ಇದಪ್ಪಾ ವಿಕ್ಟರಿ ಅಂದ್ರೆ.. 5 ಕೋಟಿ ಬಜೆಟ್‌ನ ಚಿತ್ರ ಚೀನಾದಲ್ಲಿ 1759 ಕೋಟಿ ಗಳಿಸಿದೆ!
ಪ್ರಧಾನಿ ಮೋದಿ ಚೀನಾ ಭೇಟಿ ಸಂದರ್ಭದಲ್ಲಿ, 5 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಒಂದು ಭಾರತೀಯ ಚಿತ್ರದ ಬಗ್ಗೆ ತಿಳಿದುಕೊಳ್ಳೋಣ. ಈ ಚಿತ್ರವನ್ನು ಚೀನಾ ಸೀನ್ ಟು ಸೀನ್ ನಕಲು ಮಾಡಿ ಸುಮಾರು 1759 ಕೋಟಿ ರೂಪಾಯಿಗೂ ಹೆಚ್ಚು ಹಣ ಗಳಿಸಿದೆ.
14

Image Credit : Film
ಚೀನಾದಲ್ಲಿ ರಿಮೇಕ್ ಆದ ಮೊದಲ ಭಾರತೀಯ ಚಿತ್ರ?
2013ರಲ್ಲಿ ಬಿಡುಗಡೆಯಾದ ಮಲಯಾಳಂ ಚಿತ್ರ 'ದೃಶ್ಯಂ' ಬಗ್ಗೆ ಮಾತನಾಡ್ತಿದ್ದೀವಿ. ಜೀತು ಜೋಸೆಫ್ ನಿರ್ದೇಶನದ ಈ ಚಿತ್ರದಲ್ಲಿ ಮೋಹನ್‌ಲಾಲ್, ಮೀನಾ ನಟಿಸಿದ್ದಾರೆ.
24
Image Credit : Film
ಮಲಯಾಳಂ 'ದೃಶ್ಯಂ' ಬಜೆಟ್ ಮತ್ತು ಗಳಿಕೆ ಎಷ್ಟು?
'ದೃಶ್ಯಂ' ಚಿತ್ರದ ಬಜೆಟ್ ಸುಮಾರು 3.5 ಕೋಟಿಯಿಂದ 5 ಕೋಟಿ. ಚಿತ್ರ ವಿಶ್ವಾದ್ಯಂತ 62 ಕೋಟಿಗೂ ಹೆಚ್ಚು ಗಳಿಸಿತು.
34
Image Credit : Film
ಚೀನಾದಲ್ಲಿ 'ದೃಶ್ಯಂ' ರಿಮೇಕ್ ಯಾವಾಗ ಬಿಡುಗಡೆಯಾಯಿತು?
2019 ರಲ್ಲಿ 'ದೃಶ್ಯಂ' ನ ಚೀನೀ ರಿಮೇಕ್ 'ಶೀಪ್ ವಿಥೌಟ್ ಎ ಶೆಫರ್ಡ್' ಬಿಡುಗಡೆಯಾಯಿತು. ಚೆನ್ ಸಿಚೆಂಗ್ ನಿರ್ದೇಶಿಸಿದ ಈ ಚಿತ್ರದಲ್ಲಿ ಕ್ಸಿಯಾವೊ ಯಾಂಗ್, ಟಾನ್ ಝುವೊ, ಜೋನ್ ಚೆನ್ ನಟಿಸಿದ್ದಾರೆ.
44
Image Credit : Film
'ದೃಶ್ಯಂ' ಚೀನೀ ರಿಮೇಕ್ ಎಷ್ಟು ಗಳಿಸಿತು?
'ಶೀಪ್ ವಿಥೌಟ್ ಎ ಶೆಫರ್ಡ್' 2019 ರಲ್ಲಿ ಒಟ್ಟು 199 ಮಿಲಿಯನ್ ಡಾಲರ್ ಗಳಿಸಿತು. ಅಂದರೆ ಭಾರತೀಯ ರೂಪಾಯಿಗಳಲ್ಲಿ ಸುಮಾರು 1758.7 ಕೋಟಿ.
Latest Videos