MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಬಿಗ್ ಬಾಸ್ ಲವ್ ಸ್ಟೋರಿ ಪೂರ್ತಿಯಾಗಲ್ಲ ಅಂತ ಹೇಳಿದ್ದು ಯಾರು? ಈ ಜೋಡಿನ ನೋಡಿದ್ರೆ ಸೂಪರ್ ಅಂತೀರಿ

ಬಿಗ್ ಬಾಸ್ ಲವ್ ಸ್ಟೋರಿ ಪೂರ್ತಿಯಾಗಲ್ಲ ಅಂತ ಹೇಳಿದ್ದು ಯಾರು? ಈ ಜೋಡಿನ ನೋಡಿದ್ರೆ ಸೂಪರ್ ಅಂತೀರಿ

ಬಿಗ್ ಬಾಸ್ ಮನೆಯಲ್ಲಿ ಆರಂಭವಾದ ಲವ್ ಹೆಚ್ಚು ಸಮಯ ಉಳಿಯಲ್ಲ ಎನ್ನುವ ಮಾತನ್ನು ದೂರ ಮಾಡಿ, ಬೆಸ್ಟ್ ಜೋಡಿಯಾಗಿ, ಮೇಡ್ ಫಾರ್ ಈಚ್ ಅದರ್ ಎನ್ನುವಂತೆ ಬದುಕುತ್ತಿದ್ದಾರೆ, ಈ ಬಿಗ್ ಬಾಸ್ ಜೋಡಿ. 

2 Min read
Author : Pavna Das
Published : Aug 12 2025, 05:18 PM IST
Share this Photo Gallery
  • FB
  • TW
  • Linkdin
  • Whatsapp
19
ಬೆಸ್ಟ್ ಬಿಗ್ ಬಾಸ್ ಜೋಡಿ
Image Credit : Instagram

ಬೆಸ್ಟ್ ಬಿಗ್ ಬಾಸ್ ಜೋಡಿ

ಬಿಗ್ ಬಾಸ್ ರಿಯಾಲಿಟಿ ಶೋ ಎಂದ ಕೂಡಲೇ ನೆನಪಾಗೋದು, ಆಲ್ಲಿನ ಜೊತೆಯಾಗುವ ಜೋಡಿಗಳು. ಅದೆಷ್ಟೋ ಸೀಸನ್ ಗಳಲ್ಲಿ ಬಿಗ್ ಬಾಸ್ ಮನೆಯಲ್ಲಿ ಲವ್ ಆಗಿರೋದನ್ನು ನೋಡಿದ್ದೇವೆ. ಕೆಲವರು ಮದುವೆಯಾಗಿರೋದನ್ನು ಕೂಡ ನೋಡಿದ್ದೇವೆ. ಆದರೆ ಎಷ್ಟು ಸಂಬಂಧ ಉಳಿದಿದೆ? ಬೆರಣೆಣಿಕೆಯಷ್ಟೂ ಇಲ್ಲ ತುಂಬಾ ಕಡಿಮೆ. ಬಿಗ್ ಬಾಸ್ ಮನೆಯಲ್ಲಿ ಲವ್ ಆದ ಜೋಡಿಗಳು ತುಂಬಾ ಸಮಯ ಒಟ್ಟಿಗೆ ಇರೋದಿಲ್ಲ ಎನ್ನುವ ಮಾತಿಗೆ ತದ್ವಿರುದ್ಧ ಜೋಡಿಗಳು ಅಂದರೆ ಇವರು.

29
 ಪರ್ಲ್ ಮಾನಿ ಮತ್ತು ಶ್ರೀನೀಶ್ ಅರವಿಂದ್
Image Credit : Instagram

ಪರ್ಲ್ ಮಾನಿ ಮತ್ತು ಶ್ರೀನೀಶ್ ಅರವಿಂದ್

ಇವರು ಬಿಗ್ ಬಾಸ್ ಮಲಯಾಳಂ ಮೊದಲ ಸೀಸನ್ ಜೋಡಿಗಳು. ಬಿಗ್ ಬಾಸ್ ಮನೆಯ ರೊಮ್ಯಾಂಟಿಕ್ ಜೋಡಿ ಅಂದ್ರೆ ಅದು, ಪರ್ಲ್ ಮಾನಿ ಮತ್ತು ಶ್ರೀನೀಶ್ ಅರವಿಂದ್ . ಈ ಜೋಡಿ ಬಿಗ್ ಬಾಸ್ ಮೂಲಕ ಖ್ಯಾತಿಯನ್ನು ಮಾತ್ರವಲ್ಲದೆ ಪ್ರೀತಿಯನ್ನೂ ಕಂಡುಕೊಂಡರು. ರಿಯಾಲಿಟಿ ಶೋನಲ್ಲಿ ಪ್ರೀತಿಯನ್ನು ಪಡೆಯುವುದರಿಂದ ಹಿಡಿದು, ಇಬ್ಬರು ಮಕ್ಕಳ ಪೋಷಕರಾಗಿ, ತಮ್ಮ ಕನಸಿನ ಮನೆಯನ್ನು ರೂಪಿಸುವವರೆಗೂ ಈ ಜೋಡಿ ಪ್ರೀತಿ ಅಂದ್ರೆ ಹೀಗಿರಬೇಕು ಎಂದು ತೋರಿಸಿ ಕೊಟ್ಟರು.

Related Articles

Related image1
'ಜಗಳ ಮಾಡ್ತೀನಿ, ಮನರಂಜನೆ ಕೊಡ್ತೀನಿ'; Bigg Boss Kannada 12 ಶೋಗೆ ಆಡಿಷನ್‌ ಕೊಟ್ಟ ಶಿರಸಿ-ಹಾವೇರಿ ಹುಡುಗಿ!
Related image2
Bigg Boss Kannada Show ಮುಗಿದ್ಮೇಲೆ ತೆರೆಯಿಂದ ಮರೆಯಾದ ಸೆಲೆಬ್ರಿಟಿಗಳಿವರು! ಯಾರು? ಯಾರು?
39
ಬಿಗ್ ಬಾಸ್ ಮನೆಯಲ್ಲಿ ಪ್ರಪೋಸ್
Image Credit : Instagram

ಬಿಗ್ ಬಾಸ್ ಮನೆಯಲ್ಲಿ ಪ್ರಪೋಸ್

ಬಿಗ್ ಬಾಸ್ ಮಲಯಾಳಂ ಮನೆಯೊಳಗೆ, ನಟ ಶ್ರೀನಿಶ್ ಅರವಿಂದ್ ಮತ್ತು ನಿರೂಪಕಿ ಪರ್ಲ್ ಮಾನೆ ಪರಸ್ಪರ ಪ್ರೀತಿಯನ್ನು ಬಹಿರಂಗವಾಗಿ ಘೋಷಿಸಿದ್ದರು. ಅವರ ಪ್ರೇಮಕಥೆಯು ಒಂದು ಗೇಮ್ ಗೆಲ್ಲೋದಕ್ಕೆ ಒಂದು ಟ್ರಿಕ್ಸ್ ಅಷ್ಟೇ ಎನ್ನುವ ಸುದ್ದಿ ಕೂಡ ಕೇಳಿ ಬಂದಿತ್ತು. ಆದರೆ ಈ ಜೋಡಿ ಬಿಗ್ ಬಾಸ್ ಮನೆಯಿಂದ ಹೊರಬಂದ ಸ್ವಲ್ಪ ಸಮಯದ ನಂತರ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಪ್ರೀತಿಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವ ಮೂಲಕ ಈ ಊಹೆಗಳನ್ನು ತಳ್ಳಿಹಾಕಿದರು.

49
ಡೇಟಿಂಗ್ ಬೇಡ, ಮದುವೆಯಾಗಲು ರೆಡೀನಾ ಎಂದಿದ್ದ ಪರ್ಲ್
Image Credit : Instagram

ಡೇಟಿಂಗ್ ಬೇಡ, ಮದುವೆಯಾಗಲು ರೆಡೀನಾ ಎಂದಿದ್ದ ಪರ್ಲ್

"ಇಡೀ ಜಗತ್ತು ನಮ್ಮ ಪ್ರಪೋಸಲ್ ದೃಶ್ಯವನ್ನು ನೋಡಿತ್ತು. ಬಿಗ್ ಬಾಸ್ ಮನೆಯೊಳಗೆ ಅದು 50 ನೇ ದಿನದಂದು ನಡೆದಿತ್ತು. ನಾನು ಅವರ ಬಳಿಗೆ ಹೋಗಿ, 'ನನಗೆ ನೀನು ತುಂಬಾ ಇಷ್ಟ. ನನಗೆ ಡೇಟಿಂಗ್ ಮಾಡೋದು ಇಷ್ಟವಿಲ್ಲ. ನಾನು ಮದುವೆಯಾಗಲು ಬಯಸುತ್ತೇನೆ. ನೀನು ಅದಕ್ಕೆ ರೆಡೀನಾ?" ಎಂದು ಕೇಳಿದೆ , ಅದಕ್ಕೆ ಶ್ರೀನಿ ಯೆಸ್ ಎಂದಿದ್ದರು. ಅದೊಂದು ಕನಸಿನಂತಿತ್ತು ಎಂದು ಪರ್ಲ್ ಸಂದರ್ಶನವೊಂದರಲ್ಲಿ ತಮ್ಮ ಪ್ರೀತಿಯ ಬಗ್ಗೆ ತಿಳಿಸಿದ್ದರು.

59
ಹಿಂದೂ ಕ್ರಿಶ್ಚಿಯನ್ ವೆಡ್ಡಿಂಗ್
Image Credit : Instagram

ಹಿಂದೂ ಕ್ರಿಶ್ಚಿಯನ್ ವೆಡ್ಡಿಂಗ್

ಈ ಜೋಡಿ ಬೇರೆ ಬೇರೆ ಧರ್ಮಕ್ಕೆ ಸೇರಿದವರಾಗಿದ್ದರೂ, ಎರಡೂ ಪದ್ದತಿ ಪ್ರಕಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹಿಂದೂ ಮತ್ತು ಕ್ರಿಶ್ಚಿಯನ್ ಎರಡೂ ಸಾಂಪ್ರದಾಯಿಕ ವಿವಾಹ ಸಮಾರಂಭಗಳನ್ನು ಅವರು ನಡೆಸಿದ್ದರು. ನಿಸ್ಸಂದೇಹವಾಗಿ, ಇದು ಮಲಯಾಳಂ ಟಿವಿಯಲ್ಲಿ ಹೆಚ್ಚು ಸೆಲೆಬ್ರೇಟ್ ಮಾಡಿದ ವಿವಾಹಗಳಲ್ಲಿ ಒಂದಾಗಿದೆ.

69
ಮೊದಲ ಮಗುವಿನ ಜನನ
Image Credit : Instagram

ಮೊದಲ ಮಗುವಿನ ಜನನ

ಈ ದಂಪತಿಗಳು 2021 ರಲ್ಲಿ ತಮ್ಮ ಮೊದಲ ಮಗು ನೀಲಾಳನ್ನು ಬರಮಾಡಿಕೊಂಡಿದ್ದರು. ಅಂದಿನಿಂದ, ಆ ಮಗು ಟೆಲಿ ಪ್ರೇಕ್ಷಕರಿಗೆ ತುಂಬಾ ಪ್ರೀತಿಯ ಮಗು ಕೂಡ ಆಗಿತ್ತು. ಶ್ರೀನಿಶ್ ಮತ್ತು ಪರ್ಲ್ ಇಬ್ಬರೂ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ನೀಲಾ ಬಗ್ಗೆ ಅಪ್‌ಡೇಟ್ ಮಾಡುವುದನ್ನು ಯಾವತ್ತೂ ಮಿಸ್ ಮಾಡೋದೇ ಇಲ್ಲ.

79
ಕನಸಿನ ಮನೆ ಖರೀದಿಸಿದ ಜೋಡಿ
Image Credit : Instagram

ಕನಸಿನ ಮನೆ ಖರೀದಿಸಿದ ಜೋಡಿ

ಈ ದಂಪತಿಗಳು ಕೆಲ ವರ್ಷಗಳ ಹಿಂದೆ ಮತ್ತೊಂದು ಕನಸನ್ನು ಸಹ ಜೊತೆಯಾಗಿ ನನಸಾಗಿಸಿದ್ದರು. ತಮ್ಮ ಸ್ಟ್ರೀಮಿಂಗ್ ಚಾನೆಲ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಈ ಜೋಡಿ ದ್ವೀಪವೊಂದರಲ್ಲಿ ತಮ್ಮ ಕನಸಿನ ಮನೆಯನ್ನು ಖರೀದಿಸಿರುವುದಾಗಿ ಘೋಷಿಸಿದರು.

89
ಎರಡನೇ ಮಗುವಿನ ಜನನ
Image Credit : Instagram

ಎರಡನೇ ಮಗುವಿನ ಜನನ

ಒಂದು ವರ್ಷ ಮುನ್ನ ಈ ಜೋಡಿ ತಮ್ಮ ಎರಡನೇ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದರು. ಒಂಬತ್ತು ತಿಂಗಳ ಸವಾಲಿನ ನಂತರ ಮೊದಲ ಬಾರಿಗೆ ತನ್ನ ಮಗುವನ್ನು ಎತ್ತಿಕೊಳ್ಳುವ ಅಗಾಧ ಭಾವನೆಗಳನ್ನು ಪರ್ಲೆ ಭಾವನಾತ್ಮಕ ಪೋಸ್ಟ್‌ನಲ್ಲಿ ವ್ಯಕ್ತಪಡಿಸಿದ್ದರು.

99
ಪರ್ಲ್ ಮಾನಿ ಶೋ
Image Credit : Instagram

ಪರ್ಲ್ ಮಾನಿ ಶೋ

ಸದ್ಯಕ್ಕಂತೂ ಪರ್ಲ್ ಮಲಯಾಳಂನ ಜನಪ್ರಿಯ ನಿರೂಪಕಿಯಾಗಿದ್ದಾರೆ. ಪರ್ಲ್ ಮಾನಿ ಶೋನಲ್ಲಿ ವಿವಿಧ ಸೆಲೆಬ್ರಿಟಿಗಳನ್ನು ಇಂಟರ್ವ್ಯೂ ಮಾಡಿ, ಅವರು ಹೊಟ್ಟೆ ಹುಣ್ಣಾಗುವಂತೆ ನಗುವಂತೆ ಮಾಡುತ್ತಿದ್ದರು ಪರ್ಲಿ. ಈಕೆ ಸಿಂಪ್ಲಿಸಿಟಿ, ನಗುವಿಗೆ ಲಕ್ಷಾಂತರ ಜನರು ಅಭಿಮಾನಿಗಳು ಸಹ ಹುಟ್ಟಿಕೊಂಡಿದ್ದಾರೆ. ಇವರಿಬ್ಬರ ಜೋಡಿ ನೋಡಿದ್ರೆ ಇದ್ದರೆ ಇವರ ರೀತಿ ಇರಬೇಕು ಎಂದು ಹೇಳುವಂತೆ ಇದ್ದಾರೆ ಈ ಮುದ್ದಾದ ಬಿಗ್ ಬಾಸ್ ಜೋಡಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಬಿಗ್ ಬಾಸ್

Latest Videos
Recommended Stories
Recommended image1
ಅಣ್ಣಯ್ಯ ಸೀರಿಯಲ್ ಪಾರುಗೆ ರಿಯಲ್‌ನಲ್ಲಿ ಬ್ರೇಕಪ್ ಆಗೋಯ್ತಾ? ಯಾರ್ ಜೊತೆ, ಏನ್ ಕಥೆ!
Recommended image2
ಪ್ರೀತಮ್‌ನಲ್ಲಿ 'ಕಾಳಿದಾಸ'ನನ್ನು ಕಂಡ ಶಿವಣ್ಣ: ಅಪ್ಪಾಜಿನೇ ಅಂದ್ಕೊಂಡು 7 ವರ್ಷದ ಬಾಲಕನ ಕಾಲಿಗೆ ಮುತ್ತಿಟ್ಟ ಹ್ಯಾಟ್ರಿಕ್ ಹೀರೋ!
Recommended image3
37ನೇ ವಯಸ್ಸಿಗೆ ಸಾವು ಕಂಡ ರಿಯಾಲಿಟಿ ಶೋ ಖ್ಯಾತಿಯ ಮಿಸ್ಟರ್ ಇಂಡಿಯಾ ವಿನ್ನರ್
Related Stories
Recommended image1
'ಜಗಳ ಮಾಡ್ತೀನಿ, ಮನರಂಜನೆ ಕೊಡ್ತೀನಿ'; Bigg Boss Kannada 12 ಶೋಗೆ ಆಡಿಷನ್‌ ಕೊಟ್ಟ ಶಿರಸಿ-ಹಾವೇರಿ ಹುಡುಗಿ!
Recommended image2
Bigg Boss Kannada Show ಮುಗಿದ್ಮೇಲೆ ತೆರೆಯಿಂದ ಮರೆಯಾದ ಸೆಲೆಬ್ರಿಟಿಗಳಿವರು! ಯಾರು? ಯಾರು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved