- Home
- Entertainment
- Sandalwood
- Vasishta Simha Hariprriya Son: ಕೃಷ್ಣ ಜನ್ಮಾಷ್ಠಮಿಯಂದು ಮಗನಿಗೆ ಅರ್ಥಪೂರ್ಣ ಹೆಸರಿಟ್ಟ ವಸಿಷ್ಠ ಸಿಂಹ, ಹರಿಪ್ರಿಯಾ
Vasishta Simha Hariprriya Son: ಕೃಷ್ಣ ಜನ್ಮಾಷ್ಠಮಿಯಂದು ಮಗನಿಗೆ ಅರ್ಥಪೂರ್ಣ ಹೆಸರಿಟ್ಟ ವಸಿಷ್ಠ ಸಿಂಹ, ಹರಿಪ್ರಿಯಾ
ಕನ್ನಡದ ತಾರಾ ಜೋಡಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅವರು ಕೃಷ್ಣ ಜನ್ಮಾಷ್ಠಮಿ ದಿನವೇ ಮಗನಿಗೆ ನಾಮಕರಣ ಮಾಡಿದ್ದಾರೆ.

ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ದಂಪತಿ ತಮ್ಮ ಮುದ್ದು ಮಗನಿಗೆ ನಾಮಕರಣ ಮಾಡಿದ್ದಾರೆ. ಮಗ ಹುಟ್ಟಿ ಆರು ತಿಂಗಳಾಗಿತ್ತು, ಆದರೆ ಮಗನ ಮುಖ ರಿವೀಲ್ ಮಾಡಿರಲಿಲ್ಲ. ಈ ವಿಶೇಷ ದಿನದಂದು ಅವರು ಮಗನಿಗೆ ನಾಮಕರಣ ಮಾಡಿದ್ದಾರೆ.
ಸ್ಯಾಂಡಲ್‌ವುಡ್ ತಾರೆಯರು ಈ ಕಾರ್ಯಕ್ರಮಕ್ಕೆ ಬಂದಿದ್ದರು. ಇವರ ಜೀವನಕ್ಕೆ ಬ್ಯಾಕ್ ಟು ಬ್ಯಾಕ್ ಖುಷಿ ಎಂದು ಹೇಳಬಹುದು. ಈ ಜೋಡಿ ಮದುವೆಯಾಗಿ ಒಂದು ವರ್ಷ ತುಂಬಿದಂತೆ ಇವರು ಹೊಸ ಸದಸ್ಯರ ನಿರೀಕ್ಷೆಯಲ್ಲಿದ್ದರು. ಈಗ ನಾಮಕರಣ ಮಾಡಿದ್ದಾರೆ.
ಮಗನಿಗೆ ವಿಪ್ರಾ ಎಂದು ಹೆಸರು ಇಟ್ಟಿದ್ದಾರೆ. “ವಿಪ್ರಾ ಎಂದರೆ ಶಿವತತ್ವ,ಎರಡು ಶಕ್ತಿಗಳ ಆಶೀರ್ವಾದ ಎಂದು ಹೇಳಿದ್ದಾರೆ. ಹೆಚ್ಚು ಜ್ಞಾನವುಳ್ಳವನು ಅಥವಾ ಬುದ್ಧಿವಂತನು ಅಂತ ಕೂಡ ಹೇಳಲಾಗುತ್ತದೆ. ನಾವು ಇಷ್ಟಪಟ್ಟು ವಿಪ್ರಾ ಎಂದು ಹೆಸರಿಟ್ಟಿದ್ದೇವೆ, ನಾಳೆ ಕಂಪ್ಲೆಂಟ್ ಮಾಡದೆ ಇದ್ದರೆ ಸಾಕು” ಎಂದು ಹರಿಪ್ರಿಯಾ ಹೇಳಿದ್ದಾರೆ.
ಮೈಸೂರಿನ ಆಶ್ರಮದಲ್ಲಿ 2023ರ ಜನವರಿ 26ರಂದು ಹರಿಪ್ರಿಯಾ, ವಸಿಷ್ಠ ಸಿಂಹ ಮದುವೆಯಾಗಿದ್ದರು. ಮದುವೆ ವಾರ್ಷಿಕೋತ್ಸವದ ದಿನವೇ ಹರಿಪ್ರಿಯಾ ಅವರು ಮಗನಿಗೆ ಜನ್ಮ ನೀಡಿದ್ದರು. ಈ ಜೋಡಿ ಪ್ರೀತಿಸಿ ಮದುವೆಯಾಗಿತ್ತು,
ಅಂದಹಾಗೆ ವಸಿಷ್ಠ ಸಿಂಹ ಅವರು ಅದ್ದೂರಿಯಾಗಿ ಪತ್ನಿ ಸೀಮಂತ ಮಾಡಿದ್ದರು. ಕನ್ನಡದ ಸಾಕಷ್ಟು ಗಣ್ಯರು ಈ ಸೀಮಂತದಲ್ಲಿ ಭಾಗಿಯಾಗಿದ್ದರು. ಪತ್ನಿಗೋಸ್ಕರ ವಸಿಷ್ಠ ಹಾಡು ಕೂಡ ಹಾಡಿದ್ದರು.
ದುಬೈನಲ್ಲಿ ಹರಿಪ್ರಿಯಾ, ವಸಿಷ್ಠ ಸಿಂಹ ಕೈ ಕೈ ಹಿಡಿದುಕೊಂಡು ಓಡಾಡುತ್ತಿದ್ದ ವಿಡಿಯೋವೊಂದು, ಹಾಗೆಯೇ ಡ್ಯಾನ್ಸ್ ಮಾಡುತ್ತಿದ್ದ ವಿಡಿಯೋವೊಂದು ವೈರಲ್ ಆಗಿತ್ತು. ಆಗಲೇ ಇವರಿಬ್ಬರ ಲವ್ ಬಗ್ಗೆ ಅನುಮಾನ ಬಂದಿತ್ತು. ಆಮೇಲೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಡದೆ, ಮನೆಯಲ್ಲಿಯೇ ಸಿಂಪಲ್ ಆಗಿ ನಿಶ್ಚಿತಾರ್ಥ ಮಾಡಿಕೊಂಡು ಪ್ರೀತಿ ಮಾಡ್ತಿರೋದು ಹೌದು, ಮದುವೆ ಆಗುತ್ತೇವೆ ಎಂದು ಕೂಡ ಹೇಳಿದ್ದರು.
ವಸಿಷ್ಠ ಸಿಂಹ ಅವರು ಕನ್ನಡ ಸೇರಿದಂತೆ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮದುವೆ, ಮಗು ಎಂದು ಬ್ಯುಸಿ ಇರುವ ಹರಿಪ್ರಿಯಾ ಅವರು ಒಂದಷ್ಟು ಸಮಯ ಬ್ರೇಕ್ ತಗೊಂಡು, ಆಮೇಲೆ ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಳ್ಳಲೂಬಹುದು.