ಮಳೆಗಾಲದಲ್ಲಿ ಬಟ್ಟೆ ಒಣಗಿಸುವ ಸೂಪರ್ ಟಿಪ್ಸ್!
ಮಳೆಗಾಲದಲ್ಲಿ ಬಟ್ಟೆ ಬೇಗ ಒಣಗಿಸೋದು ಹೇಗೆ?: ಮಳೆಯಲ್ಲಿ ಬಟ್ಟೆ ಒಣಗಿಸೋಕೆ ಕಷ್ಟಾನಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಫಟಾಫಟ್ ಒಣಗಿಸಿ! ಟವೆಲ್ ನಿಂದ ಹೇರ್ ಡ್ರೈಯರ್ ತನಕ, ಅದ್ಭುತ ಟ್ರಿಕ್ಸ್ ಇಲ್ಲಿವೆ.

ಟವೆಲ್ ಸುತ್ತುವ ಟ್ರಿಕ್
ಮಳೆಗಾಲದಲ್ಲಿ ಬೇಗ ಬಟ್ಟೆ ಒಣಗಿಸಬೇಕಂದ್ರೆ, ಒದ್ದೆ ಬಟ್ಟೆಯನ್ನ ದಪ್ಪ ಟವೆಲ್‌ನಲ್ಲಿ ಸುತ್ತಿ ರೋಲ್ ಮಾಡಿ. ಸ್ವಲ್ಪ ಒತ್ತಿ. ಹೆಚ್ಚಿನ ನೀರು ಟವೆಲ್ ಹೀರಿಕೊಳ್ಳುತ್ತೆ, ಬಟ್ಟೆ ಬೇಗ ಒಣಗುತ್ತೆ.
ಗಾಳಿ ಬರುವ ರೂಮ್‌ನಲ್ಲಿ ಒಣಗಿಸಿ
ಮಳೆಗಾಲದಲ್ಲಿ ಬಟ್ಟೆಗಳನ್ನು ಹೊರಗೆ ಹಾಕುವ ಬದಲು, ಮನೆಯ ಒಳಗೆ ಗಾಳಿ ಬರುವ ರೂಮ್‌ನಲ್ಲಿ ಹಾಕಿ. ಫ್ಯಾನ್ ಗಾಳಿ ಬೀಸುವ ಜಾಗದಲ್ಲಿ ಬಟ್ಟೆ ಬೇಗ ಒಣಗುತ್ತದೆ.
ಹೇರ್ ಡ್ರೈಯರ್ ಉಪಯೋಗಿಸಿ
ಯಾವುದೇ ಬಟ್ಟೆ ತುರ್ತಾಗಿ ಬೇಕಾದ್ರೆ, ಅದು ಒದ್ದೆಯಾಗಿದ್ರೆ, ಹೇರ್ ಡ್ರೈಯರ್‌ನಿಂದ ಬಿಸಿ ಗಾಳಿ ಬೀಸಿ. ತುಂಬಾ ಹತ್ತಿರದಿಂದ ಮಾಡ್ಬೇಡಿ, ಬಟ್ಟೆ ಹಾಳಾಗಬಹುದು. ಸ್ವಲ್ಪ ದೂರದಿಂದ ಬಿಸಿ ಗಾಳಿ ಬೀಸಿ ಒಣಗಿಸಿ.
ಐರನ್ & ಟವೆಲ್ ಟ್ರಿಕ್
ಒದ್ದೆ ಬಟ್ಟೆ ಮೇಲೆ ಒಣ ಟವೆಲ್ ಇಟ್ಟು, ಅದರ ಮೇಲೆ ಬಿಸಿ ಐರನ್ ಮಾಡಿ. ಬಿಸಿ ಮತ್ತು ಟವೆಲ್ ಎರಡೂ ಸೇರಿ ನೀರನ್ನು ಹೀರಿಕೊಂಡು ಬಟ್ಟೆ ಬೇಗ ಒಣಗುತ್ತದೆ.
ಉಪ್ಪು & ಫಿಟ್ಕರಿ ನೀರು ಉಪಯೋಗಿಸಿ
ಬಟ್ಟೆ ತೊಳೆಯುವಾಗ ಕೊನೆಯಲ್ಲಿ ಉಪ್ಪು ಮತ್ತು ಫಿಟ್ಕರಿ ಹಾಕಿ, ಬಟ್ಟೆ ಹಾಕಿ ಹಿಂಡಿ. ಇದರಿಂದ ಬಟ್ಟೆಯಲ್ಲಿ ನೀರು ಕಡಿಮೆ ಉಳಿದು ಬೇಗ ಒಣಗುತ್ತದೆ.
ರೂಮ್ ಹೀಟರ್/ಬ್ಲೋವರ್ ಉಪಯೋಗಿಸಿ
ರೂಮ್‌ನಲ್ಲಿ ಹೀಟರ್/ಬ್ಲೋವರ್ ಇದ್ರೆ, ಅದರ ಹತ್ತಿರ ಬಟ್ಟೆಗಳನ್ನು ಹಾಕಿ, ಆದರೆ ತುಂಬಾ ಹತ್ತಿರ ಇಡಬೇಡಿ. ಸ್ವಲ್ಪ ದೂರದಲ್ಲಿ ತೂಗು ಹಾಕಿ. ಬಟ್ಟೆ ಸುಲಭವಾಗಿ ಮತ್ತು ಬೇಗ ಒಣಗುತ್ತದೆ.