ಧ್ರುವ್ ರಾಠಿ, ತನ್ಮಯ್ ಭಟ್...ಭಾರತದ ಟಾಪ್-10 ಶ್ರೀಮಂತ ಯೂಟ್ಯೂಬರ್‌ಗಳು!
India's Top 10 Richest YouTubers: Tanmay Bhat Tops List with ₹665 Cr Net Worth ತನ್ಮಯ್ ಭಟ್ ಅವರು 665 ಕೋಟಿ ರೂ. ನಿವ್ವಳ ಮೌಲ್ಯದೊಂದಿಗೆ ಭಾರತದ ಅತ್ಯಂತ ಶ್ರೀಮಂತ ಯೂಟ್ಯೂಬರ್ ಆಗಿ ಹೊರಹೊಮ್ಮಿದ್ದಾರೆ.

ಟೆಕ್ ಇನ್ಫಾರ್ಮರ್‌ನ ಮೈಜಾರ್ ಬ್ಲಾಗ್ ವರದಿಯ ಪ್ರಕಾರ, ತನ್ಮಯ್ ಭಟ್ ಅಧಿಕೃತವಾಗಿ ಭಾರತದ ಅತ್ಯಂತ ಶ್ರೀಮಂತ ಯೂಟ್ಯೂಬರ್ ಆಗಿದ್ದು, ಅಂದಾಜು 665 ಕೋಟಿ ರೂ. ನಿವ್ವಳ ಮೌಲ್ಯದೊಂದಿಗೆ, ಕ್ಯಾರಿಮಿನಾಟಿ, ಭುವನ್ ಬಾಮ್, ಸಮಯ್ ರೈನಾ ಮತ್ತು ಟೆಕ್ನಿಕಲ್ ಗುರೂಜಿ ಅವರನ್ನು ಹಿಂದಿಕ್ಕಿದ್ದಾರೆ.
ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ತನ್ಮಯ್ ಭಟ್ ನಂ.1 ಸ್ಥಾನದಲ್ಲಿ ಇದ್ದು, 665 ಕೋಟಿ ಸಂಪಾದನೆ ಮಾಡಿದ್ದಾರೆ.
ಗೌರವ್ ಚೌಧರಿ ಅಲಿಯಾಸ್ ಟೆಕ್ನಿಕಲ್ ಗುರೂಜಿ 2ನೇ ಸ್ಥಾನದಲ್ಲಿದ್ದು 356 ಕೋಟಿ ಆಸ್ತಿ ಹೊಂದಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ ಕಂಟೆಂಟ್‌ನ ವಿಚಾರವಾಗಿ ಛೀಮಾರಿ ಹಾಕಿಸಿಕೊಂಡಿರುವ ಸಮಯ್ ರೈನಾ 140 ಕೋಟಿಯೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಟ್ರೋಲರ್‌ಗಳ ಫೇವರಿಟ್ ಕ್ಯಾರಿ ಮಿನಾಟಿ ಅಲಿಯಾ ಅಲಿಯಾಸ್ ಅಜಯ್ ನಗರ್ 131 ಕೋಟಿ ಆಸ್ತಿಯೊಂದಿಗೆ ನಾಲನೇ ಸ್ಥಾನದಲ್ಲಿದ್ದಾರೆ.
ಬಿಬಿ ಕಿ ವೈನ್ಸ್ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ಭುವನ್ ಬಮ್ 122 ಕೋಟಿ ಆಸ್ತಿಯೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.
ಅಮಿತ್ ಭಡಾನಾ 6ನೇ ಸ್ಥಾನದಲ್ಲಿದ್ದು, 80 ಕೋಟಿ ಆಸ್ತಿ ಹೊಂದಿದ್ದಾರೆ.
ಟ್ರಿಗರ್ಡ್ ಇನ್ಸಾನ್ ಯೂಟ್ಯೂಬ್ ಮಾಲೀಕ 65 ಕೋಟಿ ಆಸ್ತಿಯೊಂದಿಗೆ 7ನೇ ಸ್ಥಾನದಲ್ಲಿದ್ದಾರೆ.
ರಾಜಕೀಯದ ಬಗ್ಗೆ ಕಂಟೆಂಟ್ ಮಾಡುವ ಧ್ರುವ್ ರಾಠಿ 60 ಕೋಟಿಯೊಂದಿಗೆ 8ನೇ ಸ್ಥಾನದಲ್ಲಿದ್ದಾರೆ.
ಸಮಯ್ ರೈನಾ ರೀತಿಯಲ್ಲಿ ಸುಪ್ರೀಂ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿರುವ ಬೀರ್ ಬೈಸೆಪ್ಸ್ ಯೂಟ್ಯೂಬ್ ಚಾನೆಲ್‌ನ ರಣವೀರ್ ಅಲ್ಲಾಬಾದಿಯಾ 58 ಕೋಟಿಯೊಂದಿಗೆ 9ನೇ ಸ್ಥಾನದಲ್ಲಿದ್ದಾರೆ.
ಕೊನೆಯ ಹಾಗೂ 10ನೇ ಸ್ಥಾನದಲ್ಲಿರುವ ವ್ಯಕ್ತಿ ಸೌರವ್ ಜೋಶಿ, 50 ಕೋಟಿಯ ಆಸ್ತಿ ಇವರು ಹೊಂದಿದ್ದಾರೆ.