ಈ ಜೀವಿಯಲ್ಲಿದೆ 32 ಮೆದುಳು, 300 ಹಲ್ಲು… ಆದ್ರೂ ಮನುಷ್ಯನ ದೇಹದಿಂದ ರಕ್ತ ಹೀರಿದ್ರೂ ಗೊತ್ತಾಗೋದೆ ಇಲ್ಲ!
ಜಿಗಣೆ ಕಾಟ ಹೇಗಿರುತ್ತೆ ಅಂತ ನಿಮಗೆ ಗೊತ್ತೆ ಇರುತ್ತೆ ಅಲ್ವಾ? ರಕ್ತವನ್ನೇ ಹೀರುವಂತಹ ಈ ಪುಟಾಣಿ ಜೀವಿಗಳ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಈ ಭೂಮಿಯ ಮೇಲೆ ವಿಶಿಷ್ಟ ಜೀವಿಗಳು ಕಂಡುಬರುತ್ತವೆ. ಪ್ರತಿಯೊಂದು ಜೀವಿಯೂ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಪ್ರತಿಯೊಂದು ಜೀವಿಯು ಬದುಕುವ, ತಿನ್ನುವ, ಕುಡಿಯುವ, ಸಂತಾನೋತ್ಪತ್ತಿ ಮಾಡುವ ಪ್ರಕ್ರಿಯೆಯು ಪರಸ್ಪರ ಭಿನ್ನವಾಗಿದೆ. ಈ ಜೀವಿಗಳ ಬಗ್ಗೆ ತಿಳಿದುಕೊಂಡು ಹೋದಂತೆ, ವಿಸ್ಮಯದ ಜಗತ್ತೆ ತೆರೆದುಕೊಳ್ಳುತ್ತೆ.
ಇವತ್ತು ಇಲ್ಲಿ ಮನುಷ್ಯನಿಗೆ ಗೊತ್ತಾಗದಂತೆ ಆತನ ದೇಹದಿಂದ ರಕ್ತ ಹೀರುವಂತಹ ಒಂದು ಜೀವಿಯ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿಯನ್ನು ನೀಡುತ್ತೇವೆ. ನಾವು ಮಾತನಾಡುತ್ತಿರುವ ಜೀವಿಗೆ ಒಂದಲ್ಲ ಎರಡಲ್ಲ ಬರೋಬ್ಬರಿ 32 ಮಿದುಳುಗಳು, 10 ಕಣ್ಣುಗಳು ಮತ್ತು 300 ಹಲ್ಲುಗಳಿವೆ. ಅಂತಹ ವಿಚಿತ್ರ ಜೀವಿ ಯಾವುದು ಅನ್ನೋದನ್ನ ತಿಳಿಯೋಣ ಬನ್ನಿ.
ಬರೋಬ್ಬರಿ 32 ಮೆದುಳುಗಳನ್ನು ಹೊಂದಿರೋ ಪ್ರಾಣಿ
ನಾವಿವತ್ತು ಹೇಳ್ತಾ ಇರೋದು ಲೀಚ್ ಅಥವಾ ಜಿಗಣೆ (Leeches) ಬಗ್ಗೆ. ಜಿಗಣೆ ಬಗ್ಗೆ ನಿಮಗೆ ಗೊತ್ತೆ ಇದೆ. ಮಲೆನಾಡಿನಲ್ಲಿರುವವರಿಗೆ ಜಿಗಣೆ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ, ಯಾಕಂದ್ರೆ ಅಷ್ಟೊಂದು ಕಾಟ ಕೊಡುತ್ತೆ ಜಿಗಣೆಗಳು. ಕಾಲಿಟ್ಟರೆ ಗೊತ್ತಾಗದಂತೆ ಹತ್ತಿ ಬರುವ ಜಿಗಣೆ, ರಕ್ತ ಹಿರಿ ಅದು ದೊಡ್ಡದಾಗಿ ಕೆಳಕ್ಕೆ ಬಿದ್ದು, ಕೈ ಕಾಲಿಂದ ರಕ್ತ ಸುರಿಯುವಾಗಲೇ ಗೊತ್ತಾಗೋದು ಜಿಗಣೆ ಕಚ್ಚಿದೆ ಎಂದು.
ಇಂತಹ ಜಿಗಣೆಯ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿಯನ್ನು ನಾವಿವತ್ತು ನಿಮಗೆ ನೀಡ್ತೀವಿ. ಇದನ್ನ ಕೇಳಿ ನಿಜವಾಗಿಯೂ ನಿಮಗೆ ಅಚ್ಚರಿಯಾಗೋದು ಖಚಿತ. ಅಂತದ್ದೆನಿದೆ ಈ ಜೀವಿಗಳಲ್ಲಿ ಎಂದು ಅಚ್ಚರಿ ಪಡುತ್ತೀರಾ? ಹಾಗಿದ್ರೆ ಈ ವಿಷ್ಯ ನಿಮಗಾಗಿ.
ಮಾನವರು ಅಥವಾ ಪ್ರಾಣಿಗಳು ಎಲ್ಲಾ ಜೀವಿಗಳು ಮಿದುಳುಗಳನ್ನು (brains) ಹೊಂದಿವೆ, ಆದರೆ ಈ ಜಿಗಣೆ ಇದೆಯಲ್ಲ, ಅದು ತನ್ನ ದೇಹದಲ್ಲಿ ಬರೋಬ್ಬರಿ 32 ಮಿದುಳುಗಳನ್ನು ಹೊಂದಿರುವ ಏಕೈಕ ಜೀವಿ ಎಂದು ಹೇಳಲಾಗುತ್ತದೆ. ಆದರೆ, ಇದಕ್ಕೆ 32 ಮಿದುಳು ಇದ್ರೂನು ಅದರಿಂದ ಯಾವುದೇ ವಿಶೇಷ ಪ್ರಯೋಜನ ಇಲ್ಲ, ಆದರೆ ಈ ಸಣ್ಣ ಜೀವಿ ಖಂಡಿತವಾಗಿಯೂ ಮನುಷ್ಯರಿಗೆ ತುಂಬಾನೆ ಹಾನಿಯನ್ನುಂಟು ಮಾಡೋದು ನಿಜಾ.
300 ಹಲ್ಲುಗಳನ್ನು ಹೊಂದಿರುವ ಜೀವಿ
ಮಾಹಿತಿಯ ಪ್ರಕಾರ, ಲೀಚ್ ಗಳು 3 ದವಡೆಗಳನ್ನು ಹೊಂದಿವೆ ಮತ್ತು ಪ್ರತಿ ದವಡೆಯಲ್ಲಿ 100 ಹಲ್ಲುಗಳು ಕಂಡುಬರುತ್ತವೆ. ಈ ರೀತಿಯಾಗಿ, ಅದರ ಬಾಯಿಯಲ್ಲಿ ಬರೋಬ್ಬರಿ 300 ಹಲ್ಲುಗಳಿವೆ. ಈ ಹಲ್ಲುಗಳ ಮೂಲಕ, ಲೀಚ್ ಗಳು ಮಾನವರ ದೇಹದಿಂದ ರಕ್ತವನ್ನು ಸುಲಭವಾಗಿ ಹೀರುತ್ತವೆ.
ಅತ್ಯಂತ ಅಚ್ಚರಿಯ ವಿಷಯವೆಂದರೆ ಲೀಚ್ ತನ್ನ ತೂಕಕ್ಕಿಂತ ಸುಮಾರು 10 ಪಟ್ಟು ಹೆಚ್ಚು ರಕ್ತವನ್ನು ಹೀರುತ್ತದೆ. ಹೌದು, ಜಿಗಣೆ ಸಣ್ಣದು ತಾನೆ ಅದರಿಂದ ಏನಾಗುತ್ತೆ ಅಂತ ಕಡೆಗಣಿಸಬೇಡಿ. ಈ ಪುಟಾಣಿ ಜಿಗಣೆ ಅದರ ಹತ್ತಿಪಟ್ಟು ರಕ್ತವನ್ನು ಹೀರುವ ಸಾಮರ್ಥ್ಯವನ್ನು ಹೊಂದಿದೆ ಅಂದ್ರೆ ನೀವೇ ಯೋಚನೆ ಮಾಡಿ.
ದೇಹವನ್ನು 32 ಭಾಗಗಳಲ್ಲಿ ವಿಂಗಡಿಸಲಾಗಿದೆ
ಲೀಚ್ ದೇಹವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವನ ದೇಹವನ್ನು 32 ಭಾಗಗಳಾಗಿ ವಿಂಗಡಿಸಲಾಗಿದೆ. ಅದರ ದೇಹದ ಪ್ರತಿಯೊಂದು ತುಂಡು ತನ್ನದೇ ಆದ ಮೆದುಳನ್ನು ಹೊಂದಿದೆ. ನಿಜಾ ಹೇಳಬೇಕು ಅಂದ್ರೆ, ಇವು 32 ಮಿದುಳುಗಳಲ್ಲ, ಆದರೆ ಜಿಗಣೆಯ ದೇಹದ ಭಾಗಗಳು. ಸಾಮಾನ್ಯ ದೇಹದಂತೆಯೇ, ಇದು ಕೇವಲ ಒಂದು ಮೆದುಳನ್ನು ಹೊಂದಿದೆ, ಅದನ್ನು 32 ತುಂಡುಗಳಾಗಿ ವಿಂಗಡಿಸಲಾಗಿದೆ. ಲೀಚ್ ಗಳು 10 ಕಣ್ಣುಗಳನ್ನು ಹೊಂದಿವೆ, ಅವುಗಳಿಂದ ಅವು ಕತ್ತಲೆ ಅಥವಾ ಬೆಳಕನ್ನು ಗುರುತಿಸಬಹುದು.