ತನ್ನ 5 ಕೋಟಿ ಆಸ್ತಿ ಎರಡು ಆನೆಗಳ ಹೆಸರಿಗೆ ಬರೆದ ಅಖ್ತರ್ ಇಮಾಮ್!

First Published Jun 9, 2020, 5:56 PM IST

ತನ್ನ ಪ್ರಾಣ ಕಾಪಾಡಿದ ಆನೆಗಳನ್ನು ದಾನಾಪುರದ ಜಾನಿಪುರ್‌ ನಿವಾಸಿ ಅಖ್ತರ್ ಇಮಾಮ್‌ ತನ್ನ ಐದು ಕೋಟಿಗೂ ಅಧಿಕ ಆಸ್ತಿಗೆ ಒಡೆಯರನ್ನಾಗಿಸಿದ್ದಾರೆ. ಈ ನಿಟ್ಟಿನಲ್ಲಿ ಈ ಎರಡು ಆನೆಗಳ ಹೆಸರಿನಲ್ಲಿ ದಾಖಲೆಗಳನ್ನೂ ರಿಜಿಸ್ಟರ್ ಆಫೀಸ್‌ನಲ್ಲಿ ರಿಜಿಸ್ಟರ್ ಮಾಡಿಸಿದ್ದಾರೆ. ಅಲ್ಲದೇ ಈ ಆನೆಗಳ ಹಹೆಸರಿಗಗೆ ತನ್ನ ಆಸ್ತಿಯನ್ನು ಬರೆದಿರುವುದಾಗಿ ಇಮಾಮ್ ಸಾರ್ವಜನಿಕವಾಗಿ ಘೋಷಿಸಿದ್ದಾರೆ. ಅಲ್ಲದೇ ನಮಗೇನಾದರೂ ಆದರೆ ನಮ್ಮ ಇಡೀ ಆಸ್ತಿ ಐರಾವತ ಸಂಸ್ಥೆಗೇ ಹೋಗುತ್ತದೆ. ಇದರಿಂದ ಆನೆಗಳನ್ನು ಸಂರಕ್ಷಿಸಿ ಬೇಟೆಗಾರರಿಂದ ಕಾಪಾಡುವ ಕೆಲಸವಾಗಬೇಕು ಎಂದಿದ್ದಾರೆ. ಇನ್ನು ತನ್ನೆಲ್ಲಾ ಆಸ್ತಿಯನ್ನು ಆನೆಗಳ ಹೆಸರಿಗೆ ಬರೆದ ಇಮಾಮ್ ಇವುಗಳಿಗೆ ನಾಮಕರಣ ಕೂಡಾ ಮಾಡಿದ್ದಾರೆ. ಒಂದರ ಹೆಸರು ಮೋತಿ ಎಂದಾದರೆ ಮತ್ತೊಂದಕ್ಕೆ ರಾಣಿ ಎಂದು ಹೆಸರಿಟ್ಟಿದ್ದಾರೆ. ಇವರಿಗೆ ಈ ಆನೆಗಳೇ ಕುಟುಂಬವಾಗಿದೆ.