ಹೆಣ್ಣು ಮಕ್ಕಳೇ ಇಲ್ಲದ ಮನೆಯನ್ನ 'ಗಂಧದಗುಡಿ'ಯಾಗಿಸೋಕೆ ಬರ್ತಿದ್ದಾರೆ ಸಂಜನಾ ಬುರ್ಲಿ!
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಪಾತ್ರದ ಮೂಲಕ ಮನೆಮಾತಾಗಿದ್ದ ಸಂಜನಾ ಬುರ್ಲಿ ಇದೀಗ ಹೊಸದಾಗಿ ಆರಂಭವಾಗಲಿರುವ ಧಾರಾವಾಹಿಗೆ ನಾಯಕಿಯಾಗಿ ಮತ್ತೆ ಕಿರುತೆರೆಗೆ ಎಂಟ್ರಿ ಕೊಡಲಿದ್ದಾರೆ.

ಝೀ ವಾಹಿನಿಯ ಜನಪ್ರಿಯ ಧಾರಾವಾಹಿ ಪುಟ್ಟಕ್ಕನ ಮಕ್ಕಳು. ಇದರಲ್ಲಿ ಪುಟ್ಟಕ್ಕನ ಎರಡನೇ ಮಗಳು ಸ್ನೇಹಾ ಆಗಿ ಕಂಠಿಯ ಪ್ರೀತಿಯ ಮೆಸ್ಸು ಆಗಿ, ವೀಕ್ಷಕರ ಪ್ರೀತಿಯ ಡಿಸಿ ಸ್ನೇಹಾ ಆಗಿ ಮನೆಮಾತಾದವರು ಸಂಜನಾ ಬುರ್ಲಿ. ಆದರೆ ಅವರು ಇದಕ್ಕಿದ್ದಂತೆ ಅರ್ಧದಲ್ಲೇ ಸೀರಿಯಲ್ ಬಿಟ್ಟಿದ್ದರು.
ಉನ್ನತ ವ್ಯಾಸಂಗದ ಸಲುವಾಗಿ ಸೀರಿಯಲ್ ಬಿಡೋದಾಗಿ ಹೇಳಿದ್ದರಿಂದ ಸ್ನೇಹಾ ಪಾತ್ರವನ್ನೆ ಕೊನೆ ಮಾಡಲಾಗಿತ್ತು. ಆದರೆ ಸ್ನೇಹಾ ಅಭಿಮಾನಿಗಳೆಲ್ಲಾ ಮೇಡಂ ಇನ್ನು ಯಾವಾಗ ನಿಮ್ಮನ್ನು ತೆರೆ ಮೇಲೆ ನೋಡೋದು ಎಂದು ಕಾಯುತ್ತಿದ್ದರು. ಇದೀಗ ಅಭಿಮಾನಿಗಳ ಆಸೆ ಈಡೇರಿದೆ.
ಕಲರ್ಸ್ ಕನ್ನಡದಲ್ಲಿ ಶೀಘ್ರದಲ್ಲೇ ಆರಂಭವಾಗಲಿರುವ ಗಂಧದ ಗುಡಿ ಧಾರಾವಾಹಿಗೆ ನಾಯಕಿಯಾಗಿ ಸಂಜನಾ ಬುರ್ಲಿ ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಕೇಳಿ ಬರುತ್ತಿದೆ. ಅಧಿಕೃತವಾಗಿ ಮಾಹಿತಿ ಬಾರದೇ ಇದ್ದರೂ ಸಂಜನಾ ನಾಯಕಿಯಾಗಿರೋದು ಕನ್ಫರ್ಮ್ ಎನ್ನುತ್ತಿದೆ ಮೂಲಗಳು.
ಕೆಲವು ದಿನಗಳ ಹಿಂದಷ್ಟೇ ಕಲರ್ಸ್ ಕನ್ನಡದಲ್ಲಿ ಗಂಧದ ಗುಡಿ ಸೀರಿಯಲ್ ಪ್ರೊಮೋ ಬಿಡುಗಡೆಯಾಗಿತ್ತು. ನಾಲ್ಕು ಜನ ಗಂಡು ಮಕ್ಕಳಿರುವ ಮನೆ ಅದು. ಅಲ್ಲಿ ಹೆಣ್ಣು ದಿಕ್ಕೆ ಇಲ್ಲ. ಅಣ್ಣ ತಮ್ಮಂದಿರ ಜಗಳ ಬೇರೆ. ಅಂತಹ ಮನೆಗೆ ಆದಷ್ಟು ಬೇಗನೆ ಒಂದು ಹೆಣ್ಣು ಬರಲಿ ಎನ್ನೋದು ಎಲ್ಲರ ಹಾರೈಕೆಯಾಗಿರುತ್ತೆ.
ಇದೀಗ ಹೆಂಗಸರೇ ಇಲ್ಲದ ಮನೆಯನ್ನು ಬೆಳಗೋಕೆ ಗಂಧದಗುಡಿಗೆ ಸಂಜಾನ ಬುರ್ಲಿ ಅವರು ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಧಾರಾವಾಹಿಯಲ್ಲಿ ಶಿಶಿರ್ ಶಾಸ್ತ್ರಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಇವರಿಗೆ ನಾಯಕಿಯಾಗ್ತಾರ ಸಂಜನಾ ಕಾದು ನೋಡಬೇಕು.
ಸಂಜನಾ ನಟನೆಗೆ ಎಂಟ್ರಿ ಕೊಟ್ಟದ್ದು ಲಗ್ನ ಪತ್ರಿಕೆ ಸೀರಿಯಲ್ ಮೂಲಕ. ಆದರೆ ಆ ಸೀರಿಯಲ್ ಜನರಿಗೆ ತಲುಪುವಲ್ಲಿ ವಿಫಲವಾದ್ದರಿಂದ ಅರ್ಧದಲ್ಲಿಯೇ ಸೀರಿಯಲ್ ಸ್ಥಗಿತಗೊಳಿಸಬೇಕಾಗಿತ್ತು. ಅದಾದ ಬಳಿಕ ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ಅವಕಾಶ ಸಿಕ್ಕಿ, ಜೊತೆಗೆ ಜನಪ್ರಿಯತೆ ಕೂಡ ಸಿಕ್ಕಿತು.
ಪುಟ್ಟಕ್ಕನ ಮಕ್ಕಳು ಸೀರಿಯಲ್ ನಿಂದ ಹೊರ ಬಂದ ಮೇಲೆ ನಟನೆಯಿಂದ ದೂರ ಉಳಿದಿದ್ದರು. ಟ್ರಾವೆಲ್ ಮಾಡುತ್ತಾ, ಅಡ್ವೆಂಚರಸ್ ಗೇಮ್ ಗಳನ್ನು ಆಡುತ್ತಾ ಎಂಜಾಯ್ ಮಾಡುತ್ತಾ ಸಮಯ ಕಳೆಯುತ್ತಿದ್ದರು. ಇದೀಗ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳೋದಕ್ಕೆ ರೆಡಿಯಾಗ್ತಿದ್ದಾರೆ.