ಕೇದಾರನಾಥನ ದರ್ಶನ ಪಡೆದ ನನ್ನರಸಿ ರಾಧೆ, ತ್ರಿಪುರ ಸುಂದರಿ ನಟ ಅಭಿನವ್ ವಿಶ್ವನಾಥನ್
ಕನ್ನಡ ಕಿರುತೆರೆ ನಟ ಅಭಿನವ್ ವಿಶ್ವನಾಥನ್ ಹಿಮಾಲಯಕ್ಕೆ ತೆರಳಿ ಕೇದಾರನಾಥನ ದರ್ಶನ ಪಡೆದು ಬಂದಿದ್ದು, ಆ ದಿವ್ಯ ದರ್ಶನದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ನನ್ನರಸಿ ರಾಧೆ ಧಾರಾವಾಹಿಯಲ್ಲಿ ಅಗಸ್ತ್ಯನ ಪಾತ್ರದ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ನಟ ಅಭಿನವ್ ವಿಶ್ವನಾಥನ್ (Abhinav Viswanathan) ಇದೀಗ ಕೇದಾರನಾಥನ ದರ್ಶನ ಪಡೆದು ಬಂದಿದ್ದಾರೆ. ಜೊತೆಗೆ ದಿವ್ಯ ದರ್ಶನ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಇತ್ತೀಚೆಗೆ ಕೇದರನಾಥಕ್ಕೆ ತೆರಳಿರುವ ಅಭಿನವ್ ತಮ್ಮ ಇನ್’ಸ್ಟಾಗ್ರಾಂ ನಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದು, ಅದರ ಜೊತೆಗೆ ‘ಶಿವನು ಶುದ್ಧ ಪ್ರಜ್ಞೆ, ಆನಂದ ಮತ್ತು ಶಾಶ್ವತವಾಗಿರುವ ಸ್ಥಿತಿಯಾಗಿದೆ’ (Shiva is a state of being pure conscious blissful and eternal) ಹರ್ ಹರ್ ಮಹಾದೇವ್ ಎಂದು ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ.
ಅಭಿನವ್ ವಿಶ್ವನಾಥನ್ ಮುಂಬೈ ಮೂಲದ ಯುವಕ. ಬೆಂಗಳೂರಲ್ಲಿ ಇಂಜಿನಿಯರಿಂಗ್ ಮಾಡಲು ಬಂದಿದ್ದರು. ಆರಂಭದಲ್ಲಿಯೇ ಇಂಗ್ಲಿಷ್ ಹಾಗೂ ಹಿಂದಿ ನಾಟಕಗಳನ್ನು ಮಾಡುತ್ತಾ, ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದ ಅಭಿನವ್ ಗೆ ಬೆಂಗಳೂರಲ್ಲಿ ನೆರವಾಗಿದ್ದು, ಪ್ರಕಾಶ್ ಬೆಳವಾಡಿ.
ಪ್ರಕಾಶ್ ಬೆಳವಾಡಿ ಸಹಾಯದಿಂದಾಗಿ ಅಭಿನವ್ ನನ್ನರಸಿ ರಾಧೆ ಸೀರಿಯಲ್ (Nannarasi Radhe Serial) ಆಡಿಶನ್ ತೆರಳಿ ಅದರಲ್ಲಿ ಆಯ್ಕೆ ಕೂಡ ಆಗಿದ್ದರು, ಆದರೆ ಕನ್ನಡ ಮಾತನಾಡಲು, ಓದಲು ಬರದೇ ಇದ್ದ ಈ ನಟನಿಗೆ ಸೀರಿಯಲ್ ತಂಡವೇ ನೆರವು ನೀಡಿತ್ತಂತೆ, ಬಳಿಕ ಲಾಕ್ ಡೌನ್ ಸಮಯದಲ್ಲಿ ಕನ್ನಡ ಸಿನಿಮಾಗಳನ್ನು ನೋಡುತ್ತಾ, ಕನ್ನಡ ಕಲಿತವರು ಅಭಿನವ್.
ನನ್ನರಸಿ ರಾಧೆ ಬಳಿಕ, ಅಭಿನವ್ ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ಪ್ರದ್ಯುಮ್ನನಾಗಿ ಕೂಡ ಗಮನ ಸೆಳೆದಿದ್ದರು. ಇದಾದ ಬಳಿಕ ಅವರು ಸದ್ಯ ತೆಲುಗಿನ ಮೇಘ ಸಂದೇಶಂ ಧಾರಾವಾಹಿಯಲ್ಲಿ ಗಗನ್ ಆಗಿ ನಟಿಸುತ್ತಿದ್ದಾರೆ. ಆ ಮೂಲಕ ತೆಲುಗು ಪ್ರೇಕ್ಷಕರೂ ಕೂಡ ಇವರನ್ನು ಮೆಚ್ಚಿಕೊಂಡಿದ್ದಾರೆ. ಈ ಧಾರಾವಾಹಿಯಲ್ಲಿ ಅಭಿನವ್ ಗೆ ನಾಯಕಿಯಾಗಿರುವುದು ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಭೂಮಿಕಾ ರಮೇಶ್.
ಅಭಿನವ್ ಕೇವಲ ಸೀರಿಯಲ್ ಗಳಲ್ಲಿ ಮಾತ್ರವಲ್ಲ, ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಶೈನ್ ಶೆಟ್ಟಿ ಅಂಕಿತಾ ಅಮರ್ ನಟಿಸಿರುವ ಜಸ್ಟ್ ಮ್ಯಾರೀಡ್ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟಿರುವ ಅಭಿನವ್, ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ ಕನ್ನಡದ ಇನ್ನೂ ಹೆಸರಿಡದ ಸಿನಿಮಾ ಒಂದರಲ್ಲಿ ನಾಯಕನಾಗಿ ಸಹ ಇವರು ನಟಿಸುತ್ತಿದ್ದಾರೆ. ಇದು ಹಾರರ್ ಥ್ರಿಲ್ಲರ್ ಕಥೆಯಾಗಿದೆ.
ಇನ್ನು ತಮಿಳು ಸಿನಿಮಾ ಒಂದರಲ್ಲಿ ಕೂಡ ನಾಯಕನಾಗಿ ಅಭಿನವ್ ನಟಿಸುತ್ತಿದ್ದಾರೆ. ಈ ಸಿನಿಮಾ ಹೆಸರು ರೂಟ್. ಈ ಚಿತ್ರದಲ್ಲಿ ಕೆಜಿಎಫ್ ಖ್ಯಾತಿಯ ಗರುಡ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ತಮಿಳಿನ ಖ್ಯಾತ ನಟ ಭಾಗ್ಯರಾಜ್ ಕೂಡ ನಟಿಸುತ್ತಿದ್ದಾರೆ.