ತಮ್ಮ ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ಬೆಂಗಳೂರಲ್ಲಿ 46 ಬಾವಿ ಹಾಗೂ ಕೆರೆಗಳ ಪುನರುಜ್ಜೀವನ ಮಾಡಿದ ಪರಿಸರ ಪ್ರೇಮಿ ಎಂಜಿನಿಯರ್‌ ಕಪಿಲ್‌ ಶರ್ಮಾ ಎಂಬುವರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. 40 ಬಾವಿ ಮತ್ತು 6 ಕೆರೆ ಪುನರುಜ್ಜೀವನಗೊಳಿಸಿದ್ದಾರೆ.

 ನವದೆಹಲಿ: ತಮ್ಮ ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ಬೆಂಗಳೂರಲ್ಲಿ 46 ಬಾವಿ ಹಾಗೂ ಕೆರೆಗಳ ಪುನರುಜ್ಜೀವನ ಮಾಡಿದ ಪರಿಸರ ಪ್ರೇಮಿ ಎಂಜಿನಿಯರ್‌ ಕಪಿಲ್‌ ಶರ್ಮಾ ಎಂಬುವರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ‘ಶರ್ಮಾ ತಮ್ಮ ತಂಡದೊಂದಿಗೆ ಅಭಿಯಾನ ನಡೆಸಿ, ಈಗಾಗಲೇ 40 ಬಾವಿ ಮತ್ತು 6 ಕೆರೆ ಪುನರುಜ್ಜೀವನಗೊಳಿಸಿದ್ದಾರೆ. ಜತೆಗೆ ಮರ ನೆಡುವ ಅಭಿಯಾನದಲ್ಲೂ ಸಕ್ರಿಯರಾಗಿದ್ದಾರೆ. ಇದರಲ್ಲಿ ಅವರು ಉದ್ದಿಮೆಗಳು ಮತ್ತು ಸ್ಥಳೀಯ ನಿವಾಸಿಗಳನ್ನೂ ಸೇರಿಸಿಕೊಂಡಿರುವುದು ಗಮನಾರ್ಹ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೇ ವೇಳೆ, ಕರ್ನಾಟಕದ ಕಾಫಿ ಹಾಗೂ ಬಿಎಸ್‌ಎಫ್‌ ಸೇರಿರುವ ಕರ್ನಾಟಕದ ಪ್ರಸಿದ್ಧ ಮುಧೋಳ ನಾಯಿಗಳನ್ನೂ ಅವರು ಶ್ಲಾಘಿಸಿದ್ದಾರೆ.

 ಮನ್‌ ಕೀ ಬಾತ್‌ನಲ್ಲಿ ಮೋದಿ ಪ್ರಶಂಸೆ

ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ಸ್ವಚ್ಛತೆ ಮತ್ತು ಅದಕ್ಕಾಗಿ ಕೈಗೊಳ್ಳಲಾದ ಕ್ರಮಗಳ ಬಗ್ಗೆ ತಮ್ಮ ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ನೆನಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ, ‘ಕೆರೆಗಳ ನಾಡೆಂದೇ ಕರೆಯಲಾಗುವ ಬೆಂಗಳೂರಿನಲ್ಲಿ ಕಪಿಲ್‌ ಶರ್ಮಾ ಎಂಬ ಎಂಜಿನಿಯರ್‌ ಒಬ್ಬರು ತಮ್ಮ ತಂಡದೊಂದಿಗೆ ಕೂಡಿಕೊಂಡು ಅಭಿಯಾನವೊಂದನ್ನು ಆಯೋಜಿಸಿದ್ದು, ಈಗಾಗಲೇ 40 ಬಾವಿ ಮತ್ತು 6 ಕೆರೆಗಳನ್ನು ಪುನರುಜ್ಜೀವನಗೊಳಿಸಿದ್ದಾರೆ. ಜತೆಗೆ ಅವರು ಮರ ನೆಡುವ ಅಭಿಯಾನದಲ್ಲೂ ಸಕ್ರಿಯರಾಗಿದ್ದಾರೆ. ಇದರಲ್ಲಿ ಅವರು ಉದ್ದಿಮೆಗಳು ಮತ್ತು ಸ್ಥಳೀಯ ನಿವಾಸಿಗಳನ್ನೂ ಸೇರಿಸಿಕೊಂಡಿರುವುದು ಗಮನಾರ್ಹ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಸ ಕೊಡುವವರಿಗೆ ಹೊಟ್ಟೆ ತುಂಬ ಊಟ

ಇದೇ ವೇಳೆ, ಛತ್ತೀಸಗಢದ ಅಂಬಿಕಾಪುರದಲ್ಲಿ ಕಸ ಕೊಡುವವರಿಗೆ ಹೊಟ್ಟೆ ತುಂಬ ಊಟ ಕೊಡುವ ಕೆಫೆ ಆರಂಭಿಸಿದ ಮಹಾನಗರ ಪಾಲಿಕೆಯ ಕೆಲಸವನ್ನೂ ಶ್ಲಾಘಿಸಿದ್ದಾರೆ.

2007ರಿಂದ ‘ಸೇಟ್ರೀಸ್‌’ ಎಂಬ ಎನ್‌ಜಿಒ ನಡೆಸುತ್ತಿರುವ ಶರ್ಮಾ, ತಮ್ಮ ಸಂಸ್ಥೆ ಮೂಲಕ ನಗರ ಪ್ರದೇಶಗಳಲ್ಲಿ ಸಸಿ ನೆಡುವ ಹಾಗೂ ಕೆರೆಗಳಿಗೆ ಮರುಹುಟ್ಟು ನೀಡುವ ಕೆಲಸದಲ್ಲಿ ತೊಡಗಿದ್ದಾರೆ. ಇವರು ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ ಹಾಗೂ ಹೈದ್ರಾಬಾದ್‌ನಲ್ಲೂ ಈ ಕೆಲಸ ಮಾಡಿದ್ದಾರೆ.