ಕೋಟಿ-ಚೆನ್ನಯ ಬಿಂಬ ಸ್ಥಾಪ​ನೆ, ಗೆಜ್ಜೆಗಿರಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

First Published 29, Feb 2020, 12:03 PM

ದೇಯಿ ಬೈದ್ಯೆತಿ, ಕೋಟಿಚೆನ್ನಯರ ಮೂಲಸ್ಥಾನವಾದ ಗೆಜ್ಜೆಗಿರಿ ನಂದನ ಬಿತ್ತಲ್‌ ಕ್ಷೇತ್ರದಲ್ಲಿ ಶುಕ್ರವಾರ ಬೆಳಗ್ಗೆ ದೇಯಿ ಬೈದ್ಯೆತಿ ಬಿಂಬ ಪ್ರತಿಷ್ಠೆ, ಸಾಯನ ಬೈದ್ಯರ ಗುರುಪೀಠ ಸ್ಥಾಪನೆ, ಮೂಲ ಗರಡಿಯಲ್ಲಿ ಗುರು ಸಾಯನ ಬೈದರ ಹಾಗೂ ಕೋಟಿ-ಚೆನ್ನಯರ ಬಿಂಬ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಕ್ಷೇತ್ರದ ತಂತ್ರಿ ಎಂ.ಕೆ.ಲೋಕೇಶ್‌ ತಂತ್ರಿ ನೇತೃತ್ವದಲ್ಲಿ ನಡೆಯಿತು. ಫೋಟೋಸ್ ಇಲ್ಲಿವೆ.

ಗೆಜ್ಜೆಗಿರಿ ಕ್ಷೇತ್ರದಲ್ಲಿ ಆಕರ್ಷಕ ಕೆತ್ತನೆಗಳೊಂದಿಗೆ ಪಾರಂಪರಿಕ ಶೈಲಿಯಲ್ಲಿ ಭವ್ಯವಾಗಿ ನಿರ್ಮಿಸಲಾಗಿರುವ ಸತ್ಯಧರ್ಮ ಚಾವಡಿಯಲ್ಲಿ 500 ವರ್ಷಗಳ ಹಿಂದೆ ಬಾಳಿ ಬದುಕಿದ ದೈವಾಂಶ ಸಂಭೂತೆ ಮಾತೆ ದೇಯಿ ಬೈದೈತಿಯ ಬಿಂಬ ಪ್ರತಿಷ್ಠೆ, ಗುರು ಸಾಯನ ಬೈದರ ಗುರುಪೀರ ಸ್ಥಾಪನೆ ಮಾಡಲಾಯಿತು.

ಗೆಜ್ಜೆಗಿರಿಯ ಶಿಖರಾಗ್ರದಲ್ಲಿ ಭವ್ಯವಾಗಿ ನಿರ್ಮಿಸಲಾದ ಮೂಲಸ್ಥಾನ ಗರಡಿಯಲ್ಲಿ ತುಳುನಾಡಿನ ಅವಳಿ ಕಾರಣಿಕ ಪುರುಷರಾದ ಕೋಟಿ-ಚೆನ್ನಯರ ಹಾಗೂ ಗುರು ಸಾಯನ ಬೈದ್ಯರ ಬಿಂಬ ಪ್ರತಿಷ್ಠೆ ಮಾಡಿ ಬ್ರಹ್ಮಕಲಶೋತ್ಸವ ನೆರವೇರಿಸಲಾಯಿತು.

ಗೆಜ್ಜೆಗಿರಿ ಕ್ಷೇತ್ರದಲ್ಲಿ ಶುಕ್ರವಾರ ನಸುಕಿನ ವೇಳೆ ಗಣಪತಿ ಹೋಮ, ಶಿಖರ ಪ್ರತಿಷ್ಠೆ, ಗೆಜ್ಜೆಗಿರಿ ಶಿಖರಾಗ್ರದಲ್ಲಿ ನೂತನವಾಗಿ ನಿರ್ಮಿಸಲಾದ ಶಿಲಾಮಯ ಬೆರ್ಮೆರೆ ಗುಂಡದಲ್ಲಿ ಬೆರ್ಮೆರ್‌ ಶಿಲಾ ಸ್ಥಾಪನೆ ನಡೆಯಿತು.

ಜೀರ್ಣೋದ್ಧಾರಗೊಂಡ ದೇಯಿ ಬೈದೆತಿ ಸಮಾಧಿ

ಜೀರ್ಣೋದ್ಧಾರಗೊಂಡ ದೇಯಿ ಬೈದೆತಿ ಸಮಾಧಿ

Koti Chennayya

Koti Chennayya

ದೇಯಿ ಬೈದ್ಯೆತಿ ಮಹಾ ಸಮಾಧಿ

ದೇಯಿ ಬೈದ್ಯೆತಿ ಮಹಾ ಸಮಾಧಿ

ಬ್ರಹ್ಮ ಕಲಶೋತ್ಸವದ ಸಕಲ ಸಿದ್ಧತೆಗಳು ನಡೆದಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದಾರೆ.

ಬ್ರಹ್ಮಕಲಶೋತ್ಸವದ ಬಳಿಕ ಪ್ರಸನ್ನ ಪೂಜೆ, ಸತ್ಯಧರ್ಮ ಚಾವಡಿಯಲ್ಲಿ ನೈವೇದ್ಯ, ಮಹಾಪೂಜೆ, ಮಧ್ಯಾಹ್ನ ಮೂಲಸ್ಥಾನ ಗರಡಿಯಲ್ಲಿ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಧೂಮಾವತಿ ಸಾನಿಧ್ಯದಲ್ಲಿ ನವಕ ಪ್ರದಾನ ಹೋಮ, ಧ್ವಜಪೂಜೆ, ನೂತನವಾಗಿ ನಿರ್ಮಿಸಲಾದ ತಾಮ್ರ ಹೊದಿಕೆಯ ಧ್ವಜಸ್ತಂಭದಲ್ಲಿ ಧ್ವಜಾರೋಹಣ ಕಾರ್ಯಕ್ರಮಗಳು ನಡೆದವು.

ದೈಯಿ ಬೈದ್ಯತಿ ಮಹಾ ಸಮಾಧಿಯ ನೋಟ

ದೈಯಿ ಬೈದ್ಯತಿ ಮಹಾ ಸಮಾಧಿಯ ನೋಟ

ಹೂಗಳಿಂದ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಿರುವುದು

ಬ್ರಹ್ಮಕಲಶೋತ್ಸವ ಪ್ರಯುಕ್ತ ಗರಡಿ ಸುತ್ತ ಅಲಂಕಾರ ಮಾಡಲಾಗಿದೆ.

ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಭಕ್ತರು

ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಭಕ್ತರು

ಗರಡಿಯ ಬಳಿ ಕೈ ಮುಗಿದು ನಮಿಸುತ್ತಿರುವ ಭಕ್ತರು

ಗರಡಿಯ ಬಳಿ ಕೈ ಮುಗಿದು ನಮಿಸುತ್ತಿರುವ ಭಕ್ತರು

loader