ಪತಿಗೆ ವಿಶೇಷವಾಗಿ ಆ್ಯನಿವರ್ಸರಿ ವಿಶ್‌ ಮಾಡಿದ ಸಾನಿಯಾ ಮಿರ್ಜಾ!

First Published Apr 14, 2021, 11:54 AM IST

ಭಾರತೀಯ ಟೆನಿಸ್ ಸ್ಟಾರ್‌ ಸಾನಿಯಾ ಮಿರ್ಜಾ ಮತ್ತು  ಪಾಕಿಸ್ತಾನಿ ಕ್ರಿಕೆಟರ್‌ ಶೋಯೆಬ್ ಮಲಿಕ್ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಏಪ್ರಿಲ್ 12 ರಂದು ಸೆಲಬ್ರೆಟ್‌ ಮಾಡಿಕೊಂಡರು. ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಏಪ್ರಿಲ್ 12,2010 ರಂದು ಹೈದರಾಬಾದ್‌ನಲ್ಲಿ ವಿವಾಹವಾದರು. ಮದುವೆಯ 11ನೇ ಆನಿವರ್ಸರಿಯಂದು ಸಾನಿಯಾ ಮಿರ್ಜಾ ತನ್ನ ಪತಿ ಶೋಯೆಬ್ ಮಲಿಕ್ ಅವರನ್ನು ಬಹಳ ವಿಶೇಷ ರೀತಿಯಲ್ಲಿ ವಿಶ್‌ ಮಾಡಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಎರಡು ಫೋಟೋಗಳನ್ನು ಪೋಸ್ಟ್ ಮಾಡಿ ಫನ್ನಿ ಕ್ಯಾಪ್ಷನ್‌ ನೀಡಿದ್ದಾರೆ.