ಪ್ರಮಾಣವಚನ ಸ್ವೀಕರಿಸಿದ ನೂತನ ಶಾಸಕರು: ಸಚಿವರಾಗಿ ಪ್ರಮಾಣ ಯಾವಾಗ..?

First Published 22, Dec 2019, 12:26 PM

ಇತ್ತೀಚೆಗ ನಡೆದ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಆಯ್ಕೆಯಾಗಿರುವ ನೂತನ ವಿಧಾನಸಭಾ ಸದಸ್ಯರ ಪೈಕಿ 13 ಜನರು ಇಂದು (ಭಾನುವಾರ) ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ವಿಧಾನಸೌಧದ ಬಾಂಕ್ವೇಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೂತನ ಶಾಸಕರಿಗೆ ಪ್ರಮಾಣ ವಚನ ಬೋಧಿಸಿದರು.

ಬಿಜೆಪಿಯ 12 ಹಾಗೂ ಓರ್ವ ಪಕ್ಷೇತರ ಶಾಸಕ ಪ್ರಮಾಣ ವಚನ ಸ್ವೀಕರಿಸಿದರು. ಆದ್ರೆ, ಇಬ್ಬರು ಕಾಂಗ್ರೆಸ್ ಶಾಸಕರು ಮಾತ್ರ ಪ್ರಮಾಣ ವಚನ ಸ್ವೀಕರಿಸಿಲ್ಲ. ಕಾರಣ ಏನು ಎನ್ನುವುದು ತಿಳಿದುಬಂದಿಲ್ಲ. 

ಡಿಸೆಂಬರ್ 5 ರಂದು ನಡೆದಿದ್ದ ಚುನಾವಣೆಯಲ್ಲಿ 12 ಬಿಜೆಪಿ, 2 ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದರು. ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಆಯ್ಕೆಯಾಗಿದ್ದಾರೆ. ಜೆಡಿಎಸ್ ಯಾವುದೇ ಕ್ಷೇತ್ರದಲ್ಲೂ ಗೆಲುವು ಸಾಧಿಸಿಲ್ಲ. ಇನ್ನು ಸಚಿವರಾಗಿ ಜನವರಿಯಲ್ಲಿ ಪ್ರಮಾಣವಚನ ಸ್ವೀಕರಿಸುವ ಎಲ್ಲಾ ಸಾಧ್ಯತೆಗಳಿವೆ. 

ಹೊಸಕೋಟೆ ಕ್ಷೇತ್ರ ನೂತನ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ (ಪಡೆದ ಮತಗಳು 81667)  ಅವರು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರನ್ನು 11486 ಮತಗಳ ಅಂತರದಿಂದ ಸೋಲಿ ಇಂದು (ಭಾನುವಾರ) ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ವಿಜಯನಗರ(ಹೊಸಪೇಟೆ) ಕ್ಷೇತ್ರದಿಂದ ಆಯ್ಕೆಯಾಗಿರುವ ಬಿಜೆಪಿಯ ಆನಂದ್ ಸಿಂಗ್ ಒಟ್ಟು 85477 ಮತಗಳೊಂದಿಗೆ 30125 ಅಂತರದಲ್ಲಿ ಕಾಂಗ್ರೆಸ್‌ನ ವೆಂಕಟರಾವ್‌ ಘೋರ್ಪಡೆ ಮಣಿಸಿ ಇಂದು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಇದೇ ಆನಂದ್ ಸಿಂಗ್ 2018ರ ಸಾರ್ವತ್ರಿಕ ವಿಧಾನಸಭೆಯ ಎಲೆಕ್ಷನ್‌ನಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಕೇವಲ 8228 ಮತಗಳಿಂದ ಗೆಲುವು ಸಾಧಿಸಿದ್ದರು.

ರಾಣೆಬೆನ್ನೂರು ಬಿಜೆಪಿ ಅರುಣ್ ಕುಮಾರ್ ಅವರು ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಉಪಚುನಾವಣೆಯಲ್ಲಿ ಒಟ್ಟು 95438 ಮತಗಳನ್ನು ಪಡೆದು 23222 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಕೋಳಿವಾಡ ಅವರನ್ನು ಸೋಲಿಸಿ ಇಂದು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು.

2018ರ ಸಾರ್ವತ್ರಿಕ ವಿಧಾನಸಭೆಯ ಎಲೆಕ್ಷನ್‌ನಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಕೇವಲ 555 ಗೆದ್ದಿದ್ದ ಬಿಸಿ ಪಾಟೀಲ್ ಬೈ ಎಲೆಕ್ಷನ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 29067 ಮತಗಳಿಂದ ಗೆಲುವಿನ ನಗೆ ಬೀರಿ ಇಂದು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.

2018ರ ಸಾರ್ವತ್ರಿಕ ವಿಧಾನಸಭೆಯ ಎಲೆಕ್ಷನ್‌ನಲ್ಲಿ ಕೆ.ಆರ್ ಪುರಂ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ 10,711 ಗೆದ್ದಿದ್ದ ಭೈರತಿ ಬಸವರಾಜ್ ಬೈ ಎಲೆಕ್ಷನ್‌ನಲ್ಲಿ 63,405 ಮತಗಳಿಂದ ಗೆದ್ದು ಮತ್ತೆ ಶಾಸಕರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದರು.

ಮಹಾಲಕ್ಷ್ಮೀ ಲೇಔಟ್‌ನ ಜೆಡಿಎಸ್ ಶಾಸಕರಾಗಿ ಬಿಜೆಪಿ ಸೇರಿರುವ ಕೆ ಗೋಪಾಲಯ್ಯ ಬೈ ಎಲೆಕ್ಷನ್‌ನಲ್ಲಿ ಒಟ್ಟು 85889 ಮತಗಳನ್ನ ಪಡೆದು 54386 ಮತಗಳಿಂದ ಮತ್ತೆ ಶಾಸಕರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದರು.

ಚಿಕ್ಕಬಳ್ಳಾಪುರ[ಬಿಜೆಪಿ]-ಡಾ.ಕೆ ಸುಧಾಕರ್-ಒಟ್ಟು ಪಡೆದ ಮತ-84489[ ಗೆಲುವಿನ ಅಂತರ-34901] [2018ರಲ್ಲಿ ಲೀಡ್  30431]

ಅಥಣಿ [ಬಿಜೆಪಿ]- ಮಹೇಶ್ ಕುಮಟಳ್ಳಿ- ಒಟ್ಟು ಪಡೆದ ಮತ- 99203, [ಗೆಲುವಿನ ಅಂತರ-39,989] [2018ರಲ್ಲಿ ಲೀಡ್ 2331]

ಕೆ.ಆರ್ ಪೇಟೆ ಜೆಡಿಎಸ್ ಶಾಸಕರಾಗಿದ್ದ ನಾರಾಯಣಗೌ ಅವರು ಬೈ ಎಲೆಕ್ಷನ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಒಟ್ಟು 66094 ಮತಗಳೊಂದಿಗೆ 9731 ಅಂತರದಲ್ಲಿ ಗೆಲುವು ಸಾಧಿಸಿ ಮತ್ತೆ ಶಾಸಕರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದರು. ಇವರು [2018ರಲ್ಲಿ 17,119 ಲೀಡ್‌ನಲ್ಲಿ ಗೆದ್ದಿದ್ದರು.

ಮೈತ್ರಿ ಸರ್ಕಾರದ ಅವನತಿಗೆ ಪ್ರಮುಖ ಕಾರಣರಾದ ಗೋಕಾಕ್‌ ಕ್ಷೇತ್ರ ಶಾಸಕ ರಮೇಶ್ ಜಾರಕಿಹೊಳಿ ಬೈ ಎಲೆಕ್ಷನ್‌ನಲ್ಲಿ ಬಿಜೆಪಿಯಿಮದ ಸ್ಪರ್ಧಿಸಿ ಒಟ್ಟು 87450 ಮತಗಳೊಂದಿಗೆ ಕಾಂಗ್ರೆಸ್‌ನ ಲಖನ್ ಜಾರಕಿಹೊಳಿ ಅವರನ್ನು 29,006 ಮತಗಳ ಅಂತರದಿಂದ ಗೆಲುವು ಸಾಧಿಸಿದರು. [2018ರಲ್ಲಿ ಲೀಡ್ 14280]

ಯಲ್ಲಾಪುರದಲ್ಲಿ ಕಾಂಗ್ರೆಸ್‌ನಿಂದ 2018ರಲ್ಲಿ 1483 ಲೀಡ್‌ನಿಂದ ಗೆದ್ದಿದ್ದ ಶಿವರಾಮ್ ಹೆಬ್ಬಾರ್ ಬೈ ಎಲೆಕ್ಷನ್‌ನಲ್ಲಿ ಬಿಜೆಪಿಯಿಂದ 31,408 ಮತಗಳ ಅಂತರದಲ್ಲಿ ಕಾಂಗ್ರೆಸ್‌ ಬೀಮಣ್ಣ ನಾಯ್ಕ್ ಅವರನ್ನು ಸೋಲಿಸಿ ಮತ್ತೆ ಶಾಸಕರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು.

ಕಾಗವಾಡ ಕ್ಷೇತ್ರದ ಬಿಜೆಪಿಯ ಶ್ರೀಮಂತ್ ಪಾಟೀಲ್- ಒಟ್ಟು 76,952 ಮತಗಳನ್ನು ಪಡೆದು 18,557 ಅಂತರದಲ್ಲಿ ಗೆಲುವು ಸಾಧಿಸಿ ಇಂದು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ([2018ರಲ್ಲಿ ಲೀಡ್ 32,942]

ಯಶವಂತಪುರ ಕ್ಷೇತ್ರದ ಬಿಜೆಪಿಯ ಎಸ್.ಟಿ ಸೋಮಶೇಖರ್ ಅವರು ಬೈ ಎಲೆಕ್ಷನ್‌ನಲ್ಲಿ ಒಟ್ಟು 144722 ಮತಗಳನ್ನು ಪಡೆಯುವ ಮೂಲಕ  27699 ಅಂತರದಲ್ಲಿ ಗೆಲುವು ಸಾಧಿಸಿ ಇಂದು ಮತ್ತೆ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು.

loader