ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಕಾಂಗ್ರೆಸ್ ಶಾಸಕ ಕೆ. ಹರೀಶ್ ಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಡಿರುವ ಆರೋಪಗಳಿಗೆ ಶೆಟ್ಟಿಗೆ ಹುಚ್ಚು ಹಿಡಿದಿದೆ ಎಂದು ಹೇಳಿದ್ದಾರೆ. 

ಮೈಸೂರು: ಧರ್ಮಸ್ಥಳದ ಸೌಜನ್ಯ ಪರ ಹೋರಾಟದಲ್ಲಿ ಗುರುತಿಸಿಕೊಂಡಿರುವ ಮಹೇಶ್ ಶೆಟ್ಟಿ ತಿಮರೋಡಿ ಕಾಂಗ್ರೆಸ್ ಶಾಸಕ ಕೆ.ಹರೀಶ್ ಗೌಡ ಆಕ್ರೋಶ ಹೊರಹಾಕಿದ್ದಾರೆ. ಸಿಎಂ ಸಿದ್ದರಾಮಯ್ಯ 24 ಕೊ*ಲೆ ಮಾಡಿದ್ದಾರೆ ಎಂಬ ಮಹೇಶ್ ಶೆಟ್ಟಿ ತಿಮರೋಡಿ ಹೇಳಿಕೆಗೆ ಮೈಸೂರಿನಲ್ಲಿ ಶಾಸಕ ಕೆ. ಹರೀಶ್ ಗೌಡ ಪ್ರತಿಕ್ರಿಯಿಸಿದರು. ಮಹೇಶ್ ಶೆಟ್ಟಿ ತಿಮರೋಡಿಗೆ ಹುಚ್ಚು ಹಿಡಿದಿದೆ. ಅವನಿಗೆ ತಲೆ ಕೆಟ್ಟಿದೆ, ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾನೆ. ಕಾನೂನಾತ್ಮಕವಾಗಿ ತಕ್ಕ ಪಾಠ ಕಲಿಸುತ್ತೇವೆ ಎಂದು ಹೇಳಿದ್ದಾರೆ. ಶ್ರೀ ಕ್ಷೇತ್ರ ಕರ್ನಾಟಕಕ್ಕೆ ಶ್ರದ್ಧ ಕೇಂದ್ರ. ಧರ್ಮಸ್ಥಳದ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾನೆ ಎಂದು ಶಾಸಕರು ಕಿಡಿಕಾರಿದರು. ಸುಮಾರು 2 ವರ್ಷಗಳ ಹಿಂದೆ ಸಿದ್ದರಾಮಯ್ಯ ವಿರುದ್ಧ ಮಹೇಶ್ ಶೆಟ್ಟಿ ತಿಮರೋಡಿ ಈ ಹೇಳಿಕೆಯನ್ನು ನೀಡಿದ್ದರು.

ಕಾಂಗ್ರೆಸ್ ಪಕ್ಷದಿಂದಲೇ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ನೂರಕ್ಕೆ ನೂರಷ್ಟು ಎಫ್‌ಐಆರ್ ದಾಖಲಿಸುತ್ತೇವೆ. ಇನ್ನು ಗಿರೀಶ್ ಮಟ್ಟಣವರ್ ಒಬ್ಬ ಹುಚ್ಚ. ಧರ್ಮಸ್ಥಳ ಕಳಂಕರಹಿತವಾದ ಕ್ಷೇತ್ರ. ಇದನ್ನ ತೋರಿಸಲು ರಾಜ್ಯ ಸರ್ಕಾರ ಎಸ್ಐಟಿ ಮಾಡಿದೆ.ಇದರ ಕ್ರೆಡಿಟ್ ನಮ್ಮ ಸರ್ಕಾರಕ್ಕೆ ಸಲ್ಲಬೇಕು. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದರು.

ಸುಳ್ಳು ಹೆಚ್ಚು ದಿನ ಇರುವುದಿಲ್ಲ

ನಮ್ಮ ಕ್ಷೇತ್ರದಿಂದ ಧರ್ಮಸ್ಥಳ ಚಲೋ ಮಾಡುತ್ತೇವೆ‌. ಎಷ್ಟು ಜನರು ಬರುತ್ತಾರೆ ಎಲ್ಲರನ್ನೂ ಕರೆದುಕೊಂಡು ಹೋಗಿ ಮಂಜುನಾಥ ಸ್ವಾಮಿಯ ದರ್ಶನ ಮಾಡಿಸುತ್ತೇನೆ. ಧರ್ಮಸ್ಥಳ ಕ್ಷೇತ್ರದ ಬಗ್ಗೆ ಮಟಣ್ಣನವರು, ತಿಮ್ಮರೂಡಿ ಅಪಪ್ರಚಾರ ಮಾಡುತ್ತಿದ್ದಾರೆ. ಸೌಜನ್ಯಗೆ ಅನ್ಯಾಯವಾಗಿದೆ. ಹೆಣ್ಣು ಮಗುವಿನ ಪರವಾಗಿ ನಾವಿದ್ದೇವೆ‌. ಸೌಜನ್ಯ ವಿಚಾರದಲ್ಲಿ ಪೊಲೀಸರು ಸರಿಯಾದ ತನಿಖೆ ಮಾಡಲಿಲ್ಲ. ಸೌಜನ್ಯ ಆತ್ಮಕ್ಕೆ ಶಾಂತಿ ಸಿಗುವ ಕೆಲಸವನ್ನ ನಮ್ಮ ಸರ್ಕಾರ ಮಾಡುತ್ತದೆ. ಷಡ್ಯಂತ್ರದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಸುಳ್ಳು ಹೆಚ್ಚು ದಿನ ಇರುವುದಿಲ್ಲ ಎಂದರು.

ದೇಗುಲದ ಪಾವಿತ್ರ್ಯತೆ ಕಾಪಾಡಿಯೇ ತನಿಖೆ

ವಿಧಾನಸೌಧ ಕೆಂಗಲ್ ಗೇಟ್ ಬಳಿ ಮಾಧ್ಯಮಗಳೊಂದಿಗೆ ಧರ್ಮಸ್ಥಳ ವಿಚಾರವಾಗಿ ಸಿಎಂ ಕಾನೂನು ಸಲಹೆಗಾರ ಶಾಸಕ ಪೊನ್ನಣ್ಣ ಮಾತನಾಡಿದರು. ಬಿಜೆಪಿಯಿಂದ ಇದನ್ನೇ ನಿರೀಕ್ಷೆ ಮಾಡಲು ಸಾಧ್ಯ ಎಂದು ಪ್ರಶ್ನೆ ಮಾಡಿದ ಅವರು, ಧರ್ಮ ಜಾತಿಯ ಮೇಲೆ ರಾಜಕೀಯ ಮಾಡ್ತಾರೆ. ದೂರುದಾರನ 164ಹೇಳಿಕೆಯ ಆಧಾರದ ಮೇಲೆ ತನಿಖೆ ಮಾಡ್ತಿದ್ದಾರೆ. ಪಾರದರ್ಶಕ ತನಿಖೆಯನ್ನ ಸರ್ಕಾರ ಮಾಡ್ತಿದೆ. ಇದನ್ನ ರಾಜಕಾರಣ ಮಾಡಬಾರದು. ಇವರು ಧರ್ಮಸ್ಥಳಕ್ಕೆ ಹೋಗಿರೊದು‌‌ ನೋಡಿದ್ರೆ ಇವರೇ ಇದರ ಹಿಂದೆ ಇದ್ದಾರೆ ಎನ್ನಿಸುತ್ತೆ ಎಂದರು.

ಬಿಜೆಪಿಯವರು ಅಭಿವೃದ್ಧಿ ವಿಚಾರವಾಗಿ ಮಾತಾಡಲ್ಲ. ಗೃಹ ಸಚಿವರು ತನಿಖೆಯ ಬಗ್ಗೆ ಹೇಳಿದ್ದಾರೆ. ದೂರು‌ದಾರನ ಬಗ್ಗೆಯೂ ತನಿಖೆ ಮಾಡ್ತಿದ್ದಾರೆ. ನಾವು ಸ್ವಲ್ಪ ತಾಳ್ಮೆಯಿಂದ ಕಾಯಬೇಕಷ್ಟೆ. ದೇಗುಲದ ಪಾವಿತ್ರ್ಯತೆ ಕಾಪಾಡಿಯೇ ತನಿಖೆ ಮಾಡುತ್ತಿದ್ದೇವೆ. ಆದ್ರೇ ಬಿಜೆಪಿ ಈಗ ರ್ಯಾಲಿ ಕೂಡ ಮಾಡಿದೆ. ಇವರ ನಡೆ ನೋಡಿದ್ರೇ ಇದ್ರ ಹಿಂದೆ ಅವ್ರೇ ಹಿಂದೆ ಇದ್ದಾರೆ ಅನಿಸುತ್ತಿದೆ ಎಂದು ಶಾಸಕ ಪೊನ್ನಣ್ಣ ಗಂಭೀರ ಆರೋಪ ಮಾಡಿದರು.

ಇದನ್ನೂ ಓದಿ: ಧರ್ಮಸ್ಥಳ ಕೇಸ್: ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಬಿಟ್ಟವರಿಗೆ SIT ಬಿಗ್ ಶಾಕ್!

ಧರ್ಮದಲ್ಲಿ ರಾಜಕಾರಣ ಇರಬಾರದು

ಬಿಜೆಪಿಯಿಂದ ಧರ್ಮಸ್ಥಳ ಚಲೋಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಧರ್ಮಸ್ಥಳಕ್ಕೆ ರಾಜಕಾರಣ ಉಪಯೋಗಿಸಿಕೊಂಡಿದ್ದಾರೆ. ರಾಜಕಾರಣದಲ್ಲಿ ಧರ್ಮ ಇರಬೇಕೇ ಹೊರತು ಧರ್ಮದಲ್ಲಿ ರಾಜಕಾರಣ ಇರಬಾರದು. ಬಿಜಪಿಯವರು ಧರ್ಮದಲ್ಲಿ ರಾಜಕಾರಣ ಮಾಡ್ತಿದ್ದಾರೆ. ಧರ್ಮಸ್ಥಳದ ಎಸ್‌ಐಟಿ ತನಿಖೆ ಬಗ್ಗೆ ಗೃಹ ಸಚಿವರು ಮಾತನಾಡುತ್ತಾರೆ ಎಂದು ಹೇಳಿದರು.

Scroll to load tweet…