RSSಗೆ ಅವಮಾನ ಮಾಡಿದ್ದು ನಾನಲ್ಲ, ಮುನಿರತ್ನ; ಡಿಸಿಎಂ ಡಿಕೆ ಶಿವಕುಮಾರ್ ಫಸ್ಟ್ ರಿಯಾಕ್ಷನ್
DK Shivakumar vs Munirathna clash: ಡಿಸಿಎಂ ಡಿಕೆ ಶಿವಕುಮಾರ್ ಅವರ 'ಬೆಂಗಳೂರು ನಡಿಗೆ' ಕಾರ್ಯಕ್ರಮದ ವೇಳೆ ಮತ್ತಿಕೆರೆಯ ಜೆಪಿ ಪಾರ್ಕ್‌ನಲ್ಲಿ ಹೈಡ್ರಾಮಾ ನಡೆಯಿತು. ಸಾರ್ವಜನಿಕ ಸಂವಾದ ವೇದಿಕೆಗೆ ಆರ್‌ಎಸ್‌ಎಸ್ ಗಣವೇಷದಲ್ಲಿ ಬಂದ ಶಾಸಕ ಮುನಿರತ್ನ ಹಾಗೂ ಡಿಕೆಶಿ ನಡುವೆ ಮಾತಿನ ಚಕಮಕಿ ನಡೆಯಿತು.

ಡಿಕೆ ಶಿವಕುಮಾರ್ ಭೇಟಿ
ಬೆಂಗಳೂರು: ಸಿಲಿಕಾನ್ ಸಿಟಿಯ ಜನರ ಸಮಸ್ಯೆಯನ್ನು ಆಲಿಸಲು ಡಿಸಿಎಂ ಡಿಕೆ ಶಿವಕುಮಾರ್ ಪ್ರತಿ ಶನಿವಾರ ಮತ್ತು ಭಾನುವಾರ 'ಬೆಂಗಳೂರು ನಡಿಗೆ' ಕಾರ್ಯಕ್ರಮ ಆಯೋಜಿಸಿ, ನಗರದ ಪ್ರಮುಖ ಪಾರ್ಕ್‌ಗಳಿಗೆ ತೆರಳುತ್ತಿದ್ದಾರೆ. ಇಂದು ಮತ್ತಿಕೆರೆಯ ಜೆಪಿ ಪಾರ್ಕ್‌ಗೆ ಡಿಕೆ ಶಿವಕುಮಾರ್ ಭೇಟಿ ನೀಡಿದ್ದರು. ಈ ವೇಳೆ ಸಾರ್ವಜನಿಕ ಸಂವಾದ ವೇದಿಕೆ ಮೇಲೆ ಹೈಡ್ರಾಮಾ ನಡೆಯಿತು.
ಆರ್‌ಎಸ್‌ಎಸ್ ಸಂಸ್ಥೆಗೆ ಅವಮಾನ
ಆರ್‌ಎಸ್‌ಎಸ್ ಸಂಸ್ಥೆಗೆ ಅವಮಾನ ಮಾಡಿದ್ದಾರೆ. ಶಾಸಕರಾಗಿ ಬಂದು ವೇದಿಕೆ ಮೇಲೆ ಮಾತನಾಡಬಹುದಿತ್ತು. ಗಣವೇಷಧಾರಿಯಾಗಿ ಇಲ್ಲಿಗೆ ಬರುವ ಮೂಲಕ ಆರ್‌ಎಸ್‌ಎಸ್ ಸಂಸ್ಥೆಗೆ ಅವಮಾನಿಸಿದ್ದಾರೆ. ಇದ್ಯಾವ ಶಿಲಾನ್ಯಾಸ ಕಾರ್ಯಕ್ರಮ ಅಲ್ಲ. ಇದು ಸಾರ್ವಜನಿಕರ ಕಾರ್ಯಕ್ರಮವಾಗಿದ್ದು, ಯಾರು ಬೇಕಾದ್ರೂ ಇಲ್ಲಿಗೆ ಬರಬಹುದು. ನಿನ್ನೆ ಲಾಲ್‌ಬಾಗ್ ನಡಿಗೆಯಲ್ಲಿ ಶಾಸಕ ರಿಜ್ವಾನ್ ಅರ್ಷದ್ ಬಂದಿದ್ದರು. ಪಬ್ಲಿಸಿಟಿಗಾಗಿ ಮುನಿರತ್ನ ಇಲ್ಲಿಗೆ ಬಂದಿದ್ದಾರೆ ಎಂದು ಆರೋಪಿಸಿದರು.
ಆರೋಪಕ್ಕೆ ತಿರುಗೇಟು ನೀಡಿದ ಡಿಕೆ ಶಿವಕುಮಾರ್
ಮಾಧ್ಯಮಗಳ ಜೊತೆ ಮಾತನಾಡಿದ ಮುನಿರತ್ನ, ನನ್ನ ಮೇಲೆ ಸುಳ್ಳು ಕೇಸ್ ದಾಖಲಿಸಲಾಗಿತ್ತು ಎಂದು ಆರೋಪಿಸಿದ್ದರು. ಈ ಆರೋಪಕ್ಕೆ ತಿರುಗೇಟು ನೀಡಿದ ಡಿಕೆ ಶಿವಕುಮಾರ್, ಸಂಬಂಧಪಟ್ಟ ಸಂಸ್ಥೆಗಳಲ್ಲಿ ದೂರು ದಾಖಲಿಸಲಿ ಎಂದರು. ಜನರೇ ಅವರನ್ನು ಹೊರಗೆ ಕಳುಹಿಸುವ ಪ್ರಯತ್ನ ಮಾಡಿದರು ಎಂದರು.
1533 ಸಂಖ್ಯೆಗೆ ಕರೆ ಮಾಡಿ
ಬೆಂಗಳೂರು ನಾಗರೀಕರ ಜೊತೆ ನಡೆಯಬೇಕೆಂದು ಎಲ್ಲಾ ನಾಗರಿಕರಿಗೂ ಆಹ್ವಾನ ನೀಡಿದ್ದೇನೆ. ಸಾರ್ವಜನಿಕರು 1533 ಸಂಖ್ಯೆಗೆ ಕರೆ ಮಾಡಿ ಸಮಸ್ಯೆಯನ್ನು ದಾಖಲಿಸಬಹುದು. ಜೆಪಿ ಪಾರ್ಕಿನಲ್ಲಿ ಹಲವು ಕೆಲಸಗಳು ಅರ್ಧಕ್ಕೆ ನಿಂತಿರೋದು ನೋಡಿ ಬೇಸರವಾಗಿದೆ. ಆದ್ರೂ ಪರವಾಗಿಲ್ಲ, ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಭರವಸೆ ನೀಡಿದರು. ಸಂವಾದ ಕಾರ್ಯಕ್ರಮ ವಿಳಂಬವಾಗಿದ್ದಕ್ಕೆ ಸಾರ್ವಜನಿಕರಲ್ಲಿ ಡಿಕೆ ಶಿವಕುಮಾರ್ ಕ್ಷಮೆ ಕೇಳಿದರು.
ಇದನ್ನೂ ಓದಿ: 55 ವರ್ಷದ ನಂತರ ಬಾಲ್ಯದ ಗೆಳೆಯನನ್ನು ಭೇಟಿಯಾದ ಡಿಸಿಎಂ ಡಿಕೆ ಶಿವಕುಮಾರ್
GBA ಮೀಟಿಂಗ್ ಗೆ ಬಂದಿಲ್ಲ
ಇದು ಜನರ ಸಮಸ್ಯೆ ಆಲಿಸುವ ಕಾರ್ಯಕ್ರಮವಾಗಿತ್ತು. ಎಲ್ಲರಿಗೆ ಏನು ಗೌರವ ಕೊಡಬೇಕು ಅದು ಕೊಟ್ಟಿದ್ದೇವೆ. GBA ಮೀಟಿಂಗ್ ಗೆ ಬಂದಿಲ್ಲ, ಅಲ್ಲಿ ಬಂದು ಸಮಸ್ಯೆ ಹೇಳಿಲ್ಲ. ಇಲ್ಲಿ ಬಂದು ಈ ರೀತಿ ಮಾತಾಡ್ತಿದ್ದಾರೆ ಎಂದು ಮುನಿರತ್ನ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಏಯ್ ಕರಿ ಟೋಪಿ MLA ಬಾರಯ್ಯ: ಗಣವೇಷಧಾರಿ ಮುನಿರತ್ನರನ್ನ ಕರೆದ ಡಿಕೆಶಿ; ವೇದಿಕೆ ಮೇಲೆ ಹೈಡ್ರಾಮಾ