ಸ್ವತಂತ್ರ ಭಾರತದ 20 ಅತೀ ದೊಡ್ಡ ತಂತ್ರಜ್ಞಾನ ಸಾಧನೆಗಳು!

First Published 15, Aug 2019, 4:30 PM

ಭಾರತವು ಸ್ವತಂತ್ರವಾಗಿ 72 ವರ್ಷಗಳು ಕಳೆದಿವೆ. ಬ್ರಿಟಿಷರ ಗುಲಾಮಗಿರಿಯಿಂದ ಹೊರಬಂದ ಭಾರತದ ಮುಂದೆ ಪ್ರತಿಯೊಂದು ಕ್ಷೇತ್ರದಲ್ಲಿ ಪರ್ವತದ್ದಷ್ಟು ದೊಡ್ಡ ಸವಾಲುಗಳಿದ್ದುವು. ರಾಷ್ಟ್ರೀಯ ನೇತಾರರ ದೂರದೃಷ್ಟಿಯಿಂದಾಗಿ ಸಾಮಾಜಿಕ, ಆರ್ಥಿಕ ರಂಗಗಳಲ್ಲಿ ಪ್ರಗತಿ ಸಾಧಿಸುವ ಜೊತೆಗೆ ತಂತ್ರಜ್ಞಾನ ಕ್ಷೇತ್ರದಲ್ಲೂ ಭಾರತ ಹೊಸ ಹೊಸ ಸಾಧನೆ ಮಾಡುತ್ತಾ ಬಂತು. ಪ್ರಮುಖ 20 ಮೈಲಿಗಲ್ಲುಗಳ ಪಟ್ಟಿ ಇಲ್ಲಿದೆ.

1951:  ತಂತ್ರಜ್ಞಾನ ಪ್ರಗತಿಗೆ ತಂತ್ರಜ್ಞಾನ  ಶಿಕ್ಷಣವೇ ಅಡಿಗಲ್ಲು. ಪಶ್ಚಿಮ ಬಂಗಾಳದ ಖರಗ್ ಪುರದಲ್ಲಿ ಮೊದಲ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ( IIT) ಸ್ಥಾಪನೆ.

1954: ಅಣುಶಕ್ತಿ ಸಂಶೋಧನೆಗೆ ಟ್ರಾಂಬೆಯಲ್ಲಿ ಅಧ್ಯಯನ ಸಂಸ್ಥೆ ಆರಂಭ. 1967ರಲ್ಲಿ ಭಾಭ ಅಟಾಮಿಕ್ ರಿಸರ್ಚ್ ಸೆಂಟರ್ ಎಂದು ನಾಮಕರಣ

1958: ಸೇನಾ ಶಕ್ತಿಗೆ ಬಲ ತುಂಬಲು, ಡಿಫೆನ್ಸ್ ರಿಸರ್ಚ್ & ಡೆವಲಪ್ಮೆಂಟ್ ಆರ್ಗನೈಝೇಶನ್ (DRDO)ಗೆ ಚಾಲನೆ.

1959: ರೇಡಿಯೋಗೆ ಸೀಮಿತವಾಗಿದ್ದ ಭಾರತಕ್ಕೆ TV ಭಾಗ್ಯ. ದೇಶದಲ್ಲಿ ನಿಯಮಿತ ಅವಧಿಯ TV ಕಾರ್ಯಕ್ರಮ ಶುರು.

1959: ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಸಂಸ್ಥೆಯಿಂದ  TIFR ಆಟೋಮ್ಯಾಟಿಕ್ ಕಂಪ್ಯೂಟರ್ ಎಂಬ  ದೇಶದ ಮೊದಲ ಡಿಜಿಟಲ್ ಕಂಪ್ಯೂಟರ್ ನಿರ್ಮಾಣ.

1968: ಭಾರತದ ಮೊದಲ ಟೆಕ್ ಕಂಪನಿ- ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್- ಜನನ. ಪಂಚ್ ಕಾರ್ಡ್- ಈ ಕಂಪನಿಯ ಮೊದಲ ಸೇವೆ.

1969: ಇವತ್ತು ನಾವು ISRO ಮತ್ತು ಚಂದ್ರಯಾನದ ಬಗ್ಗೆ ಹೆಮ್ಮೆಪಡುತ್ತಿದ್ದೇವೆ. ಬಾಹ್ಯಾಕಾಶ ವಿಜ್ಞಾನ ಅಧ್ಯಯನ ಮತ್ತು ತಂತ್ರಜ್ಞಾನ ಅಭಿವೃದ್ಧಿಗಾಗಿ ಇಸ್ರೋ ಹುಟ್ಟಿಕೊಂಡಿದ್ದು 1969ರಲ್ಲಿ.

1970: ಕಂಪ್ಯೂಟಿಂಗ್ ಮತ್ತು ಇಲೆಕ್ಟ್ರಾನಿಕ್ ಬಳಕೆಗೆ ಒತ್ತು ನೀಡಲು ಪ್ರತ್ಯೇಕ ಇಲೆಕ್ಟ್ರಾನಿಕ್ಸ್ ಇಲಾಖೆ ಶುರು.

1974: ಜಗತ್ತಿನ ಮುಂದೆ ಭಾರತದ ಶಕ್ತಿ ಪ್ರದರ್ಶನ! ರಾಜಸ್ಥಾನದ ಪೋಕ್ರಾನಿನಲ್ಲಿ ಮೊದಲ ಅಣು ಬಾಂಬ್ ಪರೀಕ್ಷೆ.

1978: ಮೊದಲ ಬಾರಿಗೆ ಮೈಕ್ರೋ ಕಂಪ್ಯೂಟರ್ ನೀತಿ ಪ್ರಕಟ. ಮುಂದಿನ ದಿನಗಳಲ್ಲಿ ವಿಪ್ರೋ, HCLನಂಥ ಕಂಪನಿಗಳಿಂದ ಕಾರ್ಯಾರಂಭ.

1981: ಕರ್ನಾಟಕದ ಕಣ್ಮಣಿ, ಜಾಗತಿಕ ಸಾಫ್ಟ್ ವೇರ್ ದೈತ್ಯ ಇನ್ಫೋಸಿಸ್ ಹುಟ್ಟು

1983: ಬಾಹ್ಯಾಕಾಶದ ಮಹಾತ್ವಾಕಾಂಕ್ಷಿ ಯೋಜನೆ ಇಂಡಿಯನ್ ನ್ಯಾಷನಲ್ ಸ್ಯಾಟಲೈಟ್ ಸಿಸ್ಟಮ್‌ಗೆ ಚಾಲನೆ

1984: ಬಾಹ್ಯಾಕಾಶಕ್ಕೆ ಭಾರತೀಯನ ಮೊದಲ ಹಾರಾಟ. ಏ.02ರಂದು ಗಗನಯಾತ್ರಿ ರಾಕೇಶ್ ಶರ್ಮಾ ಪಯಣ ಶುರು.

1986: ಅಬ್ಬಬ್ಬಾ... ಭಾರತೀಯ ರೈಲ್ವೇಯೇ ಒಂದು ವಿಸ್ಮಯ. ರೈಲ್ವೇ ಸೀಟು ರಿಸರ್ವೇಶನ್ ವ್ಯವಸ್ಥೆಯ ಕಂಪ್ಯೂಟರೀಕರಣ.

1991: ಸಾಫ್ಟ್‌ವೇರ್ ರಫ್ತು ಮಾಡಲು ಬಳಸುವ ಕಂಪ್ಯೂಟರ್ಸ್ ಮೇಲೆ ಆಮದು ಸುಂಕ ಕಡಿತ. ಆ ಮೂಲಕ ಬರುವ ಆದಾಯಕ್ಕೆ 10 ವರ್ಷ ತೆರಿಗೆ ಇಲ್ಲ ಎಂಬ ನಿರ್ಧಾರ.

1991: ಭಾರತದ ಮೊದಲ ಸ್ವದೇಶಿ ನಿರ್ಮಿತ  ಸೂಪರ್ ಕಂಪ್ಯೂಟರ್ PARAM 8000 ಅನಾವರಣ

1995: ಮೊಬೈಲ್ ಫೋನ್ ಸೇವೆಗೆ ಚಾಲನೆ! ಅಂದಿನ ಪಶ್ಚಿಮ ಬಂಗಾಳ ಸಿಎಂ ಜ್ಯೋತಿ ಬಸು ಅವರಿಂದ ಟೆಲಿಕಾಂ ಸಚಿವ ಸುಖ್ ರಾಮ್ ಗೆ ಮೊದಲ ಮೊಬೈಲ್ ಕರೆ.

2008: ಚಂದ್ರನಂಗಳಕ್ಕೆ ತಲುಪುವ ಪ್ರಯತ್ನ. ಚಂದ್ರಯಾನ -1ಕ್ಕೆ ಇಸ್ರೋ ಚಾಲನೆ.

2013: ಭೂಮಿ-ಚಂದ್ರ ಬಿಟ್ಟು ಇನ್ನೂ ಸ್ವಲ್ಪ ದೂರಕ್ಕೆ ಸಾಗುವ ಸಾಹಸ. ಮಾರ್ಸ್ ಆರ್ಬಿಟರ್ ಮಿಷನ್ (ಮಂಗಳಯಾನ)ಕ್ಕೆ ಚಾಲನೆ.

2016: ಪ್ರತ್ಯೇಕ ಮಾಹಿತಿ ತಂತ್ರಜ್ಞಾನ ಇಲಾಖೆ ಶುರು.

loader