MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • ಕೇಂಬ್ರಿಡ್ಡ್ ವಿಶ್ವವಿದ್ಯಾಲಯಕ್ಕಾಗಿ ರಾಹುಲ್ ಲುಕ್ ಬದಲು, ಕಳೆದೆರಡು ವರ್ಷದಲ್ಲಿ ರಾಗಾ ಸ್ಟೈಲ್ ಹತ್ತು ಹಲವು!

ಕೇಂಬ್ರಿಡ್ಡ್ ವಿಶ್ವವಿದ್ಯಾಲಯಕ್ಕಾಗಿ ರಾಹುಲ್ ಲುಕ್ ಬದಲು, ಕಳೆದೆರಡು ವರ್ಷದಲ್ಲಿ ರಾಗಾ ಸ್ಟೈಲ್ ಹತ್ತು ಹಲವು!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಬಿಳಿ ದಾಡಿ ಮೂಲಕ ಭಾರತ್ ಜೋಡೋ ಯಾತ್ರೆಯಲ್ಲಿ ಸಂಚರಿಸಿದ್ದರು. ಇದೇ ದಾಡಿ ಮೂಲಕ ಸಂಸತ್ತಿಗೂ ಹಾಜರಾಗಿದ್ದರು.ಇದೀಗ ರಾಹುಲ್ ಗಾಂಧಿ ಮತ್ತೆ ತಮ್ಮ ಸ್ಟೈಲ್ ಬದಲಿಸಿದ್ದಾರೆ. ಕೇಂಬ್ರಿಡ್ಡ್ ವಿಶ್ವವಿದ್ಯಾಲದಲ್ಲಿ ಉಪನ್ಯಾಸಕ್ಕಾಗಿ ರಾಹುಲ್ ಗಾಂಧಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಕೆಲ ವರ್ಷದಲ್ಲಿ ರಾಹುಲ್ ಗಾಂಧಿ ಹಲವು ಭಾರಿ ತಮ್ಮ ಸ್ಟೈಲ್ ಬದಲಿಸಿದ್ದಾರೆ. 

2 Min read
Suvarna News
Published : Mar 01 2023, 07:30 PM IST
Share this Photo Gallery
  • FB
  • TW
  • Linkdin
  • Whatsapp
17
rahul smart look

rahul smart look

2022ರ ಸೆಪ್ಟೆಂಬರ್ ತಿಂಗಳಲ್ಲಿ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಆರಂಭಿಸಿದರು. ಯಾತ್ರೆ ಸಾಗುತ್ತಿದ್ದಂತೆ ರಾಹುಲ್ ಗಾಂಧಿ ದಾಡಿ ಕೂಡ ಬೆಳೆದಿತ್ತು. ಕತ್ತರಿಸುವ ಮನಸ್ಸು ರಾಗಾ ಮಾಡಲಿಲ್ಲ. ಉದ್ದುದ್ದ ದಾಡಿ ಕುರಿತು ಹಲವು ತಮಾಷೆಗಳು ಹರಿದಾಡಿತ್ತು. ಇದೇ ದಾಡಿ ಮೂಲಕ ಸಂಸತ್ತಿಗೆ ಹಾಜರಾಗಿ ಮಾತನಾಡಿದ್ದರು. ರಾಹುಲ್ ಗಾಂಧಿ ತಮ್ಮ ಉದ್ದ ದಾಡಿಯಲ್ಲೇ ಇತ್ತೀಚೆಗೆ ಗುರುತಿಸಿಕೊಂಡಿದ್ದರು. ಇದೀಗ ರಾಹುಲ್ ಗಾಂಧಿ ದಿಢೀರ್ ತಮ್ಮ ಸ್ಟೈಲ್ ಬದಲಿಸಿದ್ದಾರೆ.

27
Rahul Gandhi

Rahul Gandhi

ಕೇಂಬ್ರಿಡ್ಜ್ ವಿಶ್ವಿವಿದ್ಯಾಲಯದಲ್ಲಿ ಉಪನ್ಯಾಸ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿಯನ್ನು ಆಹ್ವಾನಿಸಲಾಗಿತ್ತು. ಇದೀಗ ರಾಹುಲ್ ಗಾಂಧಿ ವಿಶ್ವವಿದ್ಯಾಲಯಕ್ಕೆ ಹೊಸ ಲುಕ್‌ನಲ್ಲಿ ಎಂಟ್ರಿಕೊಟ್ಟಿದ್ದಾರೆ. ಉದ್ದ ದಾಡಿಗೆ ಕತ್ತರಿಸಿ ಹಾಕಿದ್ದಾರೆ. ದಾಡಿ ಟ್ರಿಮ್ ಮಾಡಿದ್ದರೆ, ಇತ್ತ ಕೂದಲಿಗೂ ಕತ್ತರಿ ಹಾಕಿದ್ದಾರೆ. 

37
Congress leader Rahul Gandhi

Congress leader Rahul Gandhi

ಹೊಸ ಲುಕ್‌ನಲ್ಲಿ ರಾಹುಲ್ ಗಾಂಧಿ ಕೆಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಲುಕ್‌ನಲ್ಲಿ ರಾಹುಲ್ ಗಾಂಧಿ ಮತ್ತಷ್ಟು ಹ್ಯಾಂಡ್ಸಮ್ ಆಗಿ ಕಾಣುತ್ತಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಗಾಂಧಿ ಹೊಸ ಲುಕ್ ಭಾರಿ ವೈರಲ್ ಆಗಿದೆ. 

47
**EDS: IMAGE VIA AICC** Washim: Congress leader Rahul Gandhi during the party's 'Bharat Jodo Yatra', in Washim district, Wednesday, Nov. 16, 2022. (PTI Photo) (PTI11_16_2022_000245B)

**EDS: IMAGE VIA AICC** Washim: Congress leader Rahul Gandhi during the party's 'Bharat Jodo Yatra', in Washim district, Wednesday, Nov. 16, 2022. (PTI Photo) (PTI11_16_2022_000245B)

ಭಾರತ್ ಜೋಡೋ ಯಾತ್ರೆಗೂ ಮೊದಲು ರಾಹುಲ್ ಗಾಂಧಿ ಬಹುತೇಕವಾಗಿ ಕ್ಲೀನ್ ಶೇವ್ ಮೂಲಕ ಕಾಣಿಸಿಕೊಂಡಿದ್ದಾರೆ. ಒಂದೊಮ್ಮೆ ಚಿಕ್ಕ ಕೂದಲು, ಕೆಲವೊಮ್ಮೆ ಕೊಂಚ ಉದ್ದ ಕೂದಲಿನ ಮೂಲಕ ರಾಹುಲ್ ಗಾಂಧಿ ಕಾಣಿಸಿಕೊಂಡಿದ್ದಾರೆ.
 

57
RAHUL GANDHI

RAHUL GANDHI

ಟ್ರಿಮ್ ದಾಡಿ, ಕ್ಲೀನ್ ಶೇವ್ ಮೂಲಕ ರಾಹುಲ್ ಗಾಂಧಿ ಚಿರಪರಿಚಿತ. ರಾಹುಲ್ ಗಾಂಧಿ ತಮ್ಮ ಹೇರ್‌ಸ್ಟೈಲ್‌ನಲ್ಲಿ ಮಹತ್ತರ ಬದಲಾಣೆ ಮಾಡಿಲ್ಲ. ಬಹುತೇಕವಾಗಿ ಶಾರ್ಟ್ ಹೇರ್ ಮೂಲಕವೇ ರಾಹುಲ್ ಗಾಂಧಿ ಕಾಣಿಸಿಕೊಂಡಿದ್ದಾರೆ.

67
UP Congress Committee agreed to make Rahul Gandhi the national president decision was left to Sonia Gandhi

UP Congress Committee agreed to make Rahul Gandhi the national president decision was left to Sonia Gandhi

ಒಂದು ಬಾರಿ ರಾಹುಲ್ ಗಾಂಧಿ ಕೊಂಚ ಉದ್ದ ಕೂದಲು ಬಿಟ್ಟಿದ್ದರು. ಈ ವೇಳೆ ರಾಜೀವ್ ಗಾಂಧಿ ರೀತಿ ಕಾಣುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಮತ್ತೆ ಕೆಲವರು ರಾಜೀವ್ ಗಾಂಧಿ ರೀತಿ ಪ್ರಬುಧ್ಧರಾಗಿ ಕಾಣಲು ಈ ಸರ್ಕಸ್ ಮಾಡಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು.
 

77
rahul gandhi

rahul gandhi

ಇತ್ತೀಚೆಗೆ ರಾಹುಲ್ ಗಾಂಧಿ ಉದ್ದ ದಾಡಿಗೆ ಮೆಮೆಗಳು ಹರಿದಾಡಿತ್ತು. ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ರಾಹುಲ್ ಗಾಂಧಿ ಉದ್ದ ದಾಡಿಯಿಂದ ಸದ್ದಾಂ ಹುಸೇನ್ ರೀತಿ ಕಾಣುತ್ತಿದ್ದಾರೆ. ದಾಡಿ ಕತ್ತರಿಸಿ ಕೊಂಚ ಕೂದಲು ಬಿಟ್ಟರೆ ರಾಜೀವ್ ಗಾಂಧಿ ರೀತಿ ಕಾಣುತ್ತಾರೆ. ಕ್ಲೀನ್ ಶೇವ್ ಮಾಡಿದರೆ ನೆಹರೂ ರೀತಿ ಕಾಣುತ್ತಾರೆ ಎಂದಿದ್ದರು.

About the Author

SN
Suvarna News
ಕಾಂಗ್ರೆಸ್
ರಾಹುಲ್ ಗಾಂಧಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved