- Home
- Entertainment
- TV Talk
- ನಮ್ ಧಾರಾವಾಹಿ ಹವಾ ಹೆಂಗೈತಿ ನೋಡ್ರಿ; ವಿಶ್ವದ ಆಗರ್ಭ ಶ್ರೀಮಂತ Bill Gates ಭಾರತದ ಸೀರಿಯಲ್‌ನಲ್ಲಿ ನಟಿಸ್ತಾರ..!
ನಮ್ ಧಾರಾವಾಹಿ ಹವಾ ಹೆಂಗೈತಿ ನೋಡ್ರಿ; ವಿಶ್ವದ ಆಗರ್ಭ ಶ್ರೀಮಂತ Bill Gates ಭಾರತದ ಸೀರಿಯಲ್‌ನಲ್ಲಿ ನಟಿಸ್ತಾರ..!
Bill Gates In Indian Serial: ವಿಶ್ವದ ಶ್ರೀಮಂತರಲ್ಲಿ ಅಗ್ರಗಣ್ಯ ಸ್ಥಾನದಲ್ಲಿರುವ ಬಿಲ್ ಗೇಟ್ಸ್ ಅವರು ಭಾರತದ ಧಾರಾವಾಹಿಯಲ್ಲಿ ನಟಿಸಲಿದ್ದಾರೆ. ಇದಕ್ಕೆ ಕಾರಣ ಏನು? ಯಾವ ವಿಷಯದ ಬಗ್ಗೆ ಮಾತನಾಡುತ್ತಾರೆ? ಯಾವ ಧಾರಾವಾಹಿಯದು? ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಬಿಲ್ ಗೇಟ್ಸ್ ಯಾರು?
ಬಿಲ್ ಗೇಟ್ಸ್ ಅವರು ಅಮೇರಿಕನ್ ಉದ್ಯಮಿ, ಸಾಫ್ಟ್‌ವೇರ್ ಡೆವಲಪರ್ ಕೂಡ ಹೌದು, ಹೂಡಿಕೆದಾರ, ಲೇಖಕ, ಲೋಕೋಪಕಾರಿ ವ್ಯಕ್ತಿತ್ವ ಹೊಂದಿದ್ದಾರೆ.
ಮೈಕ್ರೋಸಾಫ್ಟ್‌ನ ಸಹ-ಸಂಸ್ಥಾಪಕರಾಗಿದ್ದು, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಬಿಲ್ ಗೇಟ್ಸ್ ಅವರು ವಿಶ್ವದಾದ್ಯಂತ ಅನೇಕ ರಿಯಲ್ ಎಸ್ಟೇಟ್, ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ್ದಾರೆ.
ಟಾಪ್ 5 ಸ್ಥಾನ ಪಡೆದ ಸೀರಿಯಲ್
ಏಕ್ತಾ ಕಪೂರ್ ನಿರ್ಮಾಣದ ‘ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ 2’ ಧಾರಾವಾಹಿಯಲ್ಲಿ ಸ್ಮೃತಿ ಇರಾನಿ, ಅಮರ್ ಉಪಾಧ್ಯಾಯ ಕೂಡ ನಟಿಸುತ್ತಿದ್ದಾರೆ. ಈ ಸೀರಿಯಲ್ ಶುರುವಾದಾಗಿನಿಂದಲೂ ಟಿಆರ್‌ಪಿಯಲ್ಲಿ ಟಾಪ್ 5 ಸ್ಥಾನವನ್ನು ಗಿಟ್ಟಿಸಿಕೊಂಡಿದೆ.
ದೀಪಾವಳಿ ಪ್ರಯುಕ್ತ ಅತಿಥಿಗಳ ಆಗಮನ
ದೀಪಾವಳಿ ಪ್ರಯುಕ್ತ ಈ ಧಾರಾವಾಹಿಯಲ್ಲಿ ಕೆಲ ಅತಿಥಿಗಳು ಬಂದಿರೋದು ವೀಕ್ಷಕರಿಗೆ ಖುಷಿ ನೀಡಿದೆ. ಈಗ ಇನ್ನೋರ್ವ ಅತಿಥಿ ಈ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ.
ಮೈಕ್ರೋಸಾಫ್ಟ್ ಸಹಸಂಸ್ಥಾಪಕ ನಟಿಸ್ತಾರಂತೆ
ಏಕ್ತಾ ಕಪೂರ್ ಅವರು ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನು ಈ ಧಾರಾವಾಹಿಗೆ ಕರೆತರಲು ರೆಡಿ ಆಗಿದ್ದಾರಂತೆ.
ಎಷ್ಟು ಎಪಿಸೋಡ್‌ನಲ್ಲಿ ನಟಿಸ್ತಾರೆ?
ಬಾಲಿವುಡ್ ಮೂಲಗಳ ಪ್ರಕಾರ ಮೈಕ್ರೋಸಾಫ್ಟ್‌ನ ಸಹ-ಸಂಸ್ಥಾಪಕ ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ 2 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಧಾರಾವಾಹಿಯಲ್ಲಿ ಸ್ಮೃತಿ ಇರಾನಿ ಮತ್ತು ಬಿಲ್ ಗೇಟ್ಸ್ ನಡುವೆ ವೀಡಿಯೊ ಕಾಲ್ ಇರುವುದು. ಇದು ಮೂರು ಎಪಿಸೋಡ್‌ವರೆಗೆ ಇರುತ್ತದೆ ಎನ್ನಲಾಗಿದೆ.
ಯಾವ ವಿಷಯ ಮಾತಾಡ್ತಾರೆ?
ಸ್ಮೃತಿ ಇರಾನಿ ಅವರು ಪಾತ್ರವಾಗಿ ಗರ್ಭಿಣಿ ಮಹಿಳೆಯರು, ನವಜಾತ ಶಿಶುಗಳ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ಸಂಭಾಷಣೆ ಮಾಡಲಿದ್ದಾರೆ. ಈ ಹಿಂದೆ ರಾಜಕಾರಣಿಯಾಗಿ ಹಲವಾರು ಕಡೆ ಸ್ಮೃತಿ ಇರಾನಿ ಅವರು ಸಾಮಾಜಿಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು.
ಎಲ್ಲಿ? ಯಾವಾಗ? ನೋಡಬಹುದು?
ಜಿಯೋಹಾಟ್‌ಸ್ಟಾರ್‌ನಲ್ಲಿ ಈ ಧಾರಾವಾಹಿ ಸ್ಟ್ರೀಮ್ ಆಗಲಿದೆ. ಸ್ಟಾರ್‌ಪ್ಲಸ್‌ನಲ್ಲಿ ರಾತ್ರಿ 10:30 ಕ್ಕೆ ಪ್ರಸಾರವಾಗುತ್ತದೆ. ಸ್ಮೃತಿ ಇರಾನಿ ಅವರ ಕಾರ್ಯಕ್ರಮದ ಇತ್ತೀಚಿನ ಸೀಸನ್ 165 ರಿಂದ 170 ಸಂಚಿಕೆಗಳೊಂದಿಗೆ ಮುಕ್ತಾಯ ಆಗಲಿದೆಯಂತೆ.