ನು ಹೊಂದಿದ್ದಾರೆ.

ಪುರುಷ ಹಾಗೂ ಮಹಿಳೆಯರ ಆಲೋಚನೆ (idea) ಭಿನ್ನ : ವಿಷ್ಯ ಭಾರತದ ಬಗ್ಗೆ ಇರಲಿ ಇಲ್ಲ ಬೇರೆ ಯಾವುದೇ ಸಂಗತಿ ಇರಲಿ, ಪುರುಷ ಮತ್ತು ಮಹಿಳೆ ಆಲೋಚನೆ ಭಿನ್ನವಾಗಿರುತ್ತದೆ. ಅದ್ರ ಬಗ್ಗೆ ಸಾಕಷ್ಟು ಸಂಶೋಧನೆ ಕೂಡ ನಡೆದಿದೆ. ತಜ್ಞರ ಪ್ರಕಾರ, ಮಾನವನ ಮೆದುಳು ದಿನಕ್ಕೆ 6-8 ಮಿಲಿಯನ್ ಆಲೋಚನೆ ಮಾಡುತ್ತೆ. ಗಂಟೆಗೆ ಸುಮಾರು 2,500-3,300 ಆಲೋಚನೆ ಬಂದು ಹೋಗುತ್ತೆ. ಈ ಆಲೋಚನೆಗಳಲ್ಲಿ ಶೇಕಡಾ 90ರಷ್ಟು ಆಲೋಚನೆಗಳು ಅಪ್ರಸ್ತುತವಾಗಿರುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಕಾರಾತ್ಮಕ ಆಲೋಚನೆ ಜನರ ಜೀವನದ ಮೇಲೆ ಪ್ರಯೋಜನಕಾರಿ ಪರಿಣಾಮ ಬೀರುತ್ತದೆ. ಆಶಾವಾದಿಗಳು ಹೆಚ್ಚು ಕಾಲ ಬದುಕುತ್ತಾರೆ. ಪ್ರೇರಣಾತ್ಮಕ ಮಾತು ನಿಮ್ಮ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನೀವು ಮಹಿಳೆ ಮತ್ತು ಪುರುಷ ಅಂತ ಲಿಂಗ ಬೇಧ ಮಾಡಿದಾಗ ಯಾರು ಸಕಾರಾತ್ಮಕ ಯೋಚನೆ ಹೆಚ್ಚು ಮಾಡ್ತಾರೆ ಎಂಬುದನ್ನು ಸ್ಪಷ್ಟವಾಗಿ ಹೇಳೋದು ಕಷ್ಟ. ಇಬ್ಬರ ಸ್ವಭಾವ, ಆಲೋಚನೆ ಸಂಪೂರ್ಣ ಭಿನ್ನ. ವಿಷ್ಯದ ಮೇಲೆ ಇದು ನಿರ್ಣಯವಾಗುತ್ತದೆ.

ಶೇಕಡಾ 61 ರಷ್ಟು ಅಮೆರಿಕನ್ನರು ತಾವು ಆಶಾವಾದಿಗಳು ಎಂದ್ರೆ ಶೇಕಡಾ 19ರಷ್ಟು ಜನರು ತಾವು ನಿರಾಶಾವಾದಿಗಳು ಎಂದು ಒಪ್ಪಿಕೊಂಡಿದ್ದರು. 65 ವರ್ಷಕ್ಕಿಂತ ಮೇಲ್ಪಟ್ಟ ಶೇಕಡಾ 71 ಮಂದಿ ಆಶಾವಾದಿಗಳಾಗಿದ್ರು. ವಯಸ್ಸಿ ಚಿಕ್ಕದಿದ್ದಾಗ ಆಶಾವಾದ ಕಡಿಮೆ. ಸಾಮಾನ್ಯವಾಗಿ ಮಹಿಳೆಯರು ಹೆಚ್ಚು ಸಮಗ್ರ ಗ್ರಹಿಕೆಯನ್ನು ಹೊಂದಿರುತ್ತಾರೆ. ಅಂದ್ರೆ ತರ್ಕ ಮತ್ತು ಬುದ್ಧಿಶಕ್ತಿಯೊಂದಿಗೆ ಮಾಹಿತಿಯನ್ನು ಗಮನಿಸ್ತಾರೆ, ವಿಶ್ಲೇಷಣೆ ಮಾಡ್ತಾರೆ. ಮಹಿಳೆಯರು ಭಾವನೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಮಾತಿನ ಮೂಲಕ ಕೋಪ ವ್ಯಕ್ತಪಡಿಸುವ ಮಹಿಳೆಯರು ಉದ್ದೇಶಗಳನ್ನು ಅರ್ಥಮಾಡಿಕೊಳ್ಳಬಲ್ಲವರಾಗಿರ್ತಾರೆ.

ಇನ್ನು ಪುರುಷರು ಮಹಿಳೆಯರಿಗಿಂತ ಹೆಚ್ಚು ಸ್ಥಿರತೆಯನ್ನು ಹೊಂದಿರ್ತಾರೆ. ಪುರುಷರು ತಮ್ಮ ಜೀವಿತಾವಧಿಯಲ್ಲಿ ಕನಿಷ್ಠ ಹಾರ್ಮೋನುಗಳ ಬದಲಾವಣೆ ಹೊಂದುತ್ತಾರೆ. ಮಹಿಳೆಯರಲ್ಲಿ ಹಾರ್ಮೋನುಗಳ ಬದಲಾವಣೆ ಆಗಾಗ್ಗೆ ಮತ್ತು ತೀವ್ರವಾಗಿರುತ್ತವೆ. ಪುರುಷರು ತಮ್ಮ ಸಾಮರ್ಥ್ಯವನ್ನು ಅತಿಯಾಗಿ ಅಂದಾಜು ಮಾಡ್ತಾರೆ. ನಾನು ಎಲ್ಲವನ್ನೂ ಮಾಡಬಲ್ಲೆ, ಮಾಡಿದ್ದೇನೆ ಎಂಬ ಭಾವನೆ ಹೊಂದಿರ್ತಾರೆ. ಪುರುಷರು ಅತ್ಯುತ್ತಮವಾದದ್ದನ್ನು ಹೊರಗೆ ತರಲು ಮಿತಿಗಳನ್ನು ಮೆಟ್ಟಿ ನಿಲ್ತಾರೆ. ಈ ಹೋರಾಟ ಅವರನ್ನು ಬಲಶಾಲಿಯನ್ನಾಗಿ, ಆರೋಗ್ಯವಂತರನ್ನಾಗಿ, ಆತ್ಮವಿಶ್ವಾಸಿಗಳಾಗುವಂತೆ ಮಾಡುತ್ತದೆ. ಅವರ ಸಕಾರಾತ್ಮಕ ಆಲೋಚನೆ ಕಷ್ಟಕರ ಸಂದರ್ಭಗಳನ್ನು ಸುಲಭವಾಗಿ ಎದುರಿಸಲು ಸಹಾಯ ಮಾಡುತ್ತದೆ.