ಮದುವೆ ಬಳಿಕ ಮೊದಲ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ಸೀತಾ ರಾಮ ನಟಿ
ಸೀತಾ ರಾಮ ಸೀರಿಯಲ್ ನಟಿ ಮೇಘನಾ ಶಂಕರಪ್ಪ ಮದುವೆಯಾದ ಬಳಿಕ ಮೊದಲ ಬಾರಿ ಗಂಡನ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಇಂದು ರಾಜದೆಲ್ಲೆಡೆ ಸಂಭ್ರಮದಿಂದ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸುತ್ತಿದ್ದಾರೆ. ಚಂದನವನದ ತಾರೆಯರ ಮನೆಮನೆಯಲ್ಲೂ ಸಹ ಹಬ್ಬದ ಸಂಭ್ರಮ ಜೋರಾಗಿಯೇ ನಡೆಯುತ್ತಿದೆ. ಕಿರುತೆರೆ ನಟಿ ಮೇಘನಾ ಶಂಕರಪ್ಪ ಕೂಡ ಹಬ್ಬದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಸೀತಾ ರಾಮಾ ಧಾರಾವಾಹಿಯಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಮೇಘನಾ ಶಂಕರಪ್ಪ ಇದೇ ವರ್ಷ ಫೆಬ್ರುವರಿ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಬಳಿಕ ಗಂಡನ ಮನೆಯಲ್ಲಿ ಆಚರಿಸಿದ ಮೊದಲ ವರಮಹಾಲಕ್ಷ್ಮೀ ಹಬ್ಬ ಇದಾಗಿದೆ.
ಮನೆಯಲ್ಲಿ ಸುಂದರವಾಗಿ ಡೇಕೋರೇಶನ್ ಮಾಡಿ, ಲಕ್ಷ್ಮೀ ದೇವಿಯನ್ನು ಕೂರಿಸಿ, ಪೂಜೆ ಮಾಡಿದ್ದು, ಈ ಫೋಟೊಗಳನ್ನು ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಗಂಡನ ಜೊತೆಗಿನ ಫೋಟೊ ಕೂಡ ಶೇರ್ ಮಾಡಿದ್ದಾರೆ.
ಮೇಘನಾ ಹಳದಿ ಬಣ್ಣದ ಸಿಂಪಲ್ ಸೀರೆಯುಟ್ಟು ಪೂಜೆ ಮಾಡಿದ್ದರೆ, ಅವರ ಪತಿ ಜಯಂತ್ ಬಿಳಿ ಪಂಚೆ, ಹಸಿರು ಶರ್ಟ್ ಧರಿಸಿದ್ದು, ಈ ಜೋಡಿ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ಹಬ್ಬದ ಸಂಭ್ರಮದಲ್ಲಿರುವ ಜೋಡಿ, ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಮೇಘನಾ ಮತ್ತು ಜಯಂತ್ ವಿವಾಹವು ಇದೇ ಫೆಬ್ರುವರಿ 8 ರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದಿತ್ತು.ಇಬ್ಬರದು ಅರೇಂಜ್ ಮ್ಯಾರೇಜ್ ಆಗಿದ್ದು, ಮೇಘನಾ ಹೆಚ್ಚಾಗಿ ಗಂಡನ ಜೊತೆಗಿನ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಯೂಟ್ಯೂಬ್ ವಿಡಿಯೋಗಳಲ್ಲಿ ಶೇರ್ ಮಾಡುತ್ತಿರುತ್ತಾರೆ.
ಮೇಘನಾ ಶಂಕರಪ್ಪ 'ಸೀತಾರಾಮ' ಧಾರಾವಾಹಿಯಲ್ಲಿ ಕೊನೆಯದಾಗಿ ನಟಿಸಿದ್ದರು. ಅದಕ್ಕೂ ಮುನ್ನ ಅವರು ಕಲರ್ಸ್ ಕನ್ನಡದ'ನಮ್ಮನೆ ಯುವರಾಣಿ', ʼಕಿನ್ನರಿʼ, 'ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಮೊದಲಾದ ಧಾರಾವಾಹಿಯಲ್ಲೂ ನಟಿಸಿದ್ದರು.