ನರೇಂದ್ರ ಮೋದಿ ದೇಶಕ್ಕೆ ಪ್ರಧಾನಿ. ಆದರೆ ಬಿಜೆಪಿ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತ. ಬಿಜೆಪಿ ಸಭೆಯಲ್ಲಿ ಕೊನೆಯ ಬೆಂಚ್‌ನಲ್ಲಿ ಕುಳಿತ ಫೋಟೋವನ್ನು ನಟ, ಸಂಸದ ರವಿ ಕಿಶನ್ ಹಂಚಿಕೊಂಡಿದ್ದಾರೆ.
ನವದೆಹಲಿ (ಸೆ.07) ಪ್ರಧಾನಿ, ಸಚಿವರು, ಸಂಸದರು, ಶಾಸಕರು ಯಾರೇ ಆದರೂ ಬಿಜೆಪಿ ಪಕ್ಷದೊಳಗೆ ಎಲ್ಲರೂ ಕಾರ್ಯಕರ್ತರು ಅನ್ನೋ ವಾತಾವರಣವಿದೆ. ಪಕ್ಷದ ಕಾರ್ಯಕ್ರಮದಲ್ಲಿ ಪಕ್ಷದ ಅಧ್ಯಕ್ಷರು, ಪಧಾದಿಕಾರಿಗಳೇ ಪ್ರಮುಖ. ದೇಶಕ್ಕೆ ಪ್ರಧಾನಿಯಾದರೂ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತ. ಇದೀಗ ಬಿಜೆಪಿ ಸಂಸದ, ನಟ ರವಿ ಕಿಶನ್ ಪ್ರಧಾನಿ ಮೋದಿಯ ಫೋಟೋ ಒಂದು ಹಂಚಿಕೊಂಡಿದ್ದಾರೆ. ಉಪ ರಾಷ್ಟ್ರಪತಿ ಚುನಾವಣೆ ಕುರಿತು ಬಿಜೆಪಿ ಆಯೋಜಿಸಿದ ಸಭೆಯಲ್ಲಿ ಬಿಜೆಪಿ ಸಂಸದರು, ಸಚಿವರು ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು. ಪ್ರಧಾನಿ ಮೋದಿ ಕೂಡ ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಈ ಸಭೆಯಲ್ಲಿ ಮೋದಿ ಸಭೆಯ ಕೊನೆಯ ಸಾಲಿನ ಆಸನದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋವನ್ನು ರವಿ ಕಿಶನ್ ಹಂಚಿಕೊಂಡು, ಈ ಪಕ್ಷದಲ್ಲಿ ಎಲ್ಲರೂ ಕಾರ್ಯಕರ್ತರೇ. ಇದು ಬಿಜೆಪಿ ಪಕ್ಷದ ಶಕ್ತಿ ಎಂದಿದ್ದಾರೆ.
ಎರಡು ದಿನದ ಕಾರ್ಯಗಾರದಲ್ಲಿ ಕೊನೆಯ ಸಾಲಿನಲ್ಲಿ ಮೋದಿ
ಉಪ ರಾಷ್ಟ್ರಪತಿ ಚುನಾವಣೆ ಕುರಿತು ಎನ್‌ಡಿಎ ಸಂಸದರ ವರ್ಕ್‌ಶಾಪ್ ಆಯೋಜಿಸಿತ್ತು. ಇದು ಬಿಜೆಪಿ ಪಕ್ಷದ ಮಹತ್ವದ ಕಾರ್ಯಾಗಾರವಾಗಿದೆ.. ಈ ಸಭೆಗೆ ಬಿಜೆಪಿ ನಾಯಕರು, ಸಂಸದರು ಪಾಲ್ಗೊಂಡಿದ್ದಾರೆ. ಎರಡು ದಿನದ ಕಾರ್ಯಾಗಾರದಲ್ಲಿ ಹಲವು ವಿಚಾರಗಳ ಮಂಡನೆಯಾಗಲಿದೆ, ಚರ್ಚೆಯಾಗಲಿದೆ. ಈ ಮೂಲಕ ಸಂಸತ್ತಿನ ಹಿರಿಮೆ, ಗರಿಮೆ, ಪರಿಣಾಮಕಾರಿಯಾಗಿ ಸಂಸತ್ತು ಮುನ್ನಡೆಸುವುದು ಸೇರಿದಂತೆ ಹಲವು ವಿಚಾರಗಳ ಮಂಡನೆಯಾಗಲಿದೆ. ಈ ಕಾರ್ಯಾಗರದಲ್ಲಿ ಮೋದಿ ಕೊನೆಯ ಸಾಲಿನಲ್ಲಿ ಕುಳಿತಿರುವ ಫೋಟೋ ಇದೀಗ ಭಾರಿ ವೈರಲ್ ಆಗುತ್ತಿದೆ.
ಎನ್‌ಡಿಎ ಸಂಸದರ ಎರಡು ದಿನದ ಕಾರ್ಯಾಗಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೊನೆಯ ಸಾಲಿನಲ್ಲಿ ಕುಳಿತು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಎನ್‌ಡಿಎ ಸಂಸದರು ಬಿಜೆಪಿಯ ಶಕ್ತಿ. ಇಲ್ಲಿ ಪ್ರತಿಯೊಬ್ಬ ಕಾರ್ಯಕರ್ತ ಒಂದು ಶಕ್ತಿ ಎಂದು ರವಿ ಕಿಶನ್ ಫೋಟೋ ಹಂಚಿಕೊಂಡಿದ್ದಾರೆ.
ದಿಢೀರ್ ಭಾರತದ ಕುರಿತು ಮೆತ್ತಗಾದ ಡೊನಾಲ್ಡ್ ಟ್ರಂಪ್!
ಸೆಪ್ಟೆಂಬರ್ 9ಕ್ಕೆ ಉಪ ರಾಷ್ಟ್ರಪತಿ ಚುನಾವಣೆ
ಜಗದೀಪ್ ಧನ್ಕರ್ ರಾಜೀನಾಮೆಯಿಂದ ತೆರವಾದ ಉಪ ರಾಷ್ಟ್ರಪತಿ ಸ್ಥಾನಕ್ಕೆ ಸೆಪ್ಟೆಂಬರ್ 9 ರಂದು ಚುನಾವಣೆ ನಡೆಯಲಿದೆ. ಎನ್‌ಡಿಎ ಅಭ್ಯರ್ಥಿಯಾಗಿ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಸಿಪಿ ರಾಧಾಕೃಷ್ಣನ್ ಕಣದಲ್ಲಿದ್ದರೆ, ಇಂಡಿಯಾ ಒಕ್ಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ ಸುದರ್ಶನ ರೆಡ್ಡಿ ಕಣದಲ್ಲಿದ್ದಾರೆ. ಮತಗಳು, ಬಲಾಬಲ ನೋಡಿದರೆ ಸಿಪಿ ರಾಧಕೃಷ್ಣನ್ ಗೆಲುವಿನ ಫೇವರಿಟ್ ಅಭ್ಯರ್ಥಿಯಾಗಿದ್ದಾರೆ.
ಈ ಕಾರ್ಯಾಗಾರದಲ್ಲಿ ಇತ್ತೀಚೆಗೆ ಕೇಂದ್ರ ಸರ್ಕಾರ ಘೋಷಿಸಿದ ಜಿಎಸ್‌ಟಿ ತೆರಿಗೆ ಕಡಿತ ಕುರಿತು ಚರ್ಚಿಸಲಾಗಿದೆ. ಕೇಂದ್ರದ ಈ ನಿರ್ಧಾರವನ್ನು ಎನ್‌ಡಿಎಂ ಸಂಸದರ ಕಾರ್ಯಾಗಾರ ಸಮ್ಮತಿ ವ್ಯಕ್ತಪಡಿಸಿದೆ.
ಅಧಿವೇಶನ, ಪ್ರಚಾರದ ವೇಳೆ ಪ್ರವಾಸ, ರಾಹುಲ್ ಗಾಂಧಿ ಮಲೇಷಿಯಾ ಟ್ರಿಪ್ ಗೇಲಿ ಮಾಡಿದ ಬಿಜೆಪಿ
