ಬಿಹಾರ ಗೆಲುವಿಗೆ ಕಾಂಗ್ರೆಸ್‌ನಿಂದ 'ದಶ'ಸೂತ್ರ: ಇದು 5+1+4=10 ಲೆಕ್ಕಾಚಾರ
Bihar assembly election strategy: ಬಿಹಾರ ವಿಧಾನಸಭಾ ಚುನಾವಣೆಯನ್ನು ಗೆಲ್ಲಲು ಕಾಂಗ್ರೆಸ್, ಕರ್ನಾಟಕ ಮತ್ತು ತೆಲಂಗಾಣ ಮಾದರಿಯ 'ದಶ ಸೂತ್ರ' ರಣತಂತ್ರವನ್ನು ಸಿದ್ಧಪಡಿಸಿದೆ. ಇದು 5+1+4=10 ಲೆಕ್ಕಾಚಾರವಾಗಿದೆ.

ಬಿಹಾರ ಗೆಲ್ಲಲು ಕಾಂಗ್ರೆಸ್ ದಶ ಸೂತ್ರ
ಬಿಹಾರ ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ತಯಾರಿ ಮಾಡಿಕೊಳ್ಳುತ್ತಿವೆ. ಕಾಂಗ್ರೆಸ್ ವರ್ಕಿಂಗ್ ಕಮಿಟಿಯ ಸಭೆ ನಡೆಯುತ್ತಿದ್ದು, ಚುನಾವಣೆ ಪ್ರಚಾರ ಮತ್ತು ರೂಪರೇಷಗಳ ಕುರಿತು ಯೋಜನೆ ತಯಾರಿಸಿಕೊಳ್ಳುತ್ತಿವೆ. ಬಿಹಾರ ಗೆಲ್ಲಲು ಕಾಂಗ್ರೆಸ್ ದಶ ಸೂತ್ರ ಸಿದ್ಧ ಮಾಡಿಕೊಂಡಿದೆ ಎಂದು ವರದಿಯಾಗಿದೆ.
ಕಾಂಗ್ರೆಸ್ 10 ಗ್ಯಾರಂಟಿ
ತನ್ನ ಪ್ರಣಾಳಿಕೆಯಲ್ಲಿ ಬಿಹಾರ ಜನತೆಗೆ ಕಾಂಗ್ರೆಸ್ 10 ಗ್ಯಾರಂಟಿ ನೀಡಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಗ್ಯಾರಂಟಿಗಳಿಂದಾಗಿ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಬಹುಮತದ ಸರ್ಕಾರ ರಚನೆ ಮಾಡಿದೆ. ಹಾಗಾಗಿ ಇಲ್ಲಿಯ ಚುನಾವಣಾ ರಣರಂತ್ರಗಳನ್ನು ಬಿಹಾರದಲ್ಲಿ ಪ್ರಯೋಗಿಸಲು ಕಾಂಗ್ರೆಸ್ ಮುಂದಾಗಿದೆಯಂತೆ.
ಕರ್ನಾಟಕ & ತೆಲಂಗಾಣ ಮಾದರಿ
ರಾಷ್ಟ್ರೀಯ ಮಾಧ್ಯಮಗಳ ಪ್ರಕಾರ, ತೆಲಂಗಾಣ ಮತ್ತು ಕರ್ನಾಟಕದ ಡೇಟಾ ಮಾದರಿಯಲ್ಲಿಯೇ ಬಿಹಾರದಲ್ಲಿ ಕ್ಯಾಂಪೇನ್ ಆರಂಭಿಸುವುದು. ವಿವಿಧ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿ ದತ್ತಾಂಶ ಸಂಗ್ರಹಿಸೋದು. ಈ ಡೇಟಾ ಆಧರಿಸಿ ಅಲ್ಲಿಯ ಸ್ಥಳೀಯ ವಿಷಯಗಳನ್ನು ಮುಂದಿಟ್ಟು ಚುನಾವಣೆ ಪ್ರಚಾರ ನಡೆಸೋದು ಕಾಂಗ್ರೆಸ್‌ನ ಲೆಕ್ಕಾಚಾರವಾಗಿದೆ. ತಮ್ಮ ಪ್ರಣಾಳಿಕೆಯಲ್ಲಿನ ಯೋಜನೆಗಳ ಲಾಭವನ್ನು ಸಾಮಾನ್ಯ ಜನರಿಗೆ ಸುಲಭವಾಗಿ ಅರ್ಥ ಮಾಡಿಸಲು ಕಾಂಗ್ರೆಸ್ ಮುಂದಾಗಿದೆ.
5+1+4=10 ಲೆಕ್ಕಾಚಾರ
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಅಧಿಕಾರಕ್ಕೆ ಬರುತ್ತಿದ್ದ ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ ಮತ್ತು ಶಕ್ತಿ ಯೋಜನೆಯಗಳನ್ನು ಜಾರಿಗೆ ತಂದಿದೆ. ಇದಾದ ನಂತರ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಐದರ ಜೊತೆ ರಾಜೀವ್ ಆರೋಗ್ಯಶ್ರೀ ಆರೋಗ್ಯ ಯೋಜನೆಯಡಿ ಬಡವರಿಗೆ 10 ಲಕ್ಷ ರೂ. ವಿಮೆಯ ಗ್ಯಾರಂಟಿ ಘೋಷಿಸಿತ್ತು.
6 ಗ್ಯಾರಂಟಿಗಳ ಜೊತೆ ಹೊಸ 4 ಭರವಸೆ
ಇದೀಗ ಬಿಹಾರ ಚುನಾವಣೆಯಲ್ಲಿ 6 ಗ್ಯಾರಂಟಿಗಳ ಜೊತೆ ಹೊಸ ನಾಲ್ಕು ಭರವಸೆಗಳನ್ನು ತನ್ನ ಪ್ರಣಾಳಿಕೆಯಲ್ಲಿ ಸೇರಿಸಲು ಕಾಂಗ್ರೆಸ್ ಚಿಂತಿಸಿದೆ ಎನ್ನಲಾಗುತ್ತಿದೆ. ಹೊಸ ನಾಲ್ಕು ಭರವಸೆಗಳು ಏನಾಗಿರಬಹುದು ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಮತ್ತೊಂದಡೆ ತೆಲಂಗಾಣದ ಕಾರ್ಯಕರ್ತರನ್ನು ಬಿಹಾರ ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಬಿಹಾರ ಚುನಾವಣೆ ಪೂರ್ವ ಸಮೀಕ್ಷೆ: ಬಿಹಾರಿಗಳು ಲಾಟೀನು ಹಿಡಿತಾರಾ? ಕಮಲ ಮುಡೀತಾರಾ?
ಮಹಿಳಾ ಮತದಾರರ ಮೇಲೆ ಕಣ್ಣು
ಈಗಾಗಲೇ ಮಹಿಳಾ ಮತದಾರರನ್ನು ಸೆಳೆಯಲು 10 ಸಾವಿರ ನೀಡೋದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಇದಕ್ಕಾಗಿ ಕಾಂಗ್ರೆಸ್‌ನಿಂದ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಹೆಚ್ಚು ಚುನಾವಣಾ ಪ್ರಚಾರ ನಡೆಸುವ ಸಾಧ್ಯತೆಗಳಿವೆ. ಇದಕ್ಕಾಗಿ ದೇಶದ ಪ್ರಮುಖ ಕಾಂಗ್ರೆಸ್ ನಾಯಕಿ ಮತ್ತು ಕಾರ್ಯಕರ್ತೆಯರು ಬಿಹಾರಗೆ ಆಗಮಿಸಬಹುದು ಎನ್ನಲಾಗಿದೆ.
ಇದನ್ನೂ ಓದಿ: ಬಿಹಾರ ವಿಧಾನಸಭಾ ಚುನಾವಣಾ ಪೂರ್ವ ಸಮೀಕ್ಷೆ: ಇಬ್ಬರಲ್ಲಿ ಯಾರಿಗೆ ಸ್ಪಷ್ಟ ಬಹುಮತ?