ದೇವರಾಯನದುರ್ಗ ದೇವಾಲಯದಲ್ಲಿ ಅರ್ಚಕರ ಮೇಲೆ ಹಲ್ಲೆ ನಡೆದ ಘಟನೆಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.
ತುಮಕೂರು: ದೇವರಾಯನದುರ್ಗ ದೇವಾಲಯದ ಅರ್ಚಕನ ಮೇಲೆ ಹಲ್ಲೆ ಸಂಬಂಧ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಾಗಿದೆ. ದೇವಾಲಯದ ಮೆಟ್ಟಿಲು ಬಳಿ ಅರ್ಚಕನ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಬೆನ್ನಲ್ಲೇ ಅರ್ಚಕ ನಾಗಭೂಷಣ್ ಅವರಿಂದ ದೂರು ಪಡೆದುಕೊಂಡು ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ನಂತರ ಮಹಿಳೆಯಿಂದ ದೂರು ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೀಗ ಅರ್ಚಕರ ಮೇಲಿನ ಹಲ್ಲೆ ಸಂಬಂಧ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಾಗಿದೆ.
ದೂರು-ಪ್ರತಿ ದೂರು, ಎರಡು ಎಫ್‌ಐಆರ್ ದಾಖಲು
ದೇವರಾಯನದುರ್ಗದಲ್ಲಿ ಅರ್ಚಕರನ್ನ ಹೊಡೆಯುವ ಒಂದು ವಿಡಿಯೋ ಬಂದಿತ್ತು. ಅರ್ಚಕರನ್ನ ಕರೆದು ದೂರು ಪಡೆಯಲಾಗಿತ್ತು. ಎಫ್ಐಆರ್ ಮಾಡಲಾಗಿದೆ. ಅದಾದ ಮೇಲೆ ಹಲ್ಲೆ ನಡೆಸಿದವರು ಕೂಡ ಬಂದಿದ್ರು. ಅವರಿಂದಲೂ ಒಂದು ದೂರು ಪಡೆದು ಎಫ್ಐಆರ್ ಮಾಡಲಾಗಿದೆ. ಎರಡು ಎಫ್ಐಆರ್ ಗಳನ್ನ ತನಿಖೆ ಮಾಡಿ ಚಾರ್ಜ್ ಶೀಟ್ ಮಾಡಲಾಗುತ್ತದೆ. ಅರ್ಚಕ ಅಸಭ್ಯವಾಗಿ ವರ್ತಿಸಿದ್ದರು ಎಂದು ಮಹಿಳೆ ದೂರು ನೀಡಿದ್ದಾರೆ. ಆ ದೂರಿನ ಸಂಬಂಧ ತನಿಖೆ ನಡೆಸಲಾಗುತ್ತದೆ. ಇತ್ತ ಬೇರೆ ಕಡೆಯಿಂದ ಬಂದ ಜನರು ನಮ್ಮನ್ನ ಹೊಡೆದಿದ್ದಾರೆ ಅಂತ ದೂರು ಕೊಟ್ಟಿದ್ದಾರೆ. ಅದೇ ರೀತಿಯಲ್ಲಿ ನಾವು ಎಫ್ಐಆರ್ ಮಾಡಿದ್ದೇವೆ ಎಂದು ತುಮಕೂರು ಎಸ್ ಪಿ ಅಶೋಕ್ ಕೆವಿ ಹೇಳಿದ್ದಾರೆ.
ಈ ಎಫ್ಐಆರ್ ನಲ್ಲಿ ಹಾಕಿರುವ ಸೆಕ್ಷನ್ ನಲ್ಲಿ ಜೈಲಿಗೆ ಕಳುಹಿಸುವ ಸೆಕ್ಷನ್ ಯಾವುದು ಇಲ್ಲ. ಸ್ಟೇಷನ್ ಬೆಲ್ ಕೊಟ್ಟು ಕಳುಹಿಸಲಾಗಿದೆ. ತನಿಖೆ ನಡೆಸಲಾಗ್ತಿದೆ, ತನಿಖೆ ಆಗುವವರೆಗೂ ನಾವು ಏನನ್ನು ಹೇಳೋದಿಕ್ಕೆ ಬರಲ್ಲ ಎಂದು ಎಸ್‌ಪಿ ಅಶೋಕ್ ಮಾಹಿತಿ ನೀಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
ದೇವಸ್ಥಾನದ ಮೆಟ್ಟಿಲುಗಳ ಮೇಲೆ ಇಬ್ಬರು ಯುವಕರು ಮತ್ತು ಇಬ್ಬರು ಮಹಿಳೆಯರು ಅರ್ಚಕರ ಮೇಲೆ ಹಲ್ಲೆ ನಡೆಸುತ್ತಿರುತ್ತರೆ. ಓರ್ವ ಯುವಕ ಕೋಲು ಹಿಡಿದು ಅರ್ಚಕ ನಾಗಭೂಷಣ್ ಅವರನ್ನು ಥಳಿಸುತ್ತಾರೆ. ಅಸಭ್ಯವಾಗಿ ಮೈ ಮುಟ್ಟುತ್ತೀಯಾ ಎಂದು ಹೇಳಿ ಮಹಿಳೆಯರು ಸಹ ಅರ್ಚಕರ ಮೇಲೆ ಹಲ್ಲೆ ನಡೆಸುತ್ತಾರೆ. ಈ ಎಲ್ಲಾ ದೃಶ್ಯಗಳ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ವಿಡಿಯೋ ವೈರಲ್ ಬೆನ್ನಲ್ಲೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
