ಗೌತಮಿ ಜಾದವ್ ಬಳಿಕ ಭಾರ್ಗವಿ LLB ಧಾರಾವಾಹಿಗೆ ಭರ್ಜರಿ ಎಂಟ್ರಿ ಕೊಟ್ಟ ಮಂಜಣ್ಣ
ಭಾರ್ಗವಿ LLB ಧಾರಾವಾಹಿಯಲ್ಲಿ ಇದೀಗ ಬಿಗ್ ಬಾಸ್ ಖ್ಯಾತಿಯ ಮಂಜು ಎಂಟ್ರಿ ಕೊಟ್ಟಿದ್ದು, ಕಾಮಿಡಿ ಅಬ್ಬರ ಬಲು ಜೋರಾಗಿದೆ. ಹೇಗಿದೆ ನೋಡಿ ಮಂಜಣ್ಣನ ಆಕ್ಟೀಂಗ್, ಸೀರಿಯಲ್ ಪ್ರಿಯರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ.

ಕಲರ್ಸ್ ಕನ್ನಡದ ಭಾರ್ಗವಿ LLB ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಬರುತ್ತಿದೆ. ಒಂದು ಕಡೆ ಅರ್ಜುನ್ ಗೆ ಅವನ ತಂದೆ ಜೆಪಿ ಪಾಟೀಲ್ ಆತನಿಗೆ ಗೊತ್ತಾಗದಂತೆ ಮದುವೆ ಮಾಡಿಸುತ್ತಿದ್ದರೆ, ಇತ್ತ ಇನ್ನೊಂದು ಕಡೆ ಭಾರ್ಗವಿಯನ್ನು ಕೊಲೆ ಮಾಡಲು ಸಂಚು ರೂಪಿಸುತ್ತಿದ್ದಾರೆ.
ಮದುವೆ ಮನೆಯಿಂದ ತಪ್ಪಿಸಿಕೊಂಡು ಬರುವ ಅರ್ಜುನ್, ಭಾರ್ಗವಿಯನ್ನು ಕಾಪಾಡಲು ಓಡಿ ಬಂದಿದ್ದಾನೆ. ರೌಡಿಗಳನ್ನು ಮಟ್ಟಹಾಕಿ, ಇನ್ನು ಬರುವವರನ್ನು ಎದುರು ಹಾಕೋದು ಹೇಗೆ ಎಂದು ತಪ್ಪಿಸಿಕೊಂಡು ಬಂದು ಸಾಮೂಹಿಕ ವಿವಾಹವಾಗುವಲ್ಲಿ ತಲುಪಿದ್ದಾರೆ.
ಭಾರ್ಗವಿ ಮದುಮಗಳಂತೆ ಸೀರೆಯುಟ್ಟು ಹೂವು ಮುಡಿದು ರೆಡಿಯಾಗಿದ್ದರೆ ಅರ್ಜುನ್ ಪಂಚೆ ಶಲ್ಯ ಧರಿಸಿ ಮದುಮಗನಂತೆ ರೆಡಿಯಾಗಿದ್ದಾನೆ. ಇಷ್ಟಪಡದ ಹುಡುಗಿಯನ್ನು ಮದುವೆಯಾಗಿ ಕಷ್ಟ ಪಡೋದಕ್ಕಿಂತ, ಇಷ್ಟಪಟ್ಟ ಹುಡುಗಿಗೆ ತಾಳಿ ಕಟ್ಟಿ, ಆಕೆಯ ಜೊತೆ ಕಷ್ಟ ಪಟ್ಟು ಸಂಸಾರ ಮಾಡೋದು ಬೆಸ್ಟ್ ಎನ್ನುತ್ತಾ ತಾಳಿ ಕಟ್ಟಿದ್ದಾನೆ.
ಈ ಸೀರಿಯಲ್ ನಲ್ಲಿ ಮತ್ತೊಂದು ಟ್ವಿಸ್ಟ್ ಎಂದರೆ, ಸೀರಿಯಲ್ ಗೆ ಸ್ಪೆಷಲ್ ಆಗಿ ಎಂಟ್ರಿ ಕೊಟ್ಟಿರುವ ಬಿಗ್ ಬಾಸ್ ಖ್ಯಾತಿಯ ಮಂಜು (Manju). ಹೌದು, ಈ ಸಾಮೂಹಿಕ ಮದುವೆಯನ್ನು ಮಾಡಿಸುತ್ತಿರುವುದೇ ಮಂಜಣ್ಣ.
ಪ್ರೀತಿಸಿದವರನ್ನು, ಮನೆಯಲ್ಲಿ ಮದುವೆಗೆ ಒಪ್ಪಿಗೆ ನೀಡವರನ್ನು , ಅಂತರ್ಜಾತಿ ಯುವಕ-ಯುವತಿಯರ ಪ್ರೀತಿಯನ್ನು ಒಂದು ಮಾಡುವುದು ನನ್ನ ಕರ್ತವ್ಯ. ಇವರಿಗೆಲ್ಲಾ ಯಾರಿದ್ದಾನೆ, ಹಾಗಾಗಿ ನಾನೇ ಮುಂದೆ ನಿಂತು ಮದುವೆ ಮಾಡಿಸುತ್ತಿದ್ದೇನೆ ಎಂದು ಬೀಗುತ್ತಿದ್ದಾರೆ ಮಂಜಣ್ಣ.
ಭಾರ್ಗವಿ LLBಯಲ್ಲಿ (Bhargavi LLB) ಮಂಜಣ್ಣನನ್ನು ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಸೂಪರ್ ಆಕ್ಟಿಂಗ್ ಮಂಜಣ್ಣ, ಜೈ ಮಂಜಣ್ಣ, ಮಂಜಣ್ಣ ನೋಡಿ ಖುಷಿಯಾಯ್ತು, ಅಲ್ಲೆ ಯಾವುದಾದರೂ ಮಂಜಿಯನ್ನು ನೋಡೀ ನೀವೂ ಮದುವೆಯಾಗಿಬಿಡಿ ಮಂಜಣ್ಣ ಎನ್ನುತ್ತಿದ್ದಾರೆ ಜನರು.
ಬಿಗ್ ಬಾಸ್ ಸೀಸನ್ 11 ರ ಬಳಿಕ ಮಂಜಣ್ಣ, ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಮ್ಯಾಕ್ಸ್ ಸಿನಿಮಾದಲ್ಲೂ ಇವರು ನಟಿಸಿ ಸದ್ದು ಮಾಡಿದ್ದರು. ಕೆಲವು ತಿಂಗಳ ಹಿಂದೆ ಭಾರ್ಗವಿ LLBಯಲ್ಲಿ ಗೌತಮಿ ಜಾಧವ್ ನಟಿಸಿದ್ದರು. ಇದೀಗ ಮಂಜಣ್ಣ ನಟಿಸಿದ್ದಾರೆ.