- Home
- News
- India News
- ರಾಷ್ಟ್ರಪತಿಗಳಿಗೆ ಸದಾ ನೆರಳಾಗಿರುವ ಮೇಜರ್ ರಿಷಭ್ ಸಿಂಗ್ ಸಂಬ್ಯಾಲ್ ಯಾರು? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ
ರಾಷ್ಟ್ರಪತಿಗಳಿಗೆ ಸದಾ ನೆರಳಾಗಿರುವ ಮೇಜರ್ ರಿಷಭ್ ಸಿಂಗ್ ಸಂಬ್ಯಾಲ್ ಯಾರು? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ
ಭಾರತೀಯ ಸೇನಾ ಸಮವಸ್ತ್ರ ಧರಿಸಿದ ಒಬ್ಬ ವ್ಯಕ್ತಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ಯಾವಾಗಲೂ ಕಾಣಿಸಿಕೊಳ್ಳುತ್ತಾರೆ. ರಾಷ್ಟ್ರಪತಿಯವರ ನೆರಳಿನಂತೆ ಜೊತೆಗಿದ್ದ ಈ ವ್ಯಕ್ತಿ ಮೇಜರ್ ರಿಷಭ್ ಸಿಂಗ್ ಸಂಬ್ಯಾಲ್. ನೆಟ್ಟಿಗರ ಹೃದಯ ಗೆದ್ದ ಮೇಜರ್ ಕುರಿತು ಇಲ್ಲಿದೆ ಮಾಹಿತಿ.

ರಾಷ್ಟ್ರಪತಿ ದ್ರೌಪದಿ ಮುರ್ಮು ಜೊತೆಗಿರುವ ವ್ಯಕ್ತಿ ಯಾರು?
ಭಾರತೀಯ ಸೇನಾ ಸಮವಸ್ತ್ರ ಧರಿಸಿದ ವ್ಯಕ್ತಿ ಯಾವಾಗಲೂ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರೊಂದಿಗೆ ಇರುತ್ತಾರೆ , ರಾಷ್ಟ್ರಪತಿಯವರು ಕಣ್ಣೀರಿಟ್ಟಾಗಿ ಕರ್ಚೀಫ್ ಕೊಡುವ, ಮಳೆಯಲ್ಲಿ ನೆನೆದಾಗ ಕೊಡೆ ಹಿಡಿಯುವ, ಒಟ್ಟಲ್ಲಿ ರಾಷ್ಟ್ರಪತಿಗಳ ನೆರಳಿನಂತೆ ಅವರ ಜೊತೆಗಿದ್ದ ಈ ವ್ಯಕ್ತಿ ಯಾರು?
ಮೇಜರ್ ರಿಷಬ್ ಸಿಂಗ್ ಸಂಬ್ಯಾಲ್
ರಾಷ್ಟ್ರಪತಿ ದ್ರೌಪತಿ ಮುರ್ಮು ಜೊತೆ ಇರುವ ಭಾರತೀಯ ಸೈನಿಕನ ಹೆಸರು ಮೇಜರ್ ರಿಷಬ್ ಸಿಂಗ್ ಸಂಬ್ಯಾಲ್, ಇವರು ಪ್ಯಾರಾಸ್ಪೆಷಲ್ ಫೋರ್ಸ್ ಕಮಾಂಡೋ. ಅವರು ಅಧ್ಯಕ್ಷ ದ್ರೌಪದಿ ಮುರ್ಮು ಅವರಿಗೆ ಸಹಾಯಕರು ಅಂದರೆ Aide-de-Camp (ADC) ಆಗಿದ್ದಾರೆ.
ADC ಯ ಕೆಲಸ
ADC ಅಧ್ಯಕ್ಷರ ವೇಳಾಪಟ್ಟಿಯನ್ನು ನಿರ್ವಹಿಸುವ ಪ್ರಯಾಣ ಮತ್ತು ಕಾರ್ಯಕ್ರಮಗಳನ್ನು ನಿಗಧಿ ಮಾಡುವ, ಭದ್ರತಾ ಕಾರ್ಯವಿಧಾನಗಳನ್ನು ಅನುಸರಿಸುವುದನ್ನು ಖಚಿತಪಡಿಸುತ್ತಾರೆ ಮತ್ತು ಪ್ರಮುಖ ಇಲಾಖೆಗಳೊಂದಿಗೆ ಸಂಪರ್ಕವನ್ನು ನಿರ್ವಹಿಸುವವರಾಗಿದ್ದಾರೆ
ಕಾಶ್ಮೀರ ಮೂಲ ನಿವಾಸಿ
ಜಮ್ಮುವಿನ ಡೋಗ್ರಾ ರಜಪೂತ ಜನಾಂಗದ ರಿಷಭ್ ಸಿಂಗ್ ಸಂಬ್ಯಾಲ್ (Major Rishabh Singh Sambyal) ಅವರು 2021 ರಲ್ಲಿ ಜಾಟ್ ರೆಜಿಮೆಂಟ್‌ನ ಕ್ಯಾಪ್ಟನ್ ಆಗಿ, ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ಒಂದು ತುಕಡಿಯ ನೇತೃತ್ವ ವಹಿಸಿದಾಗ ಮೊದಲ ಬಾರಿಗೆ ಬೆಳಕಿಗೆ ಬಂದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಂದ 'ಬೆಸ್ಟ್ ಮಾರ್ಚಿಂಗ್ ಕಂಟಿಜೆಂಟ್' ಟ್ರೋಫಿಯನ್ನು ಪಡೆದರು.
ವಿಶೇಷ ಪಡೆಗಳ ಅಧಿಕಾರಿ
ಮೇಜರ್ ರಿಷಭ್ ಸಿಂಗ್ ಸಂಬ್ಯಾಲ್ ಅವರು ಗಣ್ಯ 4 ಪ್ಯಾರಾ (ವಿಶೇಷ ಪಡೆ) ಅಧಿಕಾರಿ! ಅವರ ಕೆಲಸವು ಭದ್ರತಾ ಕರ್ತವ್ಯದಿಂದ ಹಿಡಿದು ರಾಜ್ಯ ಕಾರ್ಯಗಳವರೆಗೆ ರಾಷ್ಟ್ರಪತಿಗಳಿಗೆ ಸಹಾಯ ಮಾಡುವುದನ್ನು ಒಳಗೊಂಡಿರುತ್ತದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಎಡಿಸಿ ಆಗಿರುವ ಮೇಜರ್ ರಿಷಭ್ ಸಿಂಗ್ ಸಂಬ್ಯಾಲ್, ತಮ್ಮ ವರ್ಚಸ್ವಿ ವ್ಯಕ್ತಿತ್ವ ಮತ್ತು ರಾಷ್ಟ್ರಪತಿಯವರೊಂದಿಗಿನ ಹೃದಯಸ್ಪರ್ಶಿ ಸಂಬಂಧಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದ್ದಾರೆ. ಇವರ ಹೆಸರಿನಲ್ಲಿ ಸಾಕಷ್ಟು ಫ್ಯಾನ್ ಪೇಜ್ ಗಳು (Fan pages) ಸಹ ತೆರೆದುಕೊಂಡಿವೆ.
ವೈರಲ್ ಆಗುತ್ತಿರುವ ಫೋಟೋಗಳು
ಮೇಜರ್ ರಿಷಭ್ ಸಿಂಗ್ ಸಂಬ್ಯಾಲ್ ಯಾವುದೇ ರೀತಿಯ ಸಾಮಾಜಿಕ ಮಾಧ್ಯಮದಲ್ಲಿ ಖಾತೆಯನ್ನು ಹೊಂದಿಲ್ಲ, ಆದರೆ ಅವರ ಅಭಿಮಾನಿಗಳು ಅವರ ಫೋಟೋಗಳನ್ನು ಅಪ್‌ಲೋಡ್ ಮಾಡಲು ಹಲವಾರು ಖಾತೆಗಳನ್ನು ರಚಿಸಿದ್ದಾರೆ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಇವರ ಫೋಟೊ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತವೆ.