Aero India 2021 : ಸಚಿವ ರಾಜನಾಥ್ ಸಿಂಗ್ ಚಾಲನೆ
ವಿಶ್ವದ ಮೊಟ್ಟಮೊದಲ ಹೈಬ್ರಿಡ್ ಹಾಗೂ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ-2021’ ಯಲಹಂಕ ವಾಯುನೆಲೆಯಲ್ಲಿ ಆರಂಭವಾಗಿದೆ. ಎಚ್‌ಎಎಲ್ ನಿರ್ಮಿತ ಸ್ವದೇಶಿ ವಿಮಾನಗಳ ‘ಆತ್ಮ ನಿರ್ಭರ ಭಾರತ್’ ಹಾಗೂ ಸೂರ್ಯ ಕಿರಣ್- ಸಾರಂಗ್ ವಿಮಾನಗಳ ಜಂಟಿ ಪ್ರದರ್ಶನ ಸೇರಿದಂತೆ ಮೈನವಿರೇಳಿಸುವ ಹಲವು ವೈಶಿಷ್ಟ್ಯಗಳೊಂದಿಗೆ 13ನೇ ಆವೃತ್ತಿಯ ವೈಮಾನಿಕ ಪ್ರದರ್ಶನಕ್ಕೆ ಚಾಲನೆ ದೊರೆತಿದೆ.
(Photo - A. ವೀರಮಣಿ, ಕನ್ನಡಪ್ರಭ)
ವಿಶ್ವದ ಮೊಟ್ಟಮೊದಲ ಹೈಬ್ರಿಡ್ ಹಾಗೂ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ-2021’ಗೆ ಯಲಹಂಕ ವಾಯುನೆಲೆಯಲ್ಲಿ ಚಾಲನೆ
ಎಚ್‌ಎಎಲ್ ನಿರ್ಮಿತ ಸ್ವದೇಶಿ ವಿಮಾನಗಳ ‘ಆತ್ಮ ನಿರ್ಭರ ಭಾರತ್’ ಹಾಗೂ ಸೂರ್ಯ ಕಿರಣ್- ಸಾರಂಗ್ ವಿಮಾನಗಳ ಜಂಟಿ ಪ್ರದರ್ಶನ ಸೇರಿದಂತೆ ಮೈನವಿರೇಳಿಸುವ ಹಲವು ವೈಶಿಷ್ಟ್ಯ
13ನೇ ಆವೃತ್ತಿಯ ವೈಮಾನಿಕ ಪ್ರದರ್ಶನಕ್ಕೆ ರಕ್ಷಣಾ ಸಚಿವ ರಾಜನಾಥ್‌ಸಿಂಗ್ ಚಾಲನೆ
ದೇಶದ ರಕ್ಷಣಾ ಕ್ಷೇತ್ರದ ಸಾಮರ್ಥ್ಯವನ್ನು ವಿಶ್ವದ ಮುಂದೆ ತೆರೆದಿಡಲಿರುವ ವೈಮಾನಿಕ ಪ್ರದರ್ಶನ
ಫೆ.3ರ ಬುಧವಾರ ಬೆಳಗ್ಗೆ 9.30 ಗಂಟೆಗೆ ಯಲಹಂಕ ವಾಯುನೆಲೆಯಲ್ಲಿ ಚಾಲನೆ ಫೆ.7ಕ್ಕೆ ಮುಕ್ತಾಯ
ಕೊರೋನಾ ಪರಿಣಾಮ ಐದು ದಿನಗಳ ವೈಮಾನಿಕ ಪ್ರದರ್ಶನ ಮೂರು ದಿನಕ್ಕೆ ಸೀಮಿತ
ಆತ್ಮನಿರ್ಭಯ ಭಾರತ್ ಕಲ್ಪನೆಯನ್ನು ಬಿಂಬಿಸಲು ಎಚ್‌ಎಎಲ್ ವತಿಯಿಂದ ಅಥವಾ ಸಹಭಾಗಿತ್ವದಲ್ಲಿ ಅಭಿವೃದ್ಧಿ, ಜೋಡಣೆ ಮಾಡಿರುವ ವಿಮಾನಗಳಿಂದಲೇ ಪ್ರತ್ಯೇಕ ವೈಮಾನಿಕ ಪ್ರದರ್ಶನ
ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳೊಂದಿಗೆ ರಕ್ಷಣಾ ಇಲಾಖೆಗೆ ಸಂಬಂಧಿಸಿದಂತೆ ಹಲವು ಮಹತ್ವದ ಒಪ್ಪಂದಗಳಿಗೆ ಏರೋ ಇಂಡಿಯಾ ವೇದಿಕೆಯಾಗುತ್ತಿದೆ.
ಎಲ್‌ಸಿಎ ಟ್ರೈನರ್, ಎಚ್‌ಟಿಟಿ-40, ಹಾಕ್ ಎಂಕೆ-132, ಡು -228, ಐಜೆಟಿ ವಿಮಾನಗಳ ಫಾರ್ಮೆಷನ್ ಸ್ವದೇಶಿ ಸಾಮರ್ಥ್ಯ ಪ್ರದರ್ಶಿಸಲಿದೆ.
ಕೊರೋನಾ ನೆಗೆಟಿವ್ ಪರೀಕ್ಷೆಯೊಂದಿಗೆ ಪ್ರತಿ ದಿನ ವೈಮಾನಿಕ ಪ್ರದರ್ಶನ ವೀಕ್ಷಣಾ ಸ್ಥಳಕ್ಕೆ (ಅಡ್ವಾ) 3 ಸಾವಿರ ಮಂದಿ ಹಾಗೂ ವಸ್ತು ಪ್ರದರ್ಶನ ಮಳಿಗೆಗಳಲ್ಲಿ ದಿನವೊಂದಕ್ಕೆ 15 ಸಾವಿರ ಮಂದಿ ಭೇಟಿ ನೀಡಲು ಮಾತ್ರ ಅವಕಾಶ
ಇದೇ ಮೊದಲ ಬಾರಿಗೆ ವಿಶ್ವದ ಹೆವಿ ಬಾಂಬರ್‌ಗಳಲ್ಲಿ ಒಂದಾದ ಅಮೆರಿಕದ ಬಿ1ಬಿ-ಲ್ಯಾನ್ಸರ್ ಪ್ರದರ್ಶನ ನೀಡಲಿದೆ. ಸೂಪರ್‌ಸಾನಿಕ್ ಹೆವಿ ಬಾಂಬರ್ 23 ಸಾವಿರ ಕೆ.ಜಿ. ಬಾಂಬ್‌ಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. ಏರೋ ಇಂಡಿಯಾದಲ್ಲಿ ಭಾರತ ಸೇರಿ ಇನ್ನಿತರ ದೇಶಗಳ 63 ವಿಮಾನಗಳು ಪ್ರದರ್ಶನಗೊಳ್ಳಲಿವೆ. 42 ವಿಮಾನಗಳು ದಿನದಲ್ಲಿ ಎರಡು ಬಾರಿ ಹಾರಾಟ ನಡೆಸಿ ವೈಮಾನಿಕ ಪ್ರದರ್ಶನ ನೀಡಲಿವೆ. ಡಕೋಟಾ, ಸುಖೋಯ್, ರಫೇಲ್, ಎಲ್‌ಸಿಎಚ್, ಎಲ್‌ಯುಎಚ್, ಜಾಗ್ವಾರ್, ಹಾಕ್ ಸೇರಿ ಇನ್ನಿತರ ಫೈಟರ್ ಜೆಟ್, ಏರ್‌ಕ್ರಾಫ್ಟ್, ಹೆಲಿಕಾಪ್ಟರ್‌ಗಳಿಂದ ಪ್ರದರ್ಶನ