Jyothi Rai ಫಿಟ್ನೆಸ್ ನೋಡಿ ಫ್ಯಾನ್ಸ್ ಶಾಕ್…. 40ರಲ್ಲೂ ಹೇಗಿಷ್ಟು ಫಿಟ್ & ಫೈನ್
ಕನ್ನಡ ಕಿರುತೆರೆಯಲ್ಲಿ ನಾಯಕಿಯಾಗಿ ಮಿಂಚಿ ಇದೀಗ ತೆಲುಗು ಸಿನಿಮಾ, ವೆಬ್ ಸೀರೀಸ್ ಗಳಲ್ಲಿ ಬೋಲ್ಡ್ ಪಾತ್ರದ ಮೂಲಕ ಮಿಂಚುತ್ತಿರುವ ನಟಿ ಜ್ಯೋತಿ ರೈ ಫಿಟ್ನೆಸ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಈ 40ರ ಹರೆಯದಲ್ಲೂ ಇಷ್ಟೊಂಡು ಫಿಟ್ ಆಗಿರೋದು ಹೇಗೆ ಕೇಳ್ತಿದ್ದಾರೆ ಜನ.=

ಜ್ಯೋತಿ ರೈ
ಕನ್ನಡ ಕಿರುತೆರೆಯಲ್ಲಿ ಹಲವು ವರ್ಷಗಳ ಕಾಲ, ಹಲವು ಧಾರಾವಾಹಿಗಳಲ್ಲಿ ನಾಯಕಿಯಾಗಿ ನಟಿಸಿ, ಹಲವು ಅಭಿಮಾಮಿಗನ್ನು ಪಡೆದ ನಟಿ ಜ್ಯೋತಿ ರೈ (Jyothi Rai). ಸಾಂಪ್ರದಾಯಿಕ ಉಡುಗೆ ತೊಟ್ಟು, ಗಂಭೀರ ಪಾತ್ರಗಳಲ್ಲಿ ಆರಂಭದಲ್ಲಿ ಮಿಂಚುತ್ತಿದ್ದ ನಟಿಯ ಲುಕ್ ಈಗ ಬದಲಾಗಿದೆ. ತೆಲುಗು ಇಂಡಷ್ಟ್ರಿಗೆ ಕಾಲಿಟ್ಟ ಬಳಿಕ ಸಂಪೂರ್ಣವಾಗಿ ಬದಲಾಗಿದ್ದಾರೆ
ಬೋಲ್ಡ್ ಪಾತ್ರಗಳಲ್ಲಿ ಜ್ಯೋತಿ ರೈ
ಕನ್ನಡ ಕಿರುತೆರೆಯ ಮನೆಮಗಳು ಆಗಿದ್ದ ಜ್ಯೋತಿ ರೈ, ತೆಲುಗು ಇಂಡಷ್ಟ್ರಿಗೆ ಕಾಲಿಟ್ಟು ಸಿನಿಮಾ, ವೆಬ್ ಸೀರೀಸ್ ಗಳಲ್ಲಿ ಮಿಂಚಲು ಆರಭಿಸಿದ ಬಳಿಕ ತುಂಬಾನೆ ಬೋಲ್ಡ್ ಆಗಿದ್ದಾರೆ. ಬೋಲ್ಡ್ ಪಾತ್ರಗಳು ಹಾಗೂ ಅಷ್ಟೇ ಬೋಲ್ಡ್ ಅವತಾರದಲ್ಲಿ ನಟಿ ಕಾಣಿಸುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಫೋಟೊಗಳು ವೈರಲ್ ಆಗಿರುತ್ತವೆ.
ಹೊಸ ಫೋಟೊ ಶೇರ್ ಮಾಡಿದ ನಟಿ
ಇನ್’ಸ್ಟಾಗ್ರಾಂನಲ್ಲಿ ಆಕ್ಟಿವ್ ಆಗಿರುವ ಜ್ಯೋತಿ ರೈ, ದಿನಕ್ಕೊಂದರಂತೆ ಬೋಲ್ಡ್ ಅವತಾರಗಳಲ್ಲಿ ಕಾಣಿಸುತ್ತಿರುತ್ತಾರೆ. ಈ ಬಾರಿ ಬಿಳಿ ಕ್ರಾಪ್ ಟಾಪ್ ಹಾಗೂ ಚೆಕ್ಡ್ ಪ್ಯಾಂಟ್ ಧರಿಸಿ, ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸ್ತಿದ್ದಾರೆ. ನೋಡಿದ್ರೆ ಎಐ ಫೋಟೊದಂತೆ ಕಾಣಿಸ್ತಿದೆ, ಆದರೆ ಪಡ್ಡೆಗಳ ಹೃದಯಕ್ಕೆ ಲಗ್ಗೆ ಇಟ್ಟಂತಿದೆ ಈ ಫೋಟೋಗಳು.
40ರಲ್ಲೂ ನಟಿಯ ಫಿಟ್ನೆಸ್ ಗೆ ಫ್ಯಾನ್ಸ್ ಫಿದಾ
ಜ್ಯೋತಿ ರೈ ಅವರಿಗೆ ಇದೀಗ ಸುಮಾರು 40ವರ್ಷ ವಯಸ್ಸಾಗಿದ್ದು, ಈ ವಯಸಿನಲ್ಲಿ ಕೂಡ ನಟಿಯ ಫಿಟ್ನೆಸ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಇವರ ಫಿಟ್ನೆಸ್ ಹೇಗಿದೆ ಅಂದ್ರೆ ಇಪ್ಪತ್ತರ ಹರೆಯದ ಹುಡುಗಿಯರು ಇವರ ಲುಕ್ ನೋಡಿ ನಾಚುತ್ತಿದ್ದಾರೆ. ಹಾಗಿದ್ರೆ ನಟಿಯ ಫಿಟ್ನೆಸ್ ಸೀಕ್ರೆಟ್ (fitness secret revel) ಏನು ಅನ್ನೋದನ್ನು ತಿಳಿಯೋಣ.
ಫಿಟ್ನೆಸ್ ಸೀಕ್ರೆಟ್ ರಿವೀಲ್
ಜ್ಯೋತಿ ರೈ ಫಿಟ್ನೆಸ್ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆ. ಅವರು ಪ್ರತಿದಿನ ಒಂದೆರಡು ಗಂಟೆಗಳ ಕಾಲ ವರ್ಕೌಟ್ ಮಾಡುತ್ತಲೇ ಇರುತ್ತಾರೆ. ಇದುವೇ ನಟಿಯ ಫಿಟ್ನೆಸ್ ಸೀಕ್ರೆಟ್ ಆಗಿದೆ. ಇನ್ನೂ ನಟಿಯ ಅಂದ, ಚಂದ, ಹಾಟ್ನೆಸ್ ಗೆ ಫಿದಾ ಆಗಿದ್ದಾರೆ. ವಯಸ್ಸು ಹೆಚ್ಚಾಗುತ್ತಿದ್ದಂತೆ ನಿಮ್ಮ ಅಂದವೂ ಹೆಚ್ಚುತ್ತಿದೆ ಎನ್ನುತ್ತಿದ್ದಾರೆ ಜನ.