ತಂದೆಯಾದ 89ರ ವೃದ್ಧ: ವಯಾಗ್ರ ಬೇಕಿಲ್ಲ ಎಂದಾತನಿಗೆ DNA ಟೆಸ್ಟ್ ಮಾಡಲು ನೆಟ್ಟಿಗರ ಸಲಹೆ!
ತಂದೆಯಾಗುವ ಕ್ಷಣ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಮರೆಯಲಾಗದ ನೆನಪಾಗಿ ಉಳಿಯುತ್ತದೆ. ವಿಜ್ಞಾನ ಪುರುಷ ಹಾಗೂ ಸ್ತ್ರೀಯರಿಗೆ ಮಗುವಿಗೆ ಜನ್ಮ ನೀಡುವ ವಿಚಾರದಲ್ಲಿ ಕೆಲ ನಿಯಮಗಳನ್ನು ಮಾಡಿದೆ. ಇದರ ಅನ್ವಯ ಕೆಲ ವರ್ಷದ ಅವಧಿ ಬಳಿಕ ಮಹಿಳೆ ತಾಯಿಯಾಗಲು ಸಾಧ್ಯವಿಲ್ಲ. ಆದರೆ ಅತ್ತ ಪುರುಷರ ದೇಹ ಯಾವುದೇ ಹರೆಯದಲ್ಲಾದರೂ ಮಗು ಹುಟ್ಟಿಸಲು ತಯಾರಿರುತ್ತದೆ. ಆದರೆ ಇದಕ್ಕೂ ಕೆಲ ನಿಯಮಗಳಿವೆ. ಇತ್ತೀಚೆಗಷ್ಟೇ ಫಾರ್ಮುಲಾ ವನ್‌ನ ಮಾಜಿ ಮುಖ್ಯಸ್ಥ ಬರ್ನಿ ಎಕ್ಲೆಸ್ಟನೆ ತಾನು ತಂದೆಯಾಗಿದ್ದೇನೆಂಬ ವಿಚಾರವನ್ನು ಜನರೊಂದಿಗೆ ಜಹಂಚಿಕೊಂಡಿದ್ದಾರೆ. 89 ವರ್ಷ ಹರೆಯದಲ್ಲಿ ಒಂದು ಮಗುವಿನ ತಂದೆಯಾದ ಬರ್ನಿ ತಾನು ಇನ್ನೊಂದು ಮಗುವಿನ ತಂದೆಯಾಗ ಬಯಸಿದ್ದೇನೆ ಎಂದಿದ್ದಾರೆ. ಅವರ 35 ವರ್ಷದ ಹೆಂಡತಿ ಫಿಬಿಯಾನಾ ಫ್ಲಾಸಿ ಜೊತೆ ಇದು ಅವರ ಮೊದಲ ಮಗುವಾಗಿದೆ. ಈವರೆಗೆ ಬರ್ನಿ ಒಟ್ಟು ನಾಲ್ಕು ಮಕ್ಕಳ ತಂದೆಯಾಗಿದ್ದಾರೆ. ಇನ್ನು ಈ ವಯಸ್ಸಿನಲ್ಲಿ ತಂದೆಯಾದ ಬರ್ನಿ ತನ್ನ ಅನುಭವವನ್ನು ಜನರೊಂದಿಗೆ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಈ ಹಿರಿಯ ವಯಸ್ಸಲ್ಲಿ ತಂದೆಯಾಗಲು ಏನು ಮಾಡುತ್ತಾರೆಂದು ಬಹಿರಂಗಪಡಿಸಿದ್ದಾರೆ.

ಫಾರ್ಮುಲಾ ವನ್‌ನ ಮಾಜಿ ಮುಖ್ಯಸ್ಥ ಬರ್ನಿ ಎಕ್ಲೆಸ್ಟನೆ ಜುಲೈ 2 ರಂದು ಒಂದು ಮಗುವಿನ ತಂದೆಯಾಗಿದ್ದಾರೆ. 89ನೇ ವಯಸ್ಸಿನಲ್ಲಿ ತಂದೆಯಾದ ಬರ್ನಿ ಇಡೀ ವಿಶ್ವವನ್ನೇ ಅಚ್ಚರಿಗೀಡು ಮಾಡಿದ್ದಾರೆ.

ಬರ್ನಿ ಇದಕ್ಕೂ ಮೊದಲು ಮೂವರು ಹೆಣ್ಣು ಮಕ್ಕಳ ತಂದೆಯಾಗಿದ್ದಾರೆ. ಸದ್ಯ ತನ್ನ ಮೂವರು ಹೆಣ್ಣು ಮಕ್ಕಳಿಗೆ ಓರ್ವ ತಮ್ಮನನ್ನು ನೀಡಿ ಅವರು ಬಹಳ ಖುಷಿಯಿಂದ ಇದ್ದಾರೆ. ಜೊತೆಗೆ ತಾನು ಇನ್ನಷ್ಟು ಮಕ್ಕಳ ತಂದೆಯಾಗಲು ತಯಾರಿದ್ದೇನೆಂದು ಘೋಷಿಸಿದ್ದಾರೆ.

ಇನ್ನು ಇಷ್ಟು ವಯಸಸ್ಸಾದರೂ ನೀವು ಹೇಗೆ ಫಿಟ್ನೆಸ್ ಕಾಯ್ದುಕೊಂಡಿದ್ದೀರೆಂದು ಕೇಳಿದಾಗ ನಗುತ್ತಾ ಉತ್ತರಿಸಿದ ಬರ್ನಿ ಇದರ ಸೀಕ್ರೆಟ್ ವಿಟಮಿನ್ ಡಿ ಎಂದಿದ್ದಾರೆ. ಜೊತೆಗೆ ತಂದೆಯಾಗಲು ಬಯಸುವವರಿಗೆ ಇದೇ ಸಲಹೆ ನೀಡಿದ್ದಾರೆ.

ಇನ್ನು ವಯಾಗ್ರದಿಂದ ತಮ್ಮ ಸೆಕ್ ಲೈಫ್ ಚೆನ್ನಾಗಿರುತ್ತದೆ ಎಂದು ಹಲವರ ಅಭಿಪ್ರಾಯವಾಗಿದೆ. ಆದರೆ ಹಾಗೇನೂ ಇಲ್ಲ. ಎಲ್ಲಾ ವಿಚಾರಗಳ ಸೀಕ್ರೆಟ್ ಎಂದರೆ ಅದು ವಿಟಮಿನ್ ಡಿ ಎಂದು ಬರ್ನಿ ತಿಳಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ತನ್ನ ಮಗುವಿನೊಂದಿಗಿರುವ ಫೋಟೋ ಶೇರ್ ಮಾಡಿದ ಬಳಿಕ ನೆಟ್ಟಿಗರು ಬರ್ನಿಗೆ ತಮಾಷೆ ಮಾಡಿದ್ದಾರೆ. ಅನೇಕ ಮಂದಿ ಬರ್ನಿಗೆ ಮಗುವಿನ ಡಿಎನ್‌ಎ ಟೆಸ್ಟ್ ಮಾಡಲೂ ಸಲಹೆ ನೀಡಿದ್ದಾರೆ.

ಆದರೆ ಈ ಎಲ್ಲಾ ಕಮೆಂಟ್‌ಗಳಿಂದ ಬರ್ನಿ ಮೇಲೆ ಯಾವುದೇ ಪ್ರಭಾವ ಬೀರಿಲ್ಲ. ತಾನು ಸದ್ಯ ಈ ಪುಟ್ಟ ಕಂದನಿಗೆ ಮತ್ತೊಬ್ಬ ತಮ್ಮನನ್ನು ನೀಡಲು ತಯಾರಿದ್ದೇನೆಂದು ಹೇಳಿದ್ದಾರೆ. ಇಷ್ಟೇ ಅಲ್ಲದೇ ತಾನು ತನ್ನ ಹೆಣ್ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಲಿಲ್ಲ. ಆದರೆ ಈ ಮಗುವಿನೊಂದಿಗೆ ಸಾಧ್ಯವಾದಷ್ಟು ಹೆಚ್ಚು ಸಮಯ ಕಳೆಯುವುದಾಗಿ ಹೇಳಿದ್ದಾರೆ.

ಬರ್ನಿಯ ಹಿರಿಯ ಮಗಳ ವಯಸ್ಸು 65 ಗಿದ್ದರೆ, ಎರಡನೇ ಮಗಳ ವಯಸ್ಸು 36 ಹಾಗೂ ಮೂರನೇ ಮಗಳ ವಯಸ್ಸು 31.

ಅಕ್ಟೋಬರ್‌ನಲ್ಲಿ ಬರ್ನಿಗೆ 90 ವರ್ಷ ವಯಸ್ಸಾಗಲಿದೆ. ಇನ್ನು ಅತಿ ಹಿರಿಯ ವಯಸ್ಸಿನಲ್ಲಿ ತಂದೆಯಾದ ದಾಖಲೆ ಸದ್ಯ ಭಾರತದ ರಾಮಜೀತ್ ರಾಘವ್ ಹೆಸರಿನಲ್ಲಿದೆ. ಅವರು 2010ರಲ್ಲಿ ತಮ್ಮ 94ನೇ ವಯಸ್ಸಿಗೆ ಮೊದಲ ಮಗುವಿನ ತಂದೆಯಾದ ರೆಕಾರ್ಡ್ ನಿರ್ಮಿಸಿದ್ದರು. ಇದಾದ ಬಳಿಕ 2012ರಲ್ಲಿ ಅವರು ತಮ್ಮದೇ ರೆಕಾರ್ಡ್ ಮುರಿದು ಅವರು ಮತ್ತೊಂದು ಮಗುವಿನ ತಂದೆಯಾಗಿದ್ದರು.