- Home
- Entertainment
- TV Talk
- Ranveer Allahabadiya: ಪಾಪ ಪರಿಹಾರಕ್ಕಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ಕೊಟ್ರ ಬೀರ್ ಬೈಸೆಪ್ಸ್ ಖ್ಯಾತಿಯ ರಣವೀರ್ ಅಲಹಾಬಾದಿಯ?
Ranveer Allahabadiya: ಪಾಪ ಪರಿಹಾರಕ್ಕಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ಕೊಟ್ರ ಬೀರ್ ಬೈಸೆಪ್ಸ್ ಖ್ಯಾತಿಯ ರಣವೀರ್ ಅಲಹಾಬಾದಿಯ?
ವಿವಾದಗಳಿಗೆ ಗುರಿಯಾದ ಬೀರ್ ಬೈಸೆಪ್ಸ್ ಖ್ಯಾತಿಯ ಯೂಟ್ಯೂಬರ್ ರಣವೀರ್ ಅಲಹಾಬಾದಿಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಒಂದಲ್ಲ ಎರಡು ಬಾರಿ ಬೇರೆ ಬೇರೆ ಕಾರಣಕ್ಕಾಗಿ ದೇಶಾದ್ಯಂತ ಜನರ ವಿರೋದಕ್ಕೆ ಕಾರಣವಾಗಿ ಸುದ್ದಿಗಳಿಗೆ ಆಹಾರವಾಗಿದ್ದ ಬೀರ್ ಬೈಸೆಪ್ಸ್ ಖ್ಯಾತಿಯ ಯೂಟ್ಯೂಬರ್ ರಣವೀರ್ ಅಲಹಾಬಾದಿಯ (Ranveer Allabadia) ಇದೀಗ ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಶೇರ್ ಮಾಡಿದ್ದಾರೆ.
ಪಂಚೆ ಮತ್ತು ಶಲ್ಯ ಧರಿಸಿ ಕುಕ್ಕೆ ಸುಬ್ರಹ್ಮಣ (Kukke Subramanya Temple) ದೇಗುಲದ ಮುಂದೆ ನಿಂತು ಫೋಟೊ ತೆಗೆಸಿಕೊಂಡಿರುವ ರಣವೀರ್ ಕಿಂಗ್ ಎನರ್ಜಿ ಎಂದು ಒಂದು ಸ್ಟೋರಿಯಲ್ಲಿ ಬರೆದುಕೊಂಡಿದ್ದರೆ, ಮತ್ತೊಂದು ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಇಂತಹ ಅನುಭವಗಳನ್ನು ಪಡೆಯೋದಕ್ಕೆ, ಭಾರತದಲ್ಲಿ ಇರಬೇಕು ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಎಲ್ಲಾ ಕಡೆಯಿಂದ ಆಶೀರ್ವಾದ ಸಿಗುತ್ತಿದೆ ಎಂದು ಕೂಡ ಬರೆದಿದ್ದಾರೆ. ಅಷ್ಟೇ ಅಲ್ಲ ಈಟ್ಸ್ ಟೈಮ್ ಟು ಸೆಟಲ್ ಡೌನ್ ಇನ್ ಕರ್ನಾಟಕ ಎಂದು ಸಹ ಬರೆದಿದ್ದಾರೆ.
ವಿವಾದಗಳ ಮೇಲೆ ವಿವಾದಗಳನ್ನು ಮೈಗೆಳೆದುಕೊಂಡ ಬಳಿಕ ಸುಬ್ರಹ್ಮಣ್ಯದಲ್ಲಿ ರಣವೀರ್ ಅವರನ್ನು ನೋಡಿದ ಜನರು ಇವರು ತಾವು ಮಾಡಿದ ಪಾಪ ಕರ್ಮಗಳನ್ನು ಕಳೆಯಲು ಇಲ್ಲಿಗೆ ಬಂದಿದ್ದಾರೆ ಎಂದಿದ್ದಾರೆ. ಒಬ್ಬರು ಮಾಡಿದ ಪಾಪ ಕರ್ಮಗಳನ್ನು ಕೆಲವೊಮ್ಮೆ ಗಂಗೆಯಲ್ಲಿ ಮಿಂದರು ಪರಿಹಾರ ಆಗುವುದಿಲ್ಲ , ಅಂತಹ ಸಮಯದಲ್ಲಿ ದೈವ ದೇವರ ಭೂಮಿ ತುಳುನಾಡಿಗೆ ಬಂದು ಪರಿಹಾರ ಮಾಡಿಕೊಳ್ಳುತ್ತಾರೆ. ತಪ್ಪುಗಳು ಮಾಡುವುದು ಮನುಜನ ಸಹಜ ಗುಣ, ಅದನ್ನು ಅರಿತು ತನ್ನ ತಪ್ಪನ್ನು ತಿದ್ದಿಕೊಳ್ಳಲು ಪ್ರಯತ್ನ ಮಾಡುವವನೆ ನಿಜವಾದ ಮನುಜ, When he accepted and trying to come out of it through spiritual rout lets appreciate it ಎಂದು ಕಾಮೆಂಟ್ ಮಾಡಿದ್ದಾರೆ.
ಅಂದ ಹಾಗೆ ರಣವೀರ್ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರಿಂದ ನ್ಯಾಷನ್ ಕ್ರಿಯೇಟರ್ ಅವಾರ್ಡ್ ಕೂಡ ಪಡೆದುಕೊಂಡಿದ್ದರು ಹಾಗಾಗಿ ಅವರಿಗೆ ಫಾಲೋವರ್ಸ್ ಗಳ ಸಂಖ್ಯೆಯೂ ಜಾಸ್ತಿ ಇತ್ತು. ಆದರೆ ಅದಾಗ ಬಳಿಕ ಇಂಡಿಯಾಸ್ ಗಾಟ್ ಲಾಟೆಂಟ್ ಶೋನಲ್ಲಿ ಸ್ಪರ್ಧಿಯೊಬ್ಬರ ಜೊತೆ ಮಾತನಾಡುವ ರಣವೀರ್, 'ನೀವು ಜೀವನಪೂರ್ತಿ ನಿಮ್ಮ ಅಪ್ಪ-ಅಮ್ಮ ಸೆಕ್ಸ್ ಮಾಡೋದನ್ನ ನೋಡೋಕೆ ಇಷ್ಟಪಡ್ತೀರಾ? ಅಥವಾ ಒಮ್ಮೆ ಈ ಸೆಕ್ಸ್‌ನಲ್ಲಿ ಭಾಗಿಯಾಗುವ ಮೂಲಕ ಅವರ ನಡುವಿನ ಸೆಕ್ಸ್‌ಅನ್ನು ಶಾಶ್ವತವಾಗಿ ಬಂದ್ ಮಾಡಲು ಇಷ್ಟಪಡುತ್ತೀರಾ? ಎಂದು ಹೇಳುವ ಮೂಲಕ ದೇಶಾದ್ಯಂತ ಸಿಕ್ಕಾಪಟ್ಟೆ ಟೀಕೆಗೆ ಗುರಿಯಾಗಿದ್ದರು. ಅದರ ನಂತರ ರಣವೀರ್ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು.
ಈ ವಿಚಾರ ತಣ್ಣದಾದ ನಂತರ ಮತ್ತೊಂದು ಬಾರಿ ವಿವಾದಕ್ಕೆ ಒಳಗಾಗಿದ್ದರು ರಣವೀರ್. ತಮ್ಮ ಪೋಸ್ಟ್‌ನಲ್ಲಿ ರಣವೀರ್ ಅಲ್ಲಾಹಾಬಾದಿಯಾ ಪಾಕಿಸ್ತಾನಿಯರ ಪರ 'ಸಹೋದರ ಸಹೋದರಿಯರೆ' ಎಂಬ ಪದ ಬಳಸಿ ಪೋಸ್ಟ್ ಮಾಡಿ, ಮತ್ತೆ ಟೀಕೆಗೆ ಗುರಿಯಾಗಿದ್ದರು.